ಇಸ್ಲಮಾಬಾದ್: ಹಿಂದೂ ಉದ್ಯಮಿಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಘಟನೆ ಸೋಮವಾರ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.ಸಿಂಧ್‌ ನ ಘೋಟ್ಕಿ ಜಿಲ್ಲೆಯ ದಹರ್ಕಿ ಟೌನ್‌ನಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ.ಮೃತಪಟ್ಟವರನ್ನು ಸತಾನ್ ಲಾಲ್ ಎಂದು ಗುರುತಿಸಲಾಗಿದೆ.ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದೌರ್ಜನ್ಯದ ಮುಂದುವರಿದ ಘಟನೆ ಇದಾಗಿದೆ. ಜನವರಿ 4 ರಂದು, ಸಿಂಧ್ ಪ್ರಾಂತ್ಯದ ಅನಾಜ್ ಮಂಡಿಯಲ್ಲಿ ಹಿಂದೂ ಉದ್ಯಮಿ ಸುನೀಲ್ ಕುಮಾರ್ ಅವರನ್ನು ಅಪರಿಚಿತ ಜನರು ಗುಂಡಿಕ್ಕಿ ಕೊಂದಿದ್ದರು.ಜನವರಿ […]

ಸಿಯೋಲ್‌: ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಪತ್ನಿ ರೈ ಸೊಲ್‌ ಜು 5 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿಗೆ ಅವರು ನಾಪತ್ತೆಯಾಗಿದ್ದಾರೆ ಅಥವಾ ಕೊಲೆಯಾಗಿದ್ದಾರೆ ಎಂಬ ಶಂಕೆಗಳಿಗೆ ತೆರೆಬಿದ್ದಿದೆ.ಚಂದ್ರಮಾನ ಹೊಸವರ್ಷದ ರಜಾದಿನದಂದು ನಡೆದ ಸಂಗೀತೋತ್ಸವದಲ್ಲಿ ಕಿಮ್‌, ಪತ್ನಿಯೊಂದಿಗೆ ಹಾಜರಾದರು.ಒಡನೆಯೇ ಜನರು ಜೋರಾಗಿ ಕೂಗಿ ಇಬ್ಬರನ್ನೂ ಸ್ವಾಗತಿಸಿದರು. ಜನರ ಈ ಖುಷಿಗೆ ಇನ್ನೊಂದು ಕಾರಣವೂ ಇದೆ.ಎಲ್ಲ ಸಂಕಷ್ಟಗಳ ನಡುವೆಯೂ ಕಿಮ್‌ ಉತ್ತರ ಕೊರಿಯವನ್ನು ಬಲಿಷ್ಠವಾಗಿ ಮುನ್ನಡೆಸುತ್ತಿದ್ದಾರೆ. ಅದರ […]

  ಶಿವಮೊಗ್ಗ :ಗಾಜನೂರು ಬಳಿ ದಾರಿಗೆ ಅಡ್ಡಬಂದ ಹಾವನ್ನು ತಪ್ಪಿಸಲು ಹೋಗಿ ಕಾರೊಂದು ತುಂಗಾ ಎಡದಂಡೆ ನಾಲೆಗೆ ಉರುಳಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, ಪತಿ ಬದುಕುಳಿದಿದ್ದಾರೆ.ಗುರುವಾರ ಬೆಳಗ್ಗಿನ ಜಾವ 3 ಗಂಟೆಗೆ ಘಟನೆ ನಡೆದಿದ್ದು, ನೀರಿನಲ್ಲಿ ಮುಳುಗಿ ಸುಷ್ಮಾ( 28) ಸಾವನ್ನಪ್ಪಿದ್ದು, ಪತಿ ಚೇತನ್ ಕುಮಾರ್ ಪಾರಾಗಿದ್ದಾರೆ.ಚೇತನ್ ತಾಯಿಯ ಆನಾರೋಗ್ಯದ ವಿಚಾರ ತಿಳಿದು ತಡರಾತ್ರಿಯೇ ದಂಪತಿಗಳು ಶಿವಮೊಗ್ಗದಿಂದ ತುಮಕೂರಿಗೆ ಹೊರಟಿದ್ದರು ಎಂದು ತಿಳಿದು ಬಂದಿದೆ.ನಾಲೆಯ ಪಕ್ಕದ ರಸ್ತೆಯಲ್ಲಿ ತೆರಳುವ ವೇಳೆಗೆ […]

ವಾಷಿಂಗ್ಟನ್‌: ನಿಮ್ಮ ಮನೆಯಲ್ಲಿರುವ ಬೆಕ್ಕುಗಳ ಮೆದುಳಿನ ಗಾತ್ರ ಕಾಡು ಬೆಕ್ಕುಗಳ ಮೆದುಳಿಗಿಂತ ಚಿಕ್ಕದ್ದು. ಅದಕ್ಕೆ ಕಾರಣ ನೀವುಗಳೇ! ರಾಯಲ್‌ ಸೊಸೈಟಿ ಓಪನ್‌ ಸೈನ್ಸ್‌ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಸಂಶೋಧಕರು ಈ ಮಾಹಿತಿ ಬಿಚ್ಚಿಟ್ಟಿದ್ದಾರೆ.ಸಂಶೋಧಕರು ಸಾಕು ಬೆಕ್ಕುಗಳ ಮೆದುಳಿನ ಗಾತ್ರ ಮತ್ತು ಕಾಡು ಬೆಕ್ಕುಗಳ ಮೆದುಳಿನ ಗಾತ್ರವನ್ನು ಹೋಲಿಕೆ ಮಾಡಿ ನೋಡಿದ್ದಾರೆ. ಅದರಲ್ಲಿ ಸಾಕು ಬೆಕ್ಕುಗಳ ಮೆದುಳ ಗಾತ್ರ ಕಡಿಮೆಯಿರುವುದು ಗೊತ್ತಾಗಿದೆ. ಹಾಗೆಯೇ ಕಳೆದ 10 ಸಾವಿರ ವರ್ಷಗಳಲ್ಲಿ ಬೆಕ್ಕುಗಳ ಮೆದುಳಿನ […]

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊಳವಿಗೆ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ರಾಜೇಶ್ (50) ಸಾವನ್ನಪ್ಪಿದ ದು ರ್ದೈವಿ.ರಾಜೇಶ್ ಬುಧವಾರ ರಾತ್ರಿ ರಾಸುಗಳಿಗೆ ಮೇವು ಹಾಕಲು ಹುಲ್ಲು ತರಲು ಮನೆಯಿಂದ ಹೊರಬಂದು ಹುಲ್ಲಿನ ಮೆದೆಯತ್ತ ತೆರಳಿದ ವೇಳೆ ರಾಗಿ ಮೆದೆಬಳಿಯಲ್ಲಿ ಹುಲ್ಲು ಮೇಯುತ್ತಿದ್ದ ಸಲಗವನ್ನು ಕತ್ತಲಿನಲ್ಲಿ ಕಾಣಿಸದೆ ಹುಲ್ಲು ತಲೆ ಮೇಲೆ ಹೊತ್ತು ತರುತ್ತಿದ್ದ […]

 ಮೊದಲೆಲ್ಲಾ ನಮ್ಮಲ್ಲಿ ಹಲವು ಮಂದಿ ಸಾಮಾನ್ಯ ಶೀತ, ನೆಗಡಿಗೆ ವೈದ್ಯರ ಬಳಿ ಹೋಗುವ ಬದಲು ಮನೆಯಲ್ಲೇ ಕಷಾಯ ತಯಾರಿಸಿ ಕುಡಿಯುತ್ತಿದ್ದರು. ಕಷಾಯವನ್ನು ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎಂದು ನಂಬಲಾಗಿದೆ.ಹಾಗಾಗಿಯೇ, ಕಾರೋನಾ ಕಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಕಷಾಯ ಸೇವನೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ಪ್ರತಿ ನಿತ್ಯ ಕಷಾಯ ಕುಡಿಯುವುದರಿಂದ ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಕಷಾಯ ಸೇವಿಸುವಾಗ […]

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ಭೀಕರ ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗುಯಿಯಾಳ ಟೋಲ್ ಗೇಟ್ ಬಳಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಸ್ಥಳಕ್ಕೆ ಐಮಂಗಲ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

  ಚೆನ್ನೈ: ಸದ್ಗುರು ಜಗ್ಗಿ ವಾಸುದೇವ್‌ ಅವರು ನಡೆಸುತ್ತಿರುವ ಕಾವೇರಿ ಕೂಗು ಅಭಿಯಾನದ ಯಶಸ್ಸು ಭಾರತದಾ ದ್ಯಂತ ಹರಡಬೇಕು ಎಂದು ಬಾಲಿವುಡ್‌ ನಟಿ ಜೂಹಿ ಚಾವ್ಲಾ ಹೇಳಿದ್ದಾರೆ.ಇತ್ತೀಚೆಗೆ ತಮಿಳುನಾಡಿನ ಈರೋಡ್‌ ಜಿಲ್ಲೆಯ ಮೇವಾಣಿ ಗ್ರಾಮದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಈ ಮಾತನ್ನು ಹೇಳಿದ್ದಾರೆ.“ಅಭಿಯಾನ ದಿಂದಾಗಿ ರೈತರ ಬದುಕಿನಲ್ಲಿ ಉಂಟಾಗಿ ರುವ ಬದಲಾವಣೆಯನ್ನು ಕಂಡು ನನಗೆ ಸದ್ಗುರು ಬಗ್ಗೆ ಇದ್ದ ಗೌರವ ಇನ್ನಷ್ಟು ಹೆಚ್ಚಿದೆ. ಅವರ ಅಭಿಯಾನಕ್ಕೆ ಅಳಿಲು […]

ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಗಗನಮುಖಿಯಾಗಿ ಸಾಮಾನ್ಯ ಜನರ ಜೇಬನ್ನು ಸುಡುತ್ತಿರುವಾಗ ಮಧ್ಯಮ ವರ್ಗದವರು, ನಿತ್ಯ 10-20 ಕಿ.ಮೀ. ದ್ವಿಚಕ್ರಗಳಲ್ಲಿ ಸಂಚರಿಸುವವರು ಪೆಟ್ರೋಲ್‌ಗೆ ಪರ್ಯಾಯವಾಗಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಮೊರೆಹೋಗುತ್ತಿದ್ದಾರೆ. ಇದು ಅನಿವಾರ್ಯತೆಯಿಂದ ಇಡಲಾಗುತ್ತಿರುವ ಹೆಜ್ಜೆ.ಹಾಗಂತ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬೆಲೆ ಸುಮಾರು 1 ಲಕ್ಷ ರೂ. ಗಿಂತ ಕಡಿಮೆ ಏನಿಲ್ಲ. ಜತೆಗೆ ಪ್ರತಿ 2-3 ವರ್ಷಕ್ಕೆ ಬ್ಯಾಟರಿ ಬದಲಾವಣೆ ಮಾಡಬೇಕು. ಅದಕ್ಕೆ 25-30 ಸಾವಿರ ರೂ. ಕೊಡಬೇಕು..!ಹಾಗಾಗಿ, ಬಹಳಷ್ಟು ಜನರು ಸಾಲ ಮಾಡಿಯಾದರೂ […]

ಖ್ಯಾತ ಉರಗ ರಕ್ಷಕ ವಾವಾ ಸುರೇಶ್‌ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿಬಂದಿದೆ.ನಾಗರ ಹಾವು ರಕ್ಷಣೆ ಮಾಡುವಾಗ ಅದು ಅವರಿಗೆ ಕಚ್ಚಿದ್ದು, ಕೊಟ್ಟಾಯಂ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ವಾವಾ ಸುರೇಶ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ವೆಂಟಿಲೇಟರ್ ಸಹಾಯವಿಲ್ಲದೇ ಅವರು ಉಸಿರಾಡಲು ಆರಂಭಿಸಿದ್ದಾರೆ. ಆದರೆ ವೆಂಟಿಲೇಟರ್ ವ್ಯವಸ್ಥೆಯಲ್ಲಿಯೇ ಅವರನ್ನು ಇಟ್ಟು ಆರೋಗ್ಯದ ಬಗ್ಗೆ ನಿಗಾವಹಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.ಕೆಲವು ಹೊತ್ತು ಅವರು ವೆಂಟಿಲೇಟರ್ ಸಹಾಯವಿಲ್ಲದೇ ಉಸಿರಾಟ ನಡೆಸಿದ್ದಾರೆ. ವೈದ್ಯರು ನೀಡುವ ಸೂಚನೆಗಳಿಗೆ […]

Advertisement

Wordpress Social Share Plugin powered by Ultimatelysocial