ಚೆಲುವರಾಯ ತಾಂಡವ…!- ಮಾಜಿ ಸಚಿವ ಚೆಲುವರಾಯ ಸ್ವಾಮಿ ವಾಗ್ದಾಳಿ..!

ರಾಮ ಹುಟ್ಟಿದ ರಾಜ್ಯ, ರಾವಣ ರಾಜ್ಯವಾಗುತ್ತಿದೆ…!

ರಾಮ ಹುಟ್ಟಿದ ಉತ್ತರ ಪ್ರದೇಶ ರಾಜ್ಯ ಈಗ ರಾವಣರ ರಾಜ್ಯವಾಗುತ್ತಿದೆ. ರೈತರನ್ನ ರಕ್ಷಿಸುವ ಬದಲು ಅವರನ್ನ ಸಾಯಿಸುವ ಘಟನೆ ಆ ರಾಜ್ಯದಲ್ಲಿ ನಡೆಯುತ್ತಿದೆ. ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟರೆ ಅವರನ್ನ ತಡೆದು ಗೃಹಬಂಧನದಲ್ಲಿ ಇಡಲಾಗಿದೆ. ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ರೈತರು ಪ್ರತಿಭಟನೆ ಆರಂಭಿಸಿ 10 ತಿಂಗಳಾದರೂ ಅವರಿಗೆ ನ್ಯಾಯ ಕೊಡಲು, ಕಾನೂನಿಗೆ ತಿದ್ದುಪಡಿ ತರಲು ಆಗಿಲ್ಲ. ಇಂತಹ ಸರ್ಕಾರ ನಮಗೆ ಬೇಕಾ ಎಂದು ಜನ ಚಿಂತನೆ ನಡೆಸುತ್ತಿದ್ದಾರೆ. ಬಿಜೆಪಿ ಈಗಲಾದರೂ ಪ್ರಚಾರ ಬಿಟ್ಟು ಜನರ ಕಷ್ಟದ ಬಗ್ಗೆ ಗಮನಹರಿಸಲಿ ಎಂದು ಮಾಜಿ ಸಚಿವ ಚೆಲುವ ರಾಯಸ್ವಾಮಿ ವಾಗ್ವಾದ ನಡೆಸಿದರು.

ಪಕ್ಷದ ಸಂಘಟನೆ ವಿಚಾರವಾಗಿ ಕೇಂದ್ರ ನಾಯಕರು ಎಲ್ಲ ರಾಜ್ಯಗಳ ನಾಯಕರನ್ನ ಕರೆಸಿ ಮಾತನಾಡುತ್ತಿದ್ದು, ಹೀಗಾಗಿ ಸಿದ್ದರಾಮಯ್ಯ ಅವರನ್ನ ಕರೆಸಿಕೊಂಡಿದ್ದಾರೆ. ನಮ್ಮ ಪಕ್ಷ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ತಂತ್ರಗಾರಿಕೆಗಿಂದ ಜನರ ಸಮಸ್ಯೆಗೆ ಸ್ಪಂದಿಸುವ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದ್ದೇವೆ. ನಾವು ಈಗ ಚುನಾವಣೆ ಬಗ್ಗೆ ಗಮನಹರಿಸಿದರೆ, ಈಗ ಕೋವಿಡ್ ನಿಂದ ಆದ ಅನ್ಯಾಯ, ಉತ್ತರ ಪ್ರದೇಶದಲ್ಲಿ ರೈತರ ಹತ್ಯೆ, ರೈತರಿಗೆ ಯೂರಿಯಾ ಸಿಗದಿರುವ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಬೇಕಾಗುತ್ತದೆ. ಹೀಗಾಗಿ ನಾವು ಜನರ ಕಷ್ಟದ ಬಗ್ಗೆ ಗಮನಹರಿಸುತ್ತಿದ್ದೇವೆ.

ಸಿದ್ದು-ಡಿ.ಕೆ.ಶಿ ನಡುವೆ ಭಿನ್ನಭಿಪ್ರಾಯ ಇಲ್ಲ…!

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನಡುವೆ ಭಿನ್ನಭಿಪ್ರಾಯ ಇಲ್ಲ. ಇವರಿಬ್ಬರಲ್ಲಿ ಯಾರಾದರೂ ಬ್ಬರು ಪರಸ್ಪರವಾಗಿ ಟೀಕೆ ಮಾಡಿದ್ದಾರಾ? ಇದು ಕೇವಲ ಊಹಾಪೋಹಗಳ ಸುದ್ದಿ. ಮಾಧ್ಯಮಗಳು ರಾಜ್ಯ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಚಿಂತನೆಗಳ ಬಗ್ಗೆ ಆದ್ಯತೆ ನೀಡಬೇಕು. ಯಾರು ಅಧಿಕಾರಕ್ಕೆ ಬಂದರೆ ರಾಜ್ಯದ ಹಿತ ಕಾಯುತ್ತಾರೆ ಎಂಬುದನ್ನ ಆಲೋಚಿಸಿ ಎಂದು ಚೆಲುವ ರಾಯಸ್ವಾಮಿ ಸುದ್ಧಿಗೊಸ್ಟಿಯಲ್ಲಿ ಮಾತನಾಡಿದ್ರು.

ಪ್ರತಿ ಸಮಾಜದ ನಾಯಕರನ್ನು ನೋಡಲು ಸಾಧ್ಯವಾಗುವುದು ಕಾಂಗ್ರೆಸ್ ನಲ್ಲಿ ಮಾತ್ರ. ಎಲ್ಲ ವರ್ಗದ ಜನರಿಗೆ ಕಾರ್ಯಕ್ರಮ ನೀಡಲು ಕೇವಲ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಆರ್.ವಿ ದೇಶಪಾಂಡೆ, ಎಂ.ಬಿ. ಪಾಟೀಲ್, ಎಸ್.ಆರ್ ಪಾಟೀಲ್, ಈಶ್ವರ್ ಖಂಡ್ರೆ ಹೀಗೆ ಎಲ್ಲ ಸಮುದಾಯದ ಸಮರ್ಥ ನಾಯಕರೂ ಇದ್ದಾರೆ.

ಸಿದ್ದು-ಡಿಕೆಶಿ ಒಂದು ಜಾತಿಗೆ ಸೀಮಿತವಾದ ನಾಯಕರಲ್ಲ

ಪಕ್ಷದ ಸಂಘಟನೆ ವಿಚಾರವಾಗಿ ಪಕ್ಷದ ಒಕ್ಕಲಿಗ ಹಾಗೂ ಲಿಂಗಾಯತ ನಾಯಕರುಗಳು ಸಭೆ ನಡೆಸಿದ್ದಾರೆ. ಅದೇ ರೀತಿ ಇತರೆ ಸಮುದಾಯದ ನಾಯಕರೂ ಸಭೆ ಮಾಡಲಿದ್ದಾರೆ. ಅದರಲ್ಲಿ ತಪ್ಪಿಲ್ಲ. ಸಿದ್ದರಾಮಯ್ಯ ಅವರು, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಅವರು ಈ ರಾಜ್ಯದ ಎಲ್ಲ ವರ್ಗದ ಜನರ ನಾಯಕರು.ಸಿದ್ದರಾಮಯ್ಯ ಅವರು ಕೇವಲ ಕುರುಬ ಅಥವಾ ಹಿಂದ ಸಮುದಾಯಕ್ಕೆ ಸೇರಿದವರಲ್ಲ. ರಾಜ್ಯದ 7 ಕೋಟಿ ಜನರ ನಾಯಕ. ಪಕ್ಷದಲ್ಲಿರುವ ಇತರೆ ನಾಯಕರು ಸಭೆ ಮಾಡಿದರೆ ತಪ್ಪೇನು. ಒಕ್ಕಲಿಗರು, ಲಿಂಗಾಯತ, ದಲಿತ ನಾಯಕರು ಆಯಾ ಸಮಾಜದ ಸಮಸ್ಯೆಯನ್ನ ಶಿವಕುಮಾರ್, ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಚರ್ಚಿಸಿದರೆ ತಪ್ಪೇನು?ಎಂದು ವಾಗ್ವಾದ ನಡೆಸಿದರು.

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್  ಆಗಮನ

Wed Oct 6 , 2021
ನಾಲ್ಕು ದಿನಗಳ ರಾಜ್ಯ ಪ್ರವಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ಬಿಳಿಗಿರಿ ರಂಗನ ಬೆಟ್ಟ, ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ದೆಹಲಿಗೆ ವಾಪಾಸ್ ತೆರಳಲಿದ್ದಾರೆ. ಇಂದಿನಿಂದ 4 ದಿನಗಳ ಕಾಲ ರಾಷ್ಟ್ರಪತಿ ರಾಮನಾಥ ಕೋವಿಂದ್ ಕರ್ನಾಟಕ ಪ್ರವಾಸದಲ್ಲಿ ಇರಲಿದ್ದಾರೆ. ಇಂದಿನಿಂದ ರಾಷ್ಟ್ರಪತಿಗಳ ರಾಜ್ಯ ಪ್ರವಾಸ ಆರಂಭವಾಗಲಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಜ್ಯಪಾಲ ಟಿ.ಸಿ. ಗೆಹ್ಲೋಟ್ ಮತ್ತು […]

Advertisement

Wordpress Social Share Plugin powered by Ultimatelysocial