ಸದ್ದು ಮಾಡುತ್ತಿದೆ “ಡೈಮಂಡ್ ಕ್ರಾಸ್”ನ ಟ್ರೇಲರ್.

ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ ಕಿಚ್ಚ ಸುದೀಪ.ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ” ಡೈಮಂಡ್ ಕ್ರಾಸ್” ಚಿತ್ರದ ಟ್ರೇಲರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರಿಂದ ಅನಾವರಣವಾಯಿತು.

ಟ್ರೇಲರ್ ನಲ್ಲಿ ಕಲಾವಿದರ ಅಭಿನಯ ಗೊತ್ತಾಗುತ್ತಿಲ್ಲ. ಅದಕ್ಕೆ ಸಿನಿಮಾ ನೋಡಬೇಕು. ಆದರೆ ತಂತ್ರಜ್ಞರ ಕೈಚಳಕ ಎದ್ದು ಕಾಣುತ್ತಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಇನ್ನೂ ನಾಗತಿಹಳ್ಳಿ ಸರ್ ನನಗೆ ವಿಷ್ಣುವರ್ಧನ್ ಅವರ ಜೊತೆ ನಟಿಸಲು ಅವಕಾಶ ಕೊಟ್ಟವರು. ಅವರಿಗೆ ನನ್ನ ಅನಂತ ಧನ್ಯವಾದ ಎಂದರು ಕಿಚ್ಚ ಸುದೀಪ್.

ನಾನು ಒಂದು ಫೋನ್ ಮಾಡಿ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಕೊಡಬೇಕು ಎಂದು ಕೇಳಿದೆ ಅಷ್ಟೇ. ಆಯ್ತು ಅಂತ ಬಂದಿದ್ದಾರೆ ಕಿಚ್ಚ ಸುದೀಪ್. ಅವರಿಗೆ ಮೊದಲು ಧನ್ಯವಾದ. ಸುದೀಪ್ ಚಿತ್ರರಂಗದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದಿರುವ ವ್ಯಕ್ತಿ. These are one https://clickmiamibeach.com/ of the best ways that online casinos compensate their customers in return for their loyalty. ಅಂತಹವರು ಈ ಟ್ರೇಲರ್ ಬಿಡುಗಡೆ ಮಾಡಿದ್ದು ಸಂತೋಷ. ಈ ಚಿತ್ರದ ನಿರ್ದೇಶಕ ರಾಮ್ ದೀಪ್ ನನ್ನ ಅಕ್ಕನ ಮಗ.‌ ಸಂಗೀತ ನಿರ್ದೇಶಕ ಲೇಖನ್ ನನ್ನ ತಂಗಿಯ ಮಗ. ಚಿತ್ರದಲ್ಲಿ ಅಭಿನಯಿಸಿರುವ ಹಾಗೂ ಕಾರ್ಯನಿರ್ವಹಿಸಿರುವ ಬಹುತೇಕರು ನಮ್ಮ ಟೆಂಟ್ ಸಿನಿಮಾ ಶಾಲೆಯವರು. ಎಲ್ಲರ ಪ್ರಯತ್ನದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು ನಾಗತಿಹಳ್ಳಿ ಚಂದ್ರಶೇಖರ್.

“ನನ್ನ ಲೈಫಲಿ” ಚಿತ್ರದ ನಂತರ ಈ ನಿರ್ದೇಶಿಸಿದ್ದೇನೆ. ಸೈಬರ್ ಕ್ರೈಮ್ ಕಥಾಹಂದರದ ಸಿನಿಮಾ ಇದು.
ಈಗಿನ ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಹಾಗೂ ಕೆಟ್ಟದ್ದಕ್ಕೆ ಹೇಗೆ ಬಳಸಿಕೊಳ್ಳಬಹುದು? ಎಂಬುದನ್ನು ಚಿತ್ರದಲ್ಲಿ ತೋರಿಸಲು ಹೊರಟ್ಟಿದ್ದೇನೆ. ಸದ್ಯದಲ್ಲೇ ತೆರೆಗೆ ಬರಲಿದೆ ಎಂದರು ನಿರ್ದೇಶಕ ರಾಮ್ ದೀಪ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಣವ್ ಸೂರ್ಯ ಅಭಿನಯದ ವಿಭಿನ್ನ ಕ್ಲೈಮ್ಯಾಕ್ಸ್ ಅನ್ನು "ಕಂಡ್ಹಿಡಿ ನೋಡನ"ಅಂತಿದ್ದಾರೆ ನಾಗೇಂದ್ರ ಅರಸ್.**

Sun Apr 24 , 2022
“ಸೈಕೋ ಶಂಕರ” ಮ‌ೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಪ್ರಣವ ಸೂರ್ಯ ನಾಯಕರಾಗಿ ನಟಿಸಿರುವ, ನಾಗೇಂದ್ರ ಅರಸ್ ನಿರ್ದೇಶನದ “ಕಂಡ್ಹಿಡಿ ನೋಡನ” ಚಿತ್ರದ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಚಿತ್ರತಂಡ ಮಾಧ್ಯಮದ ಮುಂದೆ ಚಿತ್ರದ ಕುರಿತು ಮಾತನಾಡಿತ್ತು. ನಾನು ಪ್ರಣವ್ ಸೂರ್ಯ ಅವರ ಮ್ಯಾನ್ ಲಿಯೋ ಸ್ಟುಡಿಯೋದಲ್ಲಿ ಹೀಗೆ ಮಾತನಾಡುತ್ತಿರುವಾಗ ಆರಂಭವಾದ ಚಿತ್ರವಿದು. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿದೆ‌. ಚಿತ್ರದಲ್ಲಿ ಮೂರು ತಿರುವುಗಳಿದೆ. ಯಾರು ಊಹಿಸಲಾಗದ ಕ್ಲೈಮ್ಯಾಕ್ಸ್ ‌ಸಹ ಇದೆ. ಚಿತ್ರ ಮೇ ನಲ್ಲಿ […]

Advertisement

Wordpress Social Share Plugin powered by Ultimatelysocial