ಆಜಾನ್ ವಿರುದ್ಧ ನಾಳೆಯಿಂದ ದೇಗುಲಗಳಲ್ಲಿ ಸುಪ್ರಭಾತ ಅಭಿಯಾನ;

 

ಬೆಂಗಳೂರು: ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆರವುಗೊಳಿಸುವಂತೆ ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯಾದ್ಯಂತ ದೇವಾಲಯಗಳಲ್ಲಿ ಸುಪ್ರಭಾತ ಅಭಿಯಾನ ನಡೆಸಲು ಸಿದ್ಧತೆ ನಡೆಸಿವೆ.

ನಾಳೆ ಮುಂಜಾನೆ 5 ಗಂಟೆಗೆ ರಾಜ್ಯದ ಸಾವಿರಕ್ಕೂ ಹೆಚ್ಚು ದೇವಾಲಯಗಳಲ್ಲಿ ದೇವರನಾಮ, ಸುಪ್ರಭಾತ ಹಾಕುವ ಮೂಲಕ ಅಭಿಯಾನ ಆರಂಭವಾಗಲಿದೆ. ಈ ಕುರಿತು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾಹಿತಿ ನೀಡಿದ್ದು, ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆರವುಗೊಳಿಸುವಂತೆ ಸರ್ಕಾರಕ್ಕೆ ಗಡುವು ನೀಡಿದ್ದರು ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಹಾಗಾಗಿ ನಾಳೆಯಿಂದ ದೇವಾಲಯಗಳಲ್ಲಿ ಸುಪ್ರಭಾತ ಅಭಿಯಾನ ಆರಂಭಿಸುತ್ತೇವೆ ಎಂದಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆ, ನಗರ, ಗ್ರಾಮೀಣ ಪ್ರದೇಶಗಳಲ್ಲಿಯೂ ಹಿಂದೂ ಪರ ಸಂಘಟನೆ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ಅಭಿಯಾನ ಆರಂಭಿಸಲಿದ್ದಾರೆ. ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ಭಜನೆ, ಹನುಮಾನ್ ಚಾಲೀಸಾ ಪಠಿಸಲಾಗುವುದು ಎಂದರು.

ನಾವು ಯಾವುದೇ ಧರ್ಮದ ವಿರುದ್ಧ ಹೋರಾಟ ನಡೆಸುತ್ತಿಲ್ಲ. ಆದರೆ ಮಸೀದಿ, ಮಂದಿರ, ಚರ್ಚ್ ಸೇರಿದಂತೆ ಎಲ್ಲೆಡೆ ಧ್ವನಿವರ್ಧಕಗಳನ್ನು ಇಂತಿಷ್ಟೇ ಡೆಸಿಬಲ್ ಗೆ ಸೀಮಿತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಕೋರ್ಟ್ ಆದೇಶವಿದ್ದರೂ ಮಸೀದಿಗಳ ಲೌಡ್ ಸ್ಪೀಕರ್ ಗೆ ಕಡಿವಾಣ ಹಾಕಿಲ್ಲ. ಮುಂಜಾನೆಯಿಂದಲೇ ಆಜಾನ್ ಮೊಳಗಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೋರ್ಟ್ ಆದೇಶ ಪಾಲಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.

ಒಟ್ಟಾರೆ ರಾಜ್ಯದಲ್ಲಿ ಹಿಜಾಬ್, ಹಲಾಲ್, ದೇವಾಲಯಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿವಾದ ಬೆನ್ನಲ್ಲೇ ಇದೀಗ ಆಜಾನ್ ವಿರುದ್ಧ ಹೋರಾಟ ಆರಂಭವಾಗಿದ್ದು, ಮತ್ತೊಂದು ಧರ್ಮ ಸಂಘರ್ಷಕ್ಕೆ ಕಾರಣವಾಗಲಿದೆಯೇ ಕಾದುನೋಡಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾದ ಮತ್ತೊಂದು ಯುದ್ಧನೌಕೆ ಹೊಡೆದುರುಳಿಸಿದ ಉಕ್ರೇನ್ ಡ್ರೋಣ್!

Sun May 8 , 2022
  ಉಕ್ರೇನ್ ಮೇಲೆ ರಷ್ಯಾದ ದಾಳಿ 2 ತಿಂಗಳು ಪೂರೈಸಿದ್ದರೂ ಯುದ್ಧ ನಿಲ್ಲುವ ಮುನ್ಸೂಚನೆ ಕಾಣುತ್ತಿಲ್ಲ. ತಿರುಗೇಟು ನೀಡಲು ಆರಂಭಿಸಿರುವ ಉಕ್ರೇನ್ ಇದೀಗ ರಷ್ಯಾದ ಮೂರನೇ ಯುದ್ಧ ನೌಕೆಯನ್ನು ಹೊಡೆದುರುಳಿಸಿದೆ. ಕಪ್ಪು ಸಮುದ್ರದ ಸ್ನೇಕ್ ದ್ವೀಪದ ಬಳಿ ಸೆರ್ನಾ ಪ್ರಾಜೆಕ್ಟ್‍ ಲ್ಯಾಂಡಿಂಗ್ ಹಡಗನ್ನು ಶಸ್ತ್ರಸಜ್ಜಿತ ಡ್ರೋಣ್ ಗಳು ಹೊಡೆದುರುಳಿಸಿವೆ. ಬೈರಾಕರ್ ಟಿಬಿ2 ಹೆಸರಿನ ಡ್ರೋಣ್ ಸೆರ್ನಾ ಪ್ರಾಜೆಕ್ಟ್‍ ನ ಲ್ಯಾಂಡಿಂಗ್ ಕ್ರಾಫ್ಟ್ ಅನ್ನು ಈ ಬಾರಿ ಹೊಡೆದು ಉರುಳಿಸಲಾಗಿದೆ ಎಂದು […]

Advertisement

Wordpress Social Share Plugin powered by Ultimatelysocial