ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಹೊಸದಾಗಿ 36 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಅರಸೀಕೆರೆಯಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದರು. ಸಭೆಯಲ್ಲಿ KSRTC ಸ್ಥಳಿಯ ಬಸ್ ಸಂಚಾರ ಮತ್ತು ಗಾರ್ಮೆಂಟ್ಸ್ ಘಟಕಗಳ ತಾತ್ಕಾಲಿಕ ಬಂದ್ ಮಾಡಲು ತೀರ್ಮಾನಿಸಿದ್ದಾರೆ. ಮತ್ತು ಶಾಸಕ ಶಿವಲಿಂಗೇಗೌಡರ ಮನವಿಗೆ ಗಾರ್ಮೆಂಟ್ಸ್ ಘಟಕ ಸ್ಪಂಧಿಸಿದೆ.

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ವೇಳೆ, ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತಿದೆ. ಈವರೆಗೆ ೧ ಲಕ್ಷ ಕಿ.ಮೀ.ವರೆಗಿನ ರಸ್ತೆ ನಿರ್ಮಾಣದಲ್ಲಿ ಇಂಥ ಪ್ಲಾಸ್ಟಿಕ್ ಅನ್ನೇ ಬಳಸಲಾಗಿದೆ. ಈ ವರ್ಷ ೨ ಲಕ್ಷ ಕಿ.ಮೀ. ವರೆಗಿನ ರಸ್ತೆಯನ್ನು ಇಂಥ ಪ್ಲಾಸ್ಟಿಕ್‌ನಿಂದಲೇ ನಿರ್ಮಿಸುವ ಇರಾದೆಯನ್ನು ವಿವಿಧ ರಾಜ್ಯ ಸರ್ಕಾರÀಗಳು ಹೊಂದಿದೆ. ಇಂಥ ರಸ್ತೆಗಳ ಪ್ರತಿ ಒಂದು ಕಿ.ಮೀ. ನಿರ್ಮಾಣಕ್ಕೆ ೯ ಟನ್‌ನಷ್ಟು ಡಾಂಬರ್ ಹಾಗೂ ೧ ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಬೇಕಾಗುತ್ತದೆ. ಹೀಗಾಗಿ, […]

ಗಡಿ ನಿಯಂತ್ರಣ ರೇಖೆ ಸಮೀಪ ಭದ್ರತಾ ಪಡೆಯ ಎನ್ ಕೌಂಟರ್‌ಗೆ ಇಬ್ಬರು ಉಗ್ರರು ಸಾವನ್ನಪ್ಪಿರುವ ಘಟನೆ, ಜಮ್ಮುಕಾಶ್ಮೀರ್ ಬಾರಾಮುಲ್ಲಾದ ನೌಗಾಮ್ ಸೆಕ್ಟರ್‌ನಲ್ಲಿ ನಡೆದಿದೆ. ಸೇನಾ ವಕ್ತಾರರ ಮಾಹಿತಿ ಪ್ರಕಾರ, ಇಂದು ನಸುಕಿನ ವೇಳೆ ನೌಗಾಮ್ ಸೆಕ್ಟರ್ ನ ಗಡಿನಿಯಂತ್ರಣ ರೇಖೆ ಸಮೀಪ ಅನುಮಾನಾಸ್ಪದ ವ್ಯಕ್ತಿಗಳು ಪತ್ತೆಯಾಗಿರುವುದಾಗಿ ತಿಳಿಸಿದೆ. ಈ ವೇಳೆ ಭದ್ರತಾ ಪಡೆ ನಡೆಸಿದ ಹೊಂಚು ದಾಳಿಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಯಿತು ಎಂದು ವಿವರಿಸಿದೆ. ಉಗ್ರರ ಬಳಿ ಇದ್ದ ಎರಡು […]

ಲಡಾಖ್ ಬಿಕ್ಕಟ್ಟಿನ ವಿಷಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾದ ವಿರುದ್ಧ ಅತ್ಯಂತ ಗಟ್ಟಿಯ ನಿಲುವು ತೆಳೆದರು ಇದು ಹೆಮ್ಮೆಯ ಸಂಗತಿ ಎಂದು ಅಮೆರಿಕದ ಸಂಸತ್ ಸದಸ್ಯ ಜಾನ್ ಕೆನಡಿ ಹೇಳಿದ್ದಾರೆ.ಲಡಾಖ್ನಲ್ಲಿ ಬಿಕ್ಕಟ್ಟು ಉಂಟಾಗಿ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಜೂ.೧೫ರಂದು ರಕ್ತಸಿಕ್ತ ಘರ್ಷಣೆ ನಡೆದು ಭಾರತದ ೨೦ ಯೋಧರು ಹುತಾತ್ಮರಾದ ಹಲವು ದಿನಗಳ ಬಳಿಕ ಕೆನಡಿ ಈ ಹೇಳಿಕೆ ನೀಡಿದ್ದಾರೆ. ಜತೆಗೆ ಚೀನಾ ವಿರುದ್ಧದ […]

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊರೋನಾ ಹಾವಳಿ ನಿಯಂತ್ರಣ ತಪ್ಪುತ್ತಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, “ನಾವು ೧೦,೦೦೦ ಹಾಸಿಗೆಗಳಿಗೆ ವ್ಯವಸ್ಥೆ ಮಾಡಿದ್ದೇವೆ. ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರ ತಂಡವು ಇಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ತೆಗೆದುಕೊಂಡ ಕೆಲವು ನಿರ್ಧಾರಗಳಿಗೆ ಮೆಚ್ಚುಗೆಯನ್ನು ಸೂಚಿಸಿದೆ. ಅಲ್ಲದೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆಗಳನ್ನು ಸಹ ನೀಡಿದೆ. “ಕೊರೋನಾವೈರಸ್ ರೋಗಿಗಳಿಗೆ ತೊಂದರೆಯಾಗದAತೆ ಅವರನ್ನು ಕರೆದೊಯ್ಯಲು ಹೆಚ್ಚುವರಿ […]

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ವಲಯವಾರು ರಚಿಸಿ, ಸಚಿವರನ್ನು ವಲಯದ ಉಸ್ತುವಾರಿಯಾಗಿ ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊರೊನಾ ತಡೆಗಟ್ಟಲು ಎಲ್ಲ ರೀತಿಯ ಚರ್ಚೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಎಂಟು ವಲಯಗಳಿವೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಲಾಕ್‌ಡೌನ್ ಬಗ್ಗೆ ಸದ್ಯ ಯಾವುದೇ ಚರ್ಚೆಯಾಗಿಲ್ಲ. ಜಿಲ್ಲಾವಾರು ನಿಗಾ ವಹಿಸಲು ಸೂಚಿಸಿದ್ದಾರೆ. ವಾರಾಂತ್ಯ ಲಾಕ್‌ಡೌನ್ […]

ದೇಶದಲ್ಲಿ ಮಹಾಮಾರಿ ಕೊರೊನಾದಿಂದ ಸರ್ಕಾರಗಳು ವಿಧಿಸಿದ್ದ ಲಾಕ್‌ಡೌನ್‌ನಿಂದ ಕೋಲಾರದಲ್ಲಿ ಟೊಮ್ಯಾಟೋ ಬೆಲೆ ನೆಲೆಕಚ್ಚಿ ರೈತರು ಕಂಗಾಲಾಗಿದ್ದರು. ಆದರೆ ಈಗ ಲಾಕ್‌ಡೌನ್ ಸಡಲಿಕೆ ಮಾಡಿರುವುದರಿಂದ ದಿನೇ ದಿನೇ ಟೊಮ್ಯಾಟೋ ಬೆಲೆ ಏರಿಕೆ ಕಂಡಿದೆ, ಇಂದಿನ ವಡ್ಡಹಳ್ಳಿ ಮಾರ್ಕೇಟ್ ದರ ಪ್ರತಿ ಹದಿನೈದು ಕೆಜಿ ಬಾಕ್ಸ್ಗೆ ೬೦೦ ರಿಂದ ೬೫೦ ರ ವರೆಗೂ ಏರಿಕೆ ಕಂಡಿದ್ದು, ಕಂಗಾಲಾಗಿದ್ದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಒಂದು ಕಡೆ ರೈತರಿಗೆ ಸಂತಸದ ಸುದ್ದಿಯಾದರೆ, ಇನ್ನೊಂದು ಕಡೆ […]

ಮಧುಗಿರಿಯಲ್ಲಿ ನಾಲ್ಕನೇ ವಯಸ್ಸಿನಲ್ಲಿಯೇ ಪೋರನೊಬ್ಬ ವಿಶ್ವಪ್ರಸಿದ್ದ ಏಕಶಿಲಾ ಬೆಟ್ಟ ಏರಿ ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ಗ್ರಾಂಡ್ ಮಾಸ್ಟರ್ ಫಾರ್ ಟ್ರಕ್ಕಿಂಗ್ ದಿ ಮಧುಗಿರಿ ಪೋರ್ಟ್ ಹಿಲ್ ಎಂದು ದಾಖಲೆ ಮಾಡಿದ್ದಾನೆ. ಕಮಲೇಶ್ ರವರ ಪುತ್ರ ಪೂರ್ವಿಕ್. ಕೆ ಸುಂಕು ತನ್ನ ನಾಲ್ಕನೇ ವಯಸ್ಸಿನಲ್ಲಿ ಮಧುಗಿರಿ ಬೆಟ್ಟವನ್ನು ಪೂರ್ತಿ ಹತ್ತಿ ಏಷಿಯಾ ಬುಕ್ ಆಫ್ ರೆಕಾಡ್ಸ್ನಲ್ಲಿ ದಾಖಲೆ ಮಾಡಿದ್ದಾನೆ ಹಾಗೂ ಭಗವದ್ಗೀತೆಯ ಮತ್ತು ಹನುಮಾನ್ ಚಾಲಿಸಾದ ಕೆಲವು […]

ನನ್ನ ಸರ್ಕಾರಿ ಅಧಿಕೃತ ಕಚೇರಿಯ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಇಂದಿನಿAದ ಶುಕ್ರವಾರ ಸಂಜೆವರೆಗೂ ಸರ್ಕಾರಿ ಗೃಹ ಕಚೇರಿಯಲ್ಲಿಯೇ ಕಾರ್ಯನಿರ್ವಹಿಸಲಿದ್ದೇನೆ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಾರ್ವಜನಿಕರು, ಹಿತೈಷಿಗಳು ನೇರವಾಗಿ ಬಂದು ಭೇಟಿಯಾಗದೆ, ದೂರವಾಣಿ ಮೂಲಕ ಸಂಪರ್ಕಿಸಬೇಕೆAದು ವಿನಂತಿಸಿದ್ದಾರೆ. ವಿಕಾಸಸೌಧದಲ್ಲಿರುವ ರೇಣುಕಾಚಾರ್ಯ ಕಚೇರಿಯ ಆಪ್ತ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಕಾಲು ನೋವಿನ ಚಿಕಿತ್ಸೆಗಾಗಿ […]

ಬೆಂಗಳೂರಿನಲ್ಲಿ ಕೊರೊನಾ ದೊಡ್ಡಮಟ್ಟದಲ್ಲಿ ಸ್ಫೋಟವಾಗಿದೆ. ಜನ ಭಯಗೊಂಡು ಬೆಂಗಳೂರು ಬಿಡುತ್ತಿದ್ದಾರೆ. ಸರ್ಕಾರ ಅವರಿಗೆ ವಿಶ್ವಾಸ ತುಂಬುವ ಕೆಲಸ ಮಾಡಬೇಕಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸುರಿನಲ್ಲಿ ಮಾತನಾಡಿದ ಅವರು, ಜನರಿಗೆ ಊಟ, ಕೆಲಸ ಮತ್ತು ಹಣ ನೀಡಬೇಕಿತ್ತು. ಸರ್ಕಾರ ಆ ಕೆಲಸ ಮಾಡಲಿಲ್ಲ. ಜನ ಇದರಿಂದ ಬೆಂಗಳೂರು ಬಿಡುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ವೆಚ್ಚ ಮಾಡಿರುವ ಹಣದ ಲೆಕ್ಕ ಕೊಡಬೇಕು. ಅಧಿಕಾರಿಗಳಿಂದ ನನ್ನ ಬಳಿಗೆ ದಾಖಲೆ ಕಳಿಸಿ. ನಾನೇ […]

Advertisement

Wordpress Social Share Plugin powered by Ultimatelysocial