ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಜೆಡಿಎಸ್ ಟಿಕೆಟ್ ನೀಡಿದ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ತಿರುಗೇಟು ನೀಡಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ವಿಚಾರವಾಗಿ ಮಾತನಾಡಲು ಸಿದ್ದರಾಮಯ್ಯ ಯಾವ ದೊಣ್ಣೆ ನಾಯಕ? ಎಂದು ಸಿದ್ದರಾಮಯ್ಯನವರ ವಿರುದ್ಧ ಹೆಚ್‌ ಡಿಕೆ  ಕಿಡಿಕಾರಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂಬುದು ನಮ್ಮ ಪಕ್ಷದ ವಿಚಾರ. ಅದರ ಬಗ್ಗೆ ಸಿದ್ದರಾಮಯ್ಯನವರನ್ನು ಕೇಳಿ ನಾವು ನಿರ್ಧರಿಸಬೇಕಿಲ್ಲ. ನಮ್ಮ ಪಕ್ಷದ ಬಗ್ಗೆ, ನಮ್ಮ ಅಭ್ಯರ್ಥಿಗಳ ಬಗ್ಗೆ […]

ಇನ್ನು ಅರುಣ್ ಸಿಂಗ್ ಮತ್ತು ಯಡಿಯೂರಪ್ಪ ಅವರು ಪ್ರಾಮಾಣಿಕರು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುವುದಿಲ್ಲ ಎಂದಿದ್ದರು. ಆದರೆ ಏನಾಯ್ತು? ಯತ್ನಾಳ್ ಹಾಗೂ ಬೆಲ್ಲದ್ ಅವರು ಏನು ಹೇಳಿದ್ದರು? ಮತ್ತೆ ಕೆಲವರು ಪರೀಕ್ಷೆ ಪಾಸ್ ಮಾಡುವುದಾಗಿ ತಿಳಿಸಿದ್ದರು. ಹೀಗಾಗಿ ಬಿಜೆಪಿ ಯವರ ಮಾತು ನಂಬಲು ಸಾಧ್ಯವಿಲ್ಲ. ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಅಂತ ಗುಡುಗಿದರು.

ಸಿಂಧಗಿ ಮತ್ತು ಹಾನಗಲ್‌ ಉಪಚುನಾವಣೆಯ ದಿನಾಂಕವೂ ಪ್ರಕಟವಾಗಿದೆ .ಯಾವ ಯಾವ ಪಕ್ಷದಿಂದ ಯಾವ ಅಭ್ಯಾರ್ಥಿ ಸ್ಪರ್ಧಿಸಲಿದ್ದಾರೆ ಎಂಬುದು ಕೂಡ ಈಗಾಗಲೇ ಫೈನಲ್‌ ಆಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌  ತಮ್ಮ ಅಭ್ಯಾರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ರೆ ಬಿಜೆಪಿ ,ಮಾತ್ರ ತಮ್ಮ ಅಭ್ಯಾರ್ಥಿಗಳ ಪಟ್ಟಿಯನ್ನು ನಿಗೂಢವಾಗಿ ಇಟ್ಟಿತ್ತು ಆದರೆ ಬಿಜೆಪಿ ಕೂಡ ಈಗಾಗಲೇ ಹಾನಗಲ್‌ ಸಿಂಧಗಿ ಉಪ ಚುನಾವಣೆಯ ಅಭ್ಯಾರ್ಥಿಗಳನ್ನು ಘೋಷಣೆ ಮಾಡಿದೆ . ಕಾಂಗ್ರೆಸ್‌ ನಲ್ಲಿ ಈಗಾಗಲೇ  ಶ್ರೀನಿವಾಸ ಮಾನೆ ಅವರನ್ನು […]

ಲಖನೌ: ಪ್ರಿಯಾಂಕಾ ಗಾಂಧಿ ಬೆನ್ನಲ್ಲೇ ಇತ್ತ ರಾಹುಲ್ ಗಾಂಧಿ ಪ್ರವೇಶಕ್ಕೂ ಉತ್ತರ ಪ್ರದೇಶ ಪೊಲೀಸರು ತಡೆ ಹಾಕಿದ್ದು, ಲಖನೌ ಏರ್ ಪೋರ್ಟ್ ನಲ್ಲೇ ಕಾಂಗ್ರೆಸ್ ನಾಯಕನಿಗೆ ತಡೆವೊಡ್ಡಿದ್ದಾರೆಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಬಳಿಕ ಉತ್ತರ ಪ್ರದೇಶ ಭಾರಿ ಸುದ್ದಿಗೆ ಗ್ರಾಸವಾಗುತ್ತಿದ್ದು, ಉತ್ತರ ಪ್ರದೇಶ ಸರ್ಕಾರ ಕಾಂಗ್ರೆಸ್ ನಾಯಕರಿಗೆ ಲಖೀಂಪುರ್ ಖೇರಿಗೆ ಭೇಟಿ ನೀಡಲು ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಖನೌಗೆ ಆಗಮಿಸಿದ್ದು, ಲಖೀಂಪುರ್ ಖೇರಿಗೆ ಭೇಟಿ […]

ಉತ್ತರ ಪ್ರದೇಶದ ಲಖಿಂಪುರದಲ್ಲಿ ರೈತರ ಮೇಲೆ ನಡೆದಿರುವ ದೌರ್ಜನ್ಯ ದೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದೆ. ದೇಶದ ಅನ್ನದಾತರ ಮೇಲೆ ಉತ್ತರ ಪ್ರದೇಶ, ಹರಿಯಾಣ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ದೌರ್ಜನ್ಯ ನಡೆಸುತ್ತಿವೆ.ಮೂರು ಕರಾಳ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ರೈತರು ಕಳೆದ 10 ತಿಂಗಳಿಂದ ಚಳುವಳಿ ಮಾಡುತ್ತಿದ್ದಾರೆ. ಇಂತಹ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಕಾರು ಹರಿಸಿ ಹತ್ಯೆ […]

ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿರುವ ಯುಪಿಯ ಲಖೀಂಪುರ್‌ ಕೇರಿ ಹಿಂಸಾಚಾರ ಪ್ರಕರಣಕ್ ಸಂಬಂಧ ಸುಮೋಟೋ ದಾಖಲಿಸಿಕೊಳ್ಳದ ಸುಪ್ರೀಂಕೋರ್ಟ್‌ ನಡೆ ಬಗ್ಗೆ ಕಾಂಗ್ರೆಸ್‌ ನಾಯಕ ಹಾಗೂ ಹಿರಿಯ ವಕೀಲ ಕಪಿಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಯೂಟ್ಯೂಬ್‌, ಸಾಮಾಜಿಕ ಮಾಧ್ಯಮಗಳು ಇಲ್ಲದ ಒಂದು ಕಾಲವಿತ್ತು. ಆಗ ಸುಪ್ರೀಂಕೋರ್ಟ್‌ ಮುದ್ರಣ ಮಾಧ್ಯಮಗಳ ಸುದ್ದಿ ಆಧರಿಸಿ ಸುಮೋಟೋ ದಾಖಲಿಸಿಕೊಳ್ಳುತ್ತಿತ್ತು. ಇದು ಧ್ವನಿ ಇಲ್ಲದವರಿಗೆ ಧ್ವನಿಯಾಗಿದೆ. ಇಂದು ನಾಗರಿಕರ ಮೇಲೆ ವಾಹನ […]

ರಾಮ ಹುಟ್ಟಿದ ರಾಜ್ಯ, ರಾವಣ ರಾಜ್ಯವಾಗುತ್ತಿದೆ…! ರಾಮ ಹುಟ್ಟಿದ ಉತ್ತರ ಪ್ರದೇಶ ರಾಜ್ಯ ಈಗ ರಾವಣರ ರಾಜ್ಯವಾಗುತ್ತಿದೆ. ರೈತರನ್ನ ರಕ್ಷಿಸುವ ಬದಲು ಅವರನ್ನ ಸಾಯಿಸುವ ಘಟನೆ ಆ ರಾಜ್ಯದಲ್ಲಿ ನಡೆಯುತ್ತಿದೆ. ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟರೆ ಅವರನ್ನ ತಡೆದು ಗೃಹಬಂಧನದಲ್ಲಿ ಇಡಲಾಗಿದೆ. ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ರೈತರು ಪ್ರತಿಭಟನೆ ಆರಂಭಿಸಿ 10 ತಿಂಗಳಾದರೂ ಅವರಿಗೆ ನ್ಯಾಯ ಕೊಡಲು, ಕಾನೂನಿಗೆ ತಿದ್ದುಪಡಿ ತರಲು ಆಗಿಲ್ಲ. ಇಂತಹ ಸರ್ಕಾರ ನಮಗೆ […]

ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಮತ್ತು ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದ ಕಾಂಗ್ರೆಸ್‌ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ಬಂಧನ ಖಂಡಿಸಿ ಬೆಂಗಳೂರಿನ  ಕೆಪಿಸಿಸಿ ಕಚೇರಿಯಿಂದ ರಾಜಭವನದವರೆಗೆ ಪಂಜಿನ ಮೆರವಣಿಗೆ ನಡೆಸಲು ಮುಂದಾದ ಕಾಂಗ್ರೆಸ್‌ ನಾಯಕರನ್ನು  ಇಂಡಿಯಾನ್‌ ಎಕ್ಸ್ ಪ್ರೆಸ್‌ ವೃತ್ತದ ಬಳಿ ಪೊಲೀಸರು ತಡೆದು ಮೆರವಣಿಗೆಯಲ್ಲಿದ್ದ ಕೈ ನಾಯಕರನ್ನು ವಶಪಡಿಸಿಕೊಂಡಿದ್ದಾರೆ.  ಉತ್ತರಪ್ರದೇಶದಲ್ಲಿ ರೈತರ  ಮೇಲೆ ನಡೆದ ಹಿಂಸಾಚಾರವನ್ನು ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದವರು ಪ್ರತಿಭಟನೆ ಜಾಥಗಳನ್ನು ನಡೆಸುತ್ತಿದ್ದಾರೆ..ಪ್ರತಿಭಟನೆಯಲ್ಲಿ  […]

ಮುಂದಿನ ಒಂದೂವರೆ ವರ್ಷದಲ್ಲಿ ರಾಜ್ಯದ್ಯಂತ ವಿಧಾನಸಭೆ ಚುನಾವಾಣೆಯಲ್ಲಿ ಹೇಗಾದರು ಮಾಡಿ ಗದ್ದುಗೆ ಯನ್ನು ಏರಲೇ ಬೇಕು ಎಂದು ಕಾಂಗ್ರೆಸ್‌ ಮತ್ತು ಜನತಾ ದಳ ಪಕ್ಷವೂ ಪೈಪೋಟಿ ಈಗಿನಿಂದಲೇ ಶುರುವಾಗಿದೆ. 2023ರಲ್ಲಿ ಅಧಿಕಾರವನ್ನು ಹಿಡಿಯಲೇ ಬೇಕು ಎಂದು ಕಾಂಗ್ರೆಸ್‌ ಒಂದು ಕಡೆ ಪ್ಲಾನ್‌ ಮಾಡಿದರೆ ಮತ್ತೊಂದು ಕಡೆ ಜೆಡಿಎಸ್‌ ಪಕ್ಷವು ಕಾರ್ಯಗಾರ ಸರಣಿ ಸಭೆಗಳಿಂದ ಅಹಿಂದ ಮತಗಳನ್ನು ಸೆಳೆಯಲು ಸತತ ಪ್ರಯತ್ನ ನಡೆಸುತ್ತಿದ್ದಾರೆ.ಹಾಗಾದ್ರೆ ಈ ಎರೆಡೂ ಪಕ್ಷಗಳು ಯಾವ ರೀಯಲ್ಲಿ ಮತಗಳನ್ನು […]

ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ ಎಂಬ ಕಾಂಗ್ರೆಸ್ ನವರ ಪಾದಯಾತ್ರೆ ಹಾನಗಲ್ ಮತ್ತು ಸಿಂಧಗಿ ಮತಕ್ಷೇತ್ರಗಳ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಒಂದು ಚುನಾವಣಾ ಗಿಮಿಕ್, ಇಂತಹ ಚುನಾವಣಾ ಗಿಮಿಕ್ ಗಳಿಗೆ ಜನ ಮೋಸ ಹೋಗುವುದಿಲ್ಲ. ತಂತ್ರಗಾರಿಕೆಗಳಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಯಾವಾಗಲೂ ಕೃಷ್ಣೆಯ ನಡಿಗೆ ಸತ್ಯದ ಕಡೆಗೆ ಎಂಬುದನ್ನು ಪರಿಪಾಲಿಸುತ್ತಾ ಬಂದಿದ್ದು ಉಪಚುನಾವಣೆ ಇರಲಿಲ್ಲ […]

Advertisement

Wordpress Social Share Plugin powered by Ultimatelysocial