ಗಣದಿನ್ನಿ ಗ್ರಾಮದಲ್ಲಿ ಕೆರೆಯಲ್ಲಿ ಕುಡಿಯುವ ನೀರು ಕಲುಷಿತವಾದರೂ ಕೆರೆಯ ನೀರನ್ನು ಹೊರ ಹಾಕದೆ ಅದೇ ನೀರಿನಲ್ಲಿ ಮತ್ತೆ ಕೆರೆಯನ್ನು ತುಂಬಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಪಿಡಿಒ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗಣ ದಿನ್ನಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಇದ್ದರು ಅದೇ ಗಣದಿನ್ನಿ ಗ್ರಾಮದಲ್ಲಿ ಬಹುದಿನಗಳಿಂದ ಕುಡಿಯುವ ನೀರು ಕೆರೆಯಲ್ಲಿ ನಿಂತಿರುವುದರಿಂದ ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ಇಂತಹ ಕಲುಷಿತ ನೀರನ್ನು ಕುಡಿದು ಗ್ರಾಮದ […]

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾವಿನ ತರಹ. ಅವನು ಯಾವಾಗ ಕಚ್ಚುತ್ತಾನೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಬೀದರ್‌ನ ಹುಮನಾಬಾದ್‌ನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬುಸ್ ಬುಸ್ ತರಹ ಎಂದು ಕೈಯಿಂದ ಹಾವಿನ ಎಡೆ ತೋರಿಸಿ ಹೇಳಿದ ಜಮೀರ್ ಅಹಮದ್ ಖಾನ್, ಯಾವಾಗ ಕಚ್ಚುತ್ತಾನೋ ಗೊತ್ತಿಲ್ಲ ಎಂದು ಏಕವಚನದಲ್ಲೇ ಕಿಡಿಕಾರಿದರು.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ […]

  ದೆಹಲಿಯಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಸಚಿವರು, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಉತ್ತಮ ಸ್ಥಿತಿಯಲ್ಲಿದೆ. ಜನರು ಗಾಬರಿಯಾಗುವ ಅಗತ್ಯವಿಲ್ಲ. ಅದಾನಿ ಸಮೂಹದಲ್ಲಿ ಎಸ್‌ಬಿಐ ಮತ್ತು ಎಲ್‌ಐಸಿ ಹೂಡಿಕೆಯು ಮಿತಿಯಲ್ಲಿದೆ. ಬ್ಯಾಂಕ್ ಮತ್ತು ಎಲ್‌ಐಸಿ ಎರಡೂ ಲಾಭದಾಯಕವಾಗಿದ್ದು, ಹೂಡಿಕೆದಾರರು ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. ತಮಗಿರುವ ಮಾಹಿತಿ ಪ್ರಕಾರ ಅದಾನಿ ಗ್ರೂಪ್‌ನಲ್ಲಿ ಎಲ್‌ಐಸಿ ಮತ್ತು ಎಸ್‌ಬಿಐ ಹೂಡಿಕೆಯು ನಿಗದಿತ ಮಿತಿಯಲ್ಲಿದೆ. ಎಸ್‌ಬಿಐ ಮತ್ತು ಎಲ್‌ಐಸಿ ಎರಡೂ ತಮ್ಮ ವಿವರವಾದ […]

ಎಚ್. ಎಸ್. ಪಾರ್ವತಿ ಅವರು ಆಕಾಶವಾಣಿ ಕಲಾವಿದರಾಗಿ, ವೈವಿಧ್ಯಪೂರ್ಣ ಬರಹಗಾರರಾಗಿ, ಸಾಮಾಜಿಕ ಕಳಕಳಿಯ ಚಿಂತಕರಾಗಿ, ಕರ್ನಾಟಕ ಲೇಖಕಿಯರ ಸಂಘವನ್ನು ಕಟ್ಟಿದವರಲ್ಲಿ ಒಬ್ಬರಾಗಿ, ಅನೇಕ ಪ್ರತಿಭೆಗಳನ್ನು ಬೆಳೆಸಿದವರಾಗಿ ಮತ್ತು ಅದ್ಭುತ ಸಂಘಟಕರಾಗಿ ಪ್ರಸಿದ್ಧರಾಗಿದ್ದವರು.ಎಚ್. ಎಸ್. ಪಾರ್ವತಿ 1934ರ ಫೆಬ್ರವರಿ 3ರಂದು ಜನಿಸಿದರು.‍ ತಂದೆ ಎಚ್‌. ಶ್ರೀನಿವಾಸರಾವ್‌. ತಾಯಿ ಮಹಾಲಕ್ಷ್ಮಮ್ಮ. ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಓದಿದ ಪಾರ್ವತಿ ಅವರು ಬನಾರಸ್ ವಿಶ್ವವಿದ್ಯಾಲಯದಿಂದ ಹಿಂದಿ ಎಂ. ಎ. ಪದವಿ ಪಡೆದರಲ್ಲದೆ, ಉನ್ನತ ಹಿಂದಿ ಪ್ರಾವಿಣ್ಯತಾ […]

  ಕೆ. ಎಸ್. ನಿಸಾರ್ ಅಹಮದ್ ಎಲ್ಲ ರೀತಿಯಲ್ಲೂ ಪ್ರತಿನಿತ್ಯ ಆಪ್ತವಾಗಿ ನೆನಪಾಗುವ ನಮ್ಮ ನಿಜ ‘ನಿತ್ಯೋತ್ಸವ’ದ ಕವಿ. ಜೋಗದ ಸಿರಿಬೆಳಕಿನಲ್ಲಿ ಹಾಡನ್ನು ಹಾಡಿಕೊಂಡಾಗಲೆಲ್ಲಾ ಅದೇನೋ ತುಂಬು ಆನಂದ ಸಿಗುತ್ತದೆ. ಬೆಣ್ಣೆ ಕದ್ದ ನಮ್ಮ ಕೃಷ್ಣ ನೆನೆದಾಗಲೆಲ್ಲ ಆ ಕೃಷ್ಣ ನಮ್ಮ ಕಣ್ಣ ಮುಂದೆಯೇ ಇಲ್ಲೇ ಎಲ್ಲೋ ಓಡಾಡುತ್ತಿರುವಂತೆ ಭಾಸವಾಗುತ್ತದೆ. ಅವರು ಮಾಸ್ತಿಯವರನ್ನು ವರ್ಣಿಸುವಾಗ ಗಾಂಧೀ ಬಜಾರಿನಲ್ಲಿ ಅಂದು ಹೋದಾಗಲೆಲ್ಲಾ ಕಣ್ಣಿಗೆ ಬೀಳುತ್ತಿದ್ದ ಮಾಸ್ತಿಯವರ ಚಿತ್ರ ಕಣ್ಣ ಮುಂದೆ ಬಂದು […]

ಬಿ. ಜಿ. ಎಲ್. ಸ್ವಾಮಿ ಮಹಾನ್ ಸಸ್ಯಶಾಸ್ತ್ರಜ್ಞರಾಗಿ, ಸಂಶೋಧಕರಾಗಿ, ಶಿಕ್ಷಕರಾಗಿ; ಕನ್ನಡ ಸಾಹಿತ್ಯದ ವಿನೋದಪೂರ್ಣ, ವಿಚಾರಪೂರ್ಣ ಹಾಗೂ ವೈಜ್ಞಾನಿಕ ಮಹಾನ್ ಬರಹಗಾರರಾಗಿ ಪ್ರಸಿದ್ಧರಾಗಿದ್ದಾರೆ.ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಾರ್ನರ್ ಅವರಿಂದ ಪ್ರಶಂಸಿತರಾದ ಬಿ.ಜಿ.ಎಲ್. ಸ್ವಾಮಿ (ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ) ಕನ್ನಡದ ಒಬ್ಬ ವಿಶಿಷ್ಟ ಬರಹಗಾರ, ಚಿಂತಕ ಹಾಗೂ ಸಂಶೋಧಕ. ಅವರ ವ್ಯಂಗ್ಯಬರಹಗಳಲ್ಲಾಗಲೀ, ಪ್ರವಾಸ ಕಥನಗಳಲ್ಲಾಗಲಿ, ಸಂಶೋಧನ ಗ್ರಂಥಗಳಲ್ಲಾಗಲಿ ಅವರ ‘ಸ್ವಾಮಿತನ’ ಎನ್ನಬಹುದಾದ ವಿಶಿಷ್ಟತೆ ಎದ್ದುಕಾಣುವಂಥದು. ಸಾಹಿತ್ಯದಲ್ಲಿ ಈ ಬಗೆಯ ಸಾವಯವ […]

  ಇಬ್ರಾಹಿಂ ಸುತಾರ ಕನ್ನಡನಾಡಿನ ಇಂದಿನ ಯುಗದ ಕಬೀರರೆಂಬ ಭಾವ ಮೂಡಿಸಿದ್ದವರು. ಮಹಾಲಿಂಗಪುರದ ಇಬ್ರಾಹಿಂ ಸುತಾರ ವೈದಿಕ, ವಚನ ಹಾಗೂ ಸೂಫಿ ಪರಂಪರೆ ಆಶಯಗಳ ಹದ ಪಾಕವನ್ನು ಭಜನೆ, ಪ್ರವಚನ, ಸಂವಾದಗಳ ಮೂಲಕ ಉಣಬಡಿಸಿದ ಮಹಾನುಭಾವ.ಇಬ್ರಾಹಿಂ ಸುತಾರ 1940ರ ಮೇ 10ರಂದು ಜನಿಸಿದರು. ತಂದೆ ಮಹಾಲಿಂಗಪುರದಲ್ಲಿ ಬಡಗಿ ವೃತ್ತಿ ಮಾಡುತ್ತಿದ್ದ ನಬಿಸಾಹೇಬ್. ತಾಯಿ ಅಮೀನಾಬಿ. ಮನೆಯಲ್ಲಿನ ಬಡತನ ಮೂರನೇ ತರಗತಿಗೆ ಅವರ ಶಿಕ್ಷಣವನ್ನು ನಿಲ್ಲಿಸಿತು. ಊರಿನ ಬಹುಸಂಖ್ಯಾತರ ಉದ್ಯೋಗ ನೇಕಾರಿಕೆಯನ್ನೇ […]

ಧಾರವಾಡ: ಧಾರವಾಡ ಕೃಷಿ ವಿವಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಸಾವನ್ನಪ್ಪಿರುವ ಕಾರಣ ಒಂದು ಕಡೆ ನಿಗೂಢವಾದರೆ ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಇನ್ನೂ ನಿಗೂಢವಾಗಿದೆ. ಆತ ಸಂಪೂರ್ಣ ಬಟ್ಟೆ ಬಿಚ್ಚಿ ನಗ್ನ ಸ್ಥಿತಿಯಲ್ಲಿ ಸಾವಿಗೆ ಶರಣಾಗಿದ್ದಾನೆ. ರೋಹಿತ್ ಸಿ‌ಪಿ‌ ಎಂಬಾತನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ವಿಜಯ ನಗರ ಜಿಲ್ಲೆಯ ಕೊಟ್ಟೂರ ನಿವಾಸಿಯಾಗಿರುವ ರೋಹಿತ್‌, ಬಿಎಸ್ಸಿ ಕಮ್ಯುನಿಟಿ ಸೈನ್ಸ್ ಕೊನೆಯ ವರ್ಷದಲ್ಲಿ ಓದುತ್ತಿದ್ದ. ಆತ […]

ಶರಣ್ ಕನ್ನಡ ಚಲನಚಿತ್ರ ರಂಗದ ಲವಲವಿಕೆಯ ಕಲಾವಿರಲ್ಲೊಬ್ಬರು. ಹಾಸ್ಯನಟರಾಗಿ ಬಂದ ಶರಣ್ ತಾವೇ ಚಿತ್ರ ನಿರ್ಮಿಸುವುದರ ಮೂಲಕ ತಮಗಿಷ್ಟವಾದ ಪಾತ್ರಗಳ ಚಿತ್ರ ನಿರ್ಮಿಸಿ ಗೆದ್ದವರು. ಹಿನ್ನೆಲೆ ಗಾಯಕರಾಗಿಯೂ ಹೆಸರಾದವರು. ಶರಣ್ 1972ರ ಫೆಬ್ರವರಿ 6ರಂದು ಗುಲ್ಬರ್ಗಾದಲ್ಲಿ ಜನಿಸಿದರು. ಶರಣ್ ತಂದೆ ತಾಯಿ ಆಗಿನ ಪ್ರಸಿದ್ಧ ಗುಬ್ಬಿ ನಾಟಕ ಕಂಪನಿಯಲ್ಲಿದ್ದರು. ಪ್ರಖ್ಯಾತ ನಟಿ ಶ್ರುತಿ ಶರಣ್ ಅವರ ಸಹೋದರಿ.ಚಿತ್ರರಂಗಕ್ಕೆ ಬರುವ ಮುನ್ನ ಗಾಯನದಲ್ಲಿ ಆಸಕ್ತಿ ಹೊಂದಿದ್ದ ಶರಣ್ ಒಂದು ವಾದ್ಯಗೋಷ್ಠಿಯ ತಂಡದಲ್ಲಿ […]

‘ಗಾನಕೋಗಿಲೆ’ ಎಂಬ ಮಾತನ್ನು ಬಹಳಷ್ಟು ಗಾಯಕರ ಬಗ್ಗೆ ಹೇಳುತ್ತೇವೆ. ನಮ್ಮ ದೇಶದ ನರನಾಡಿಗಳಲ್ಲಿ ಗಾನದ ಹೃದಯನಾದವನ್ನು ಮಿಡಿದ ಮಹಾನ್ ಗಾಯಕಿ ಲತಾಮಂಗೇಶ್ಕರ್ ಅವರು ಕೋಗಿಲೆಯ ಸರ್ವಶ್ರೇಷ್ಠತೆಗೆ ಅನುರೂಪವಾಗಿದ್ದವರು. ಲತಾ ಮಂಗೇಶ್ಕರ್ ಜನಿಸಿದ್ದು 1929ರ ಸೆಪ್ಟೆಂಬರ್ 28ರಂದು. ಶಾಸ್ತ್ರೀಯ ಸಂಗೀತಕಾರ ಮತ್ತು ರಂಗನಟ ಪಂಡಿತ್ ದೀನನಾಥ ಮಂಗೇಶ್ಕರ್ ಅವರ ಪುತ್ರಿಯಾದ ಲತಾ ಅವರ ಮೊದಲ ಹೆಸರು ‘ಹೇಮಾ’ ಎಂದಿತ್ತು. ತಂದೆಯವರಿಗೆ ತಮ್ಮ ಮಗಳ ಬಹುಮುಖ ಪ್ರತಿಭೆಯ ಕುರಿತು ಅತ್ಯಂತ ಹೆಮ್ಮೆ ತುಂಬಿತ್ತು. […]

Advertisement

Wordpress Social Share Plugin powered by Ultimatelysocial