ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಂಯುಕ್ತ ಆಶ್ರಯದಲ್ಲಿ “ಆಝಾದಿ ಕಾ ಅಮೃತ ಮಹೋತ್ಸವ” ನಡೆಯಿತು.. ಬಾಗಲಕೋಟೆಯ ಇಳಕಲ್‌ ನಗರದಲ್ಲಿ  ನಡೆದ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಡಾ.ಬದ್ರಶೆಟ್ಟಿ ವಹಿಸಿದ್ದರು .. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆರೋಗ್ಯ ಒಂದು ಭಾಗ್ಯ, ಅದನ್ನು ಕಾಪಾಡಿಕೊಂಡು ದೀರ್ಘಕಾಲ ಸು:ಖ, ಸಂತೋಷ ನೆಮ್ಮದಿಯಿಂದ ಬಾಳಬೇಕಾದರೆ, ಕ್ರಮಬದ್ಧವಾದ ವ್ಯಾಯಾಮ, ಆಹಾರ ಹಾಗೂ ಶಾಂತವಾದ ಮನಸ್ಸನ್ನು ಹೊಂದಬೇಕು ಎಂದು ಹೇಳಿದ್ರು … ಆಯುರ್ವೇದ ಭಾರತೀಯರು ಜಗತ್ತಿಗೆ ನೀಡಿದ […]

ಜೆಡಿಎಸ್‌  ಯುವ ಘಟಕದ ರುದ್ರೇಶ್‌ ಮೇಲೆ ಅ.24 ರ ರಾತ್ರಿ ದುಷ್ಕರ್ಮಿಗಳಿಂದ ಮಾರಾಣಾಂತಿಕ ಹಲ್ಲೆ ನಡೆದಿತ್ತು… ಇದಕ್ಕೆ ಸಂಬಂಧಿಸಿದಂತೆ ಆನೇಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು… ಪೊಲೀಸರು ಹಲ್ಲೆ ಮಾಡಿರುವ ಕಿಡಿಗೇಡಿಗಳನ್ನು ಬಂದಿಸಬೇಕು ಎಂದು ಆಗ್ರಹಿಸಿ ಇಂದು ಜೆಡಿಎಸ್ ಮುಖಂಡರಾದ ಕೆ,ಆನೇಕಲ್ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ .ಪಿ.ರಾಜು ಸೇರಿದಂತೆ  ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರು ಆನೇಕಲ್ ಪೋಲಿಸ್ ಠಾಣೆಗೆ ಭೇಟಿ ನೀಡಿ ಪೋಲಿಸರಿಗೆ ಮನವಿ ಸಲ್ಲಿಸಿದರು. ತಾಜಾ […]

ಕೋಲಾರದ ಜಿಲ್ಲೆಯ ಬಂಗಾರಪೇಟೆ ಹಾಗೂ ಕೆಜಿಎಫ್‌ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಗಿಂಡಿಗಳಿಂದ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ಎದುರಾಗಿದ್ದು, ಈ ದುರಸ್ಥಿಗೆ  ಕೋಲಾರದ ಸಂಸದ ಎಸ್‌ ಮುನಿಸ್ವಾಮಿ ಅವರು ರಸ್ತೆಗಳನ್ನು ಮುಚ್ಚಲು ಸ್ವಂತ ಖರ್ಚಿನಲ್ಲಿ ಕಾಂಕ್ರಿಟ್‌ ವ್ಯವಸ್ಥೆ  ಮಾಡಿಸಿದ್ದಾರೆ… ಬಂಗಾರಪೇಟೆ ಹೊರವಲಯದಿಂದ ಕೆಜಿಎಫ್‌ ನಗರದ ವರೆಗಿನ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ,ಇತ್ತೀಚೆಗೆ ಸುರಿದ ಮಳೆಯಿಂದಾಗಿ ಗುಂಡಿಗಳಿಂದ ಅಫಘಾತಗಳು ಸಂಭವಿಸುತ್ತಿದೆ, ಹೀಗಾಗಿ ಎಲ್ಲಾ ಗುಂಡಿಗಳನ್ನ ತಾತ್ಕಾಲಿಕವಾಗಿ ಮುಚ್ಚಿಸಲು […]

ಸಚಿವರಿಲ್ಲದೆ ರಾಜ್ಯದ ಶಕ್ತಿಸೌಧ ಖಾಲಿ ಖಾಲಿಯಾಗಿದೆ ಉಪಚುನಾವಣೆ ಪ್ರಚಾರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಟೀಮ್ ಬ್ಯೂಸಿಯಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ವಿಪಕ್ಷ ನಾಯಕರು ಕಿಡಿಕಾರಿದ್ದಾರೆ….ಕಳೆದ ಹಲವಾರು ದಿನಗಳಿಂದ ವಿಧಾನಸೌಧದ ಕಡೆ ಸಿಎಂ ಬೊಮ್ಮಾಯಿ ಮುಖ ಮಾಡಿಲ್ಲ  ಉಪಚುನಾವಣೆ ಪ್ರಚಾರದಲ್ಲಿಯೇ  ಸಿಎಂ ಅವರು  ಫುಲ್ ಬ್ಯೂಸಿಯಾಗಿದ್ದಾರೆ…ರಾಜ್ಯದ ಎಲ್ಲಾ ಕೆಲಸಗಳನ್ನು ಸೈಡಿಗಿಟ್ಟು ಬೈ ಎಲೆಕ್ಷನ ಪ್ರಚಾರದಲ್ಲಿ  ಸಿಎಂ ನಿರತರಾಗಿದ್ದಾರೆ….ಉಪಚುನಾವಣೆ ನಡೆಯುವ ಕ್ಷೇತ್ರದಲ್ಲೆ ಠಿಕಾಣಿ ಹುಡಿದ್ದಾರೆ..ಇನ್ನು ಸಿಎಂ ಜೊತೆಗೆ ಮಂತ್ರಿಗಳು ಸಹ ಪ್ರಚಾರ ನಡೆಸುತ್ತಿದ್ದಾರೆ.ರಾಜ್ಯದ […]

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಂತರ ಇದು ಕಾಂಗ್ರೆಸ್‌ನ ಎರಡನೇ ಪ್ರಮುಖ ಸಭೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಮತ್ತೊಮ್ಮೆ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಆಗ್ರಹ ಕೇಳಿಬರುವ ಸಾಧ್ಯತೆ ಇದೆ. ನವದೆಹಲಿ (ಅ.‌ 24): ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ  ಪೆಟ್ರೋಲ್  ಮತ್ತು ಡೀಸೆಲ್  ಬೆಲೆಗಳು ಕಡಿಮೆ ಇದ್ದರೂ, ನಿರುದ್ಯೋಗ, ಹಣದುಬ್ಬರ, ಹವಾಮಾನ ವೈಪರೀತ್ಯ ಮತ್ತಿತರ ಸಮಸ್ಯೆಗಳಿಂದ ಜನ ಸಾಮಾನ್ಯ ಕಂಗಲಾಗಿದ್ದರೂ ಪ್ರಧಾನ ಮಂತ್ರಿ […]

ಚುನಾವಣೆಗೆ ಸ್ಪರ್ಧೆ ಮಾಡೋದು ಖಚಿತ. ಆದ್ರೆ ಯಾವ ಕ್ಷೇತ್ರ ಮತ್ತು ಪಕ್ಷ ಅಂತ ಅಂತಿಮಗೊಂಡಿಲ್ಲ. ಶೀಘ್ರದಲ್ಲಿಯೇ ಈ ಕುರಿತು ಅಧಿಕೃತವಾಗಿ ತಿಳಿಸುತ್ತೇನೆ. ಜಿಲ್ಲೆಯ ಎಸ್ ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದೇನೆ….!!! ಚಿತ್ರದುರ್ಗ: ನಟ ಶಶಿಕುಮಾರ್ (Actor Shashikumar) ಮತ್ತೆ ರಾಜಕೀಯಕ್ಕೆ ಕಮ್ ಬ್ಯಾಕ್ ಮಾಡುವ ಸಾಧ್ಯತೆಗಳಿವೆ. ಮುಂದಿನ ವಿಧಾನಸಭಾ ಚುನಾವಣೆಗೆ (Assembly Election)  ಹದಿನೈದು ತಿಂಗಳು ಇರುವಾಗಲೇ ಮತ್ತೆ ತಮ್ಮ ಹಳೆ ಲಯಕ್ಕೆ ಮರಳಲು ಶಶಿಕುಮಾರ್ ತಯಾರಿ ನಡೆಸುತ್ತಿದ್ದಾರೆ. […]

ಸಿದ್ದರಾಮಯ್ಯ ಅವರನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಟೀಕಿಸುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೇ ಅಲ್ಪಸಂಖ್ಯಾತ ನಿಜವಾದ ವಿರೋಧಿ. ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಮುಗಿಸುವುದೇ ಅವರ ಗುರಿಯಾಗಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಂದಗಿ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಹೆಚ್.ಡಿ. ದೇವೇಗೌಡರು ಕೂಡ ಅಲ್ಪಸಂಖ್ಯಾತರ ವಿರೋಧಿಯಲ್ಲ. ಕುಮಾರಸ್ವಾಮಿ ಮಾತ್ರ ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ಬಲಿಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದರು. […]

ಮುಂಬೈ: ಕಳೆದ 12 ತಿಂಗಳಿಂದ ಬಾಲಿವುಡ್​ ಇಂಡಸ್ಟ್ರಿ ಮಾದಕದ್ರವ್ಯ ನಿಯಂತ್ರಣ ಸಂಸ್ಥೆ (ಎನ್​ಸಿಬಿ) ಹಾಗೂ ಜಾರಿ ನಿರ್ದೇಶನಾಲಯ (ಇಡಿ)ದ ಕಣ್ಗಾವಲಿನಲ್ಲಿದೆ. ಬಾಲಿವುಡ್​ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಮಾದಕ ಜಾಲದ ನಂಟು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಎರಡು ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಈ ಎಲ್ಲ ಬೆಳವಣಿಗೆಯಿಂದ ಬಾಲಿವುಡ್​ ಸೆಲೆಬ್ರಿಟಿಗಳಲ್ಲಿ ಭಯ ಶುರುವಾಗಿದೆ. ಯಾವಾಗ? ಯಾರು? ದಾಳಿ ಮಾಡುತ್ತಾರೆಂಬ ಆತಂಕವಿದೆ. ಅದರಲ್ಲೂ ಇತ್ತೀಚೆಗೆ ಮಾದಕ ಜಾಲ ನಂಟು ಬಾಲಿವುಡ್​ಗೂ ಬೆಸೆದುಕೊಂಡಿರುವುದರಿಂದ ಯುವ ಕಲಾವಿದರಲ್ಲಿ […]

ತಾಲಿಬಾನ್‌ ಆಡಳಿತವನ್ನು ಪರಿಶೀಲಿಸಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಅಫ್ಗಾನಿಸ್ತಾನಕ್ಕೆ ಕಳುಹಿಸಿಕೊಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹೇಳಿದರು.ನಗರದಲ್ಲಿ ನಡೆದ ವೆಂಕಟರಾಮು ಅಭಿನಂದನಾ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂದಗಿ, ಹಾನಗಲ್ ಉಪಚುನಾವಣೆ ಸಂಬಂಧ ವಿರೋಧ ಪಕ್ಷದವರು ಬಹಳ ಉದ್ವೇಗದಿಂದ, ವಿವೇಚನೆ ಕಳೆದುಕೊಂಡು ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ತಾಳ್ಮೆ ಕಳೆದುಕೊಂಡಿದ್ದಾರೆ. ಅವರು ರಾಷ್ಟ್ರಮಟ್ಟದ ರಾಜಕೀಯವನ್ನು ಅರ್ಥ ಮಾಡಿಕೊಂಡು ಮಾತನಾಡುತ್ತಿಲ್ಲ. ಅವರ ಭಾಷಣ ಕೇಳಿದ್ದೀರಾ? ಯಾರಾದರೂ ಸಹಿಸುತ್ತಾರೆಯೇ? […]

ನಮ್ಮದು ಕೇವಲ ಮಾತುಗಳಲ್ಲ. ಕೆಲಸ ಮಾಡುತ್ತಿದ್ದೇವೆ. ಮಾತಿನಿಂದ ಹೊಟ್ಟೆ ತುಂಬುವುದಿಲ್ಲ ಎನ್ನುವುದು ಗೊತ್ತಿದೆ. ತಳಮಟ್ಟದಲ್ಲಿ ಮಾತಾಡಿದರೆ ದೊಡ್ಡವರಾಗಲ್ಲ. ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ದೊಡ್ಡತನವಾಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಹಾನಗಲ್ಲ ಕ್ಷೇತ್ರದ ಚಿಕ್ಕೌಶಿ– ಹೊಸೂರು ಗ್ರಾಮದಲ್ಲಿ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರನ್ನಾದರೂ ಆಯ್ಕೆ ಮಾಡಬೇಕಾದರೆ ಜನರು ತುಲನಾತ್ಮಕವಾಗಿ ನೋಡುತ್ತಾರೆ. ಉದಾಸಿ ಆರು ಬಾರಿ ಆಯ್ಕೆಯಾಗಿದ್ದರು ಎಂದರೆ ನಿಮ್ಮ ಹೃದಯದಲ್ಲಿ […]

Advertisement

Wordpress Social Share Plugin powered by Ultimatelysocial