ಬೆಣ್ಣೆ ಹಣ್ಣಿನ ಉಪಯೋಗಗಳು !!!!!!!!

ಪ್ರೋಟೀನ್, ವಿಟಾಮಿನ್, ನಾರಿನಾಂಶ ಮತ್ತು ಖನಿಜಾಂಶಗಳನ್ನು ಹೊಂದಿರುವ ಬೆಣ್ಣೆಹಣ್ಣು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇದು ಅತ್ಯಂತ ಆರೋಗ್ಯ ಪ್ರಯೋಜನಕಾರಿ ಹಣ್ಣು. ಇದು ಹಲವಾರು ರೋಗ ನಿವಾರಣ ಶಕ್ತಿ ಹೊಂದಿದೆ. ಬೆಣ್ಣೆಹಣ್ಣಿನ ಕೆಲವೊಂದು ಆರೋಗ್ಯಕರ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ. 1. ತೂಕ ಹೆಚ್ಚಿಸಲು ಬೆಣ್ಣೆ ಹಣ್ಣಿನಲ್ಲಿ ಕ್ಯಾಲರಿ ಮತ್ತು ಆರೋಗ್ಯಕರ ಕೊಬ್ಬು ಸಮೃದ್ಧವಾಗಿದೆ. ಇದರಿಂದ ಇದು ತೂಕ ಹೆಚ್ಚಿಸಿಕೊಳ್ಳಲು ತುಂಬಾ ಸಹಕಾರಿ ಎಂದು ಪರಿಗಣಿಸಲಾಗಿದೆ. ಈ ಹಣ್ಣು ಕಾರ್ಬ್ ಮತ್ತು ಕೊಬ್ಬಿಗೆ ಒಳ್ಳೆಯ ಮೂಲ. 100 ಗ್ರಾಂ ಬೆಣ್ಣೆ ಹಣ್ಣಿನಲ್ಲಿ 60-80ರಷ್ಟು ಕ್ಯಾಲರಿಯಿದೆ. ಇದರಿಂದಾಗಿ ತೂಕ ಹೆಚ್ಚಿಸಿಕೊಳ್ಳಲು ಆರೋಗ್ಯ ಕ್ರಮದಲ್ಲಿ ಬೆಣ್ಣೆ ಹಣ್ಣನ್ನು ಉಪಯೋಗಿಸಿಕೊಳ್ಳಿ. 2. ಹೃದಯ ಸ್ನೇಹಿ ಬೆಣ್ಣೆಹಣ್ಣು ಬಿ6 ಮತ್ತು ಫೊಲಿಕ್ ಆ್ಯಸಿಡ್ ನ ಸಮೃದ್ಧ ಮೂಲ. ಹೃದಯಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಇವು ತುಂಬಾ ಮುಖ್ಯವೆಂದು ಪರಿಗಣಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಬೆಣ್ಣೆಹಣ್ಣು ತುಂಬಾ ಲಾಭಕಾರಿಯೆಂದು ಪರಿಗಣಿಸಲಾಗಿದೆ. ಪ್ರಕೃತಿದತ್ತ ಕೊಬ್ಬನ್ನು ಹೊಂದಿರುವ ಕಾರಣ ಇದು ಹೃದಯಕ್ಕೆ ಒಳ್ಳೆಯದು ಮತ್ತು ಹೃದಯಾಘಾತವನ್ನು ತಡೆಯುತ್ತದೆ. ಕಣ್ಣಿನ ನೋಟ ಸುಧಾರಿಸುವ ನೈಸರ್ಗಿಕ ಪರಿಹಾರಗಳು 3. ಚರ್ಮಕ್ಕೆ ಒಳ್ಳೆಯದು ಬೆಣ್ಣೆಹಣ್ಣಿನ ಎಣ್ಣೆ ಚರ್ಮದ ರಚನೆ ಮತ್ತು ಗುಣಮಟ್ಟವನ್ನು ಸುಧಾರಿಸಲು ಒಂದು ಅತ್ಯುತ್ತಮ ಎಣ್ಣೆ. ಒಣ ಚರ್ಮದ ಮೇಲೆ ಎಣ್ಣೆ ಹಚ್ಚುವುದರಿಂದ ಒರಟಾದ ಪಟ್ಟೆಗಳನ್ನು ಸುಧಾರಿಸುತ್ತದೆ ಮತ್ತು ಚರ್ಮಕ್ಕೆ ಹೊಳಪು ನೀಡಿ ಸುಂದರವಾಗಿಸುತ್ತದೆ. ಇದರಿಂದಾಗಿ ಬೆಣ್ಣೆಹಣ್ಣಿನ ಎಣ್ಣೆಯನ್ನು ಹಲವಾರು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. 4. ರಕ್ತದ ಸಕ್ಕರೆ ಅಂಶ ನಿಯಂತ್ರಿಸಲು ಬೆಣ್ಣೆ ಹಣ್ಣಿನಲ್ಲಿರುವ ಗರಿಷ್ಠ ಪ್ರಮಾಣದ ಕೊಬ್ಬುವಿನಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ಕೊಬ್ಬು ದೇಹದಲ್ಲಿ ಇನ್ಸುಲಿನ್ ಉತ್ಪಾದನಾ ಮಟ್ಟವನ್ನು ನಿಯಂತ್ರಿಸುತ್ತದೆ. ಕಡಿಮೆ ಸಕ್ಕರೆ ಅಂಶದ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಬೆಣ್ಣೆಹಣ್ಣು ತುಂಬಾ ಲಾಭದಾಯಕ 5. ನೋವು ನಿವಾರಕ ಸಂಧಿವಾತಕ್ಕೆ ಬೆಣ್ಣೆಹಣ್ಣು ನೋವುನಿವಾರಕ. ಇದು ಉರಿಯೂತ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಸಂಧಿವಾತದಿಂದ ಆಗುವ ಕೀಲು ಉರಿಯೂತ ನೋವಿಗೆ ಇದು ಪ್ರಯೋಜನಕಾರಿ. ಕೊಬ್ಬು, ವಿಟಮಿನ್ ಮತ್ತು ಕಬ್ಬಿಣ ಮತ್ತು ಪೊಟಾಸಿಯಂನಂತಹ ಪೌಷ್ಠಿಕಾಂಶಗಳನ್ನು ಹೊಂದಿರುವ ಬೆಣ್ಣೆಹಣ್ಣು ನೋವು ನಿವಾರಕ ಗುಣಗಳನ್ನು ಹೊಂದಿದೆ. ಬೆಣ್ಣೆಹಣ್ಣುಎಣ್ಣೆಯಿಂದ ದೀರ್ಘಕಾಲಿನ ನೋವುಗಳನ್ನು ನಿವಾರಿಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HEALTH TIPS:ಹಣ್ಣು ಸಲಾಡ್ ವಿರುದ್ಧ ಸಂಪೂರ್ಣ ಹಣ್ಣು: ಯಾವುದು ಆರೋಗ್ಯಕರ?

Wed Jan 12 , 2022
ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದು ದೈನಂದಿನ ಆರೋಗ್ಯಕರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ವಾಸ್ತವವಾಗಿ, ಅನೇಕ ಪೌಷ್ಟಿಕತಜ್ಞರು 5:7 ಅನುಪಾತದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಹೊಂದಲು ಶಿಫಾರಸು ಮಾಡುತ್ತಾರೆ. 5 ಹಣ್ಣುಗಳನ್ನು ಸೇರಿಸಲು, ನಾವು ಆಗಾಗ್ಗೆ ಎಲ್ಲವನ್ನೂ ಒಟ್ಟಿಗೆ ತಟ್ಟೆಯಲ್ಲಿ ಎಸೆಯುತ್ತೇವೆ ಮತ್ತು ನಮ್ಮ ಕೆಲಸವನ್ನು ದಿನಕ್ಕಾಗಿ ಮಾಡಲಾಗಿದೆ ಎಂದು ಪರಿಗಣಿಸುತ್ತೇವೆ. ಈ ಕಾರಣಕ್ಕಾಗಿ ಮಾತ್ರವಲ್ಲದೆ, ಅನೇಕ ಜನರು ಸಂಪೂರ್ಣ ಹಣ್ಣುಗಳಿಗಿಂತ ಫ್ರೂಟ್ ಸಲಾಡ್ ಅನ್ನು […]

Advertisement

Wordpress Social Share Plugin powered by Ultimatelysocial