ಒಂಟಿ ಮನೆಯನ್ನ ಟಾರ್ಗೆಟ್ ಮಾಡಿ ದೋಚಲು ಬಂದಿದ್ದ ದರೋಡೆಕೋರರು ಅಂದರ್.

ಬೆಂಗಳೂರಿನ ತಲಘಟ್ಟಪುರ ಪೊಲೀಸರಿಂದ ಏಳು ಆರೋಪಿಗಳು ಅರೆಸ್ಟ್.

ಒರಿಸ್ಸಾ ಮೂಲದ ಏಳು ಆರೋಪಿಗಳ ಅರೆಸ್ಟ್.

ಶೇಕ್ ಕಲೀಂ,ಮಹಮ್ಮದ್ ನಿನಾಜ್,ಮಹಮ್ಮದ್ ಇಮ್ರಾನ್ ಶೇಕ್,ಸೈಯದ್ ಫೈಜಲ್,ರಾಮ್ ಬಿಲಾಸ್,ಸುನಿಲ್ ಡಾಂಗಿ,ರಜತ್ ಬಂಧಿತ ಆರೋಪಿಗಳು.

ಅವಲಹಳ್ಳಿಯ ಶಾಂತಿನಿವಾಸ ಲೇಔಟ್ ನಲ್ಲಿದ್ದ ಬಂಗಲೆಗೆ ನುಗ್ಗಿದ್ದ ದರೋಡೆಕೋರರು.

ಬಂಗಲೆಯ ಒಳಕ್ಕೆ ನುಗ್ಗಿ ಮನೆದರೋಡೆಗೆ ಮುಂದಾಗಿದ್ದ ದರೋಡೆಕೋರರು.

ಸುತ್ತಿಗೆ, ಕಬ್ಬಿಣದ ರಾಡ್ ಹಿಡಿದು‌ ಮನೆಗೆ ನುಗ್ಗಿದ್ದ ಆಗಂತುಕರು.

ಮನೆಯ ಮಾಲೀಕನ ಮಗ ರಾಹುಲ್ ನ ಮುಂಜಾಗ್ರತೆಯಿಂದ ದರೋಡೆಕೋರರು ಅಂದರ್.

ಮನೆಯಲ್ಲಿದ್ದ ಫ್ರಿಜ್ ಬಾಗಿಲು ಓಪನ್ ಇರೋದನ್ನ ನೋಡಿ ಸಿಸಿ ಟಿವಿ ಚಕ್ ಮಾಡಿದ್ದ ಬಂಗಲೆ ಮಾಲೀಕನ ಮಗ.

ಮೊಬೈಲ್ ಫೋನಿನಲ್ಲೇ ಸಿಸಿ ಟಿವಿಯಲ್ಲಿ ದಾಖಲಾದ ಚಲನವಲನ ನೋಡಿದ್ದ.

ಈ ವೇಳೆ ದರೋಡೆಕೋರರ ಟೀಂ ಮನೆಯ ಒಳಗೆ ಎಂಟ್ರಿಯಾಗಿರೋದು ಖಾತ್ರಿಯಾಗಿತ್ತು.

ತಕ್ಷಣ ಎಚ್ಚೆತ್ತ ರಾಹುಲ್ ದರೋಡೆಕೋರರಿದ್ದ ರೂಂ ಬಾಗಿಲು ಹಾಕಿದ್ದ.

ತಾನೂ ಕೂಡ ಇನ್ನೊಂದು ರೂಂನಲ್ಲಿ ಲಾಕ್ ಹಾಕ್ಕೊಂಡು ಕೂತಿದ್ದ.

ನಂತರ ತಲಘಟ್ಟಪುರ ಪೊಲೀಸರಿಗೆ ಫೋನ್ ಹಾಯಿಸಿದ್ದ.

ತಕ್ಷಣ ಕಾರ್ಯಪ್ರೌರತ್ತರಾದ ಪೊಲೀಸರು ಐವರು ದರೋಡೆಕೋರರನ್ನ ಬಂಧಿಸಿದ್ದರು.

ಕಾಲ್ಕಿತ್ತಿದ್ದ ಇಬ್ಬರು ದರೋಡೆಕೋರರನ್ನ ಕೊಯಿಮುತ್ತೂರಿನಲ್ಲಿ ಬಂಧಿಸಿ ಕರೆತಂದ ಪೊಲೀಸರು.

ತಲಘಟ್ಟಪುರ ಪೊಲೀಸರಿಂದ ಮುಂದುವರಿದ ತನಿಖೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಕ್ರಮವಾಗಿ ಪೆಂಗೋಲಿಯನ್ ಚಿಪ್ಪು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ

Fri Jan 13 , 2023
ಹನುಮಂತನಗರ ಪೊಲೀಸರ ಕಾರ್ಯಾಚರಣೆ ಅಕ್ರಮವಾಗಿ ಪೆಂಗೋಲಿಯನ್ ಚಿಪ್ಪು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ ಕಿರಣ್ ಬಂಧಿತ ಆರೋಪಿ ಬಂಧಿತರಿಂದ 30ಕೆಜಿ ಪೆಂಗೋಲಿಯನ್ ಚಿಪ್ಪು ವಶಕ್ಕೆ ಔಷಧಿ ಹಾಗೂ ಅಲಂಕಾರಿಕ ವಸ್ತುಗಳಿಗೆ ಈ ಪೆಂಗೋಲಿಯನ್ ಚಿಪ್ಪು ಬಳಸಲಾಗುತ್ತೆ ಒಂದು ಕೆಜಿ ಪೆಂಗೋಲಿಯನ್ ಚಿಪ್ಪಿಗೆ 90 ಸಾವಿರ ಬೆಲೆ ಬಾಳುತ್ತೆ ಆರೋಪಿ ಕಿರಣ್ ಬಳಿ 25 ಲಕ್ಷ ಬೆಲೆಬಾಳುವ 30 ಕೆಜಿ ಚಿಪ್ಪು ವಶಕ್ಕೆ ಸುಮಾರು 25 ಕ್ಕೂ ಅಧಿಕ ಪೆಂಗೋಲಿಯನ್ ಗಳನ್ನ […]

Advertisement

Wordpress Social Share Plugin powered by Ultimatelysocial