ದೇಶದ ರೈತರ ಬೆಂಬಲಕ್ಕೆ ಬಿಜೆಪಿ ಸರ್ಕಾರ ನಿಂತಿದೆ:ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಆರ್ ಹುಲಿನಾಯ್ಕರ್

ಬೆಳೆ ಹಾನಿ ಕುರಿತು ಚಾರಿತ್ರಿಕ ಮಹತ್ವಪೂರ್ಣ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ರೈತ ಪರವೆಂದು ಮತ್ತೊಮ್ಮೆ ಸಾಬೀತಾಗಿದೆ.ಈ ಮೂಲಕ ದೇಶದ ರೈತರ ಬೆಂಬಲಕ್ಕೆ ಬಿಜೆಪಿ ಸರ್ಕಾರ ನಿಂತಿದೆ ಎಂದು ಬಿಜೆಪಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಆರ್ ಹುಲಿನಾಯ್ಕರ್ ತಿಳಿಸಿದರು.ತುಮಕೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗಾಗಿ ಅತ್ಯಂತ ಮಹತ್ವಪೂರ್ಣ ನಿರ್ಧಾರಗಳನ್ನು ಪ್ರಕಟಿಸಿದೆ ಇದು ಕರ್ನಾಟಕದಲ್ಲಿ ಈ ವರೆಗೆ ಕಂಡಿರುವ ಒಬ್ಬ ಧೀಮಂತ ಮುಖ್ಯಮಂತ್ರಿ ಎಂಬುದು ಸಾಬೀತಾಗಿದೆ ಎಂದರು.ಹಿಂದಿನ ಸರ್ಕಾರಗಳು ಕೇವಲ ಘೋಷಣೆಗಷ್ಟೇ ತಮ್ಮನ ಸೀಮಿತಗೊಳಿಸಿದರು. ಆದರೆ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ರೈತರ ಪರ ಎಂಬುದು ಜನರ ಅರಿವಿಗೆ ಬರುವಂತಾಗಿದೆ ರಾಜ್ಯದಲ್ಲಿ ಒಟ್ಟು 10 ಲಕ್ಷ ಹೆಕ್ಟೇರ್ ಪ್ರದೇಶದ ರೈತರಿಗೆ 969 ಕೋಟಿ ರೂಪಾಯಿ ಪರಿಹಾರ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರದ ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ಐತಿಹಾಸಿಕ ನಿರ್ಧಾರ ಇದಾಗಿದೆ . ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಪ್ರಾಮಾಣಿಕ ಹೆಜ್ಜೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ಇಡುವ ಮೂಲಕ ಸಾಕಷ್ಟು ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ರೂಪಿಸುವ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಮುಂದಿದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರುನಾಡ ಬಂದ್ ಗೆ "ಲವ್ ಯೂ ರಚ್ಚು" ಚಿತ್ರ ನಿರ್ಮಾಪಕರ ಆಕ್ರೋಶ

Thu Dec 23 , 2021
ಬೆಳಗಾವಿ ಘಟನೆಗೆ ಸಂಭಂದಿಸಿದಂತೆ ಹಲವು ಕನ್ನಡ ಸಂಘಟನೆಗಳು 31ರಂದು ಕರ್ನಾಟಕ ಬಂದ್‌ ಗೆ ಕರೆನೀಡಿದ್ದಾರೆ. ಬಂದ್‌ ಕುರಿತಂತೆ ಹಲವಾರು ಕನ್ನಡ ಸಂಘಟನೆಗಳಲ್ಲಿಯೇ ಒಮ್ಮತ ಇಲ್ಲ .ಆದರೂ ಕೆಲ ಸಂಘಟನೆಗಳು ರಾಜ್ಯ ಸರ್ಕಾರ ಎಂಇಎಸ್ ಸಂಘಟನೆಯನ್ನು 30ರ ಒಳಗಾಗಿ ರಾಜ್ಯದಲ್ಲಿ ನೀಷೇಧ ಮಾಡದಿದ್ದಲ್ಲಿ ಬಂದ್‌ ಮಾಡಲು ಸಿದ್ದತೆ ಮಾಡಿಕೋಂಡಿವೆ. ಲವ್‌ ಯೂ ರಚ್ಚು ಸಿನಿಮಾದ ನಿರ್ಮಾಪಕರ ತಲೆ ನೊವಿಗೆ ಕಾರಣವಾದ ಬಂದ್: ಹೌದು,ಈಗಾಗಲೆ ಹಲವಾರು ಅಡೆತಡೆಗಳನ್ನು ಎದುರಿಸಿದ ಸಿನಿಮಾ ತಂಡ ಇದೆ […]

Advertisement

Wordpress Social Share Plugin powered by Ultimatelysocial