2023ರಲ್ಲಿ ಪ್ರಭಾಸ್‌ರದ್ದೇ ಹವಾ ಅಂತಿದ್ದಾರೆ ‘ಡಾರ್ಲಿಂಗ್‌’ ಫ್ಯಾನ್ಸ್‌

 

ನಟ ಪ್ರಭಾಸ್ ಅವರಿಗೆ ಇಂದು (ಅ.23) ಹುಟ್ಟುಹಬ್ಬದ ಸಂಭ್ರಮ. ಆದರೆ ಈ ಬಾರಿ ಜನ್ಮದಿನವನ್ನು ಅವರು ಸೆಲೆಬ್ರೇಟ್ ಮಾಡಿಕೊಳ್ಳುತ್ತಿಲ್ಲ. ಕಾರಣ, ಈಚೆಗಷ್ಟೇ ಅವರ ದೊಡ್ಡಪ್ಪ, ಹಿರಿಯ ನಟ ಕೃಷ್ಣಂ ರಾಜು ಅವರು ನಿಧನರಾಗಿದ್ದರು. ಆ ದುಃಖದಿಂದ ಪ್ರಭಾಸ್ ಕುಟುಂಬ ಇನ್ನೂ ಹೊರಬಂದಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮ ಮುಗಿಲುಮುಟ್ಟಿದೆ. ಲಕ್ಷಾಂತರ ಅಭಿಮಾನಿಗಳು, ಸಿನಿಮಾ ತಾರೆಯರು ಪ್ರಭಾಸ್‌ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಈ ಮಧ್ಯೆ 2023ರಲ್ಲಿ ಪ್ರಭಾಸ್‌ರದ್ದೇ ಹವಾ ಎಂದು ‘ಡಾರ್ಲಿಂಗ್‌’ ಅಭಿಮಾನಿಗಳು ಹೇಳುತ್ತಿದ್ದಾರೆ. ಅವರು ಹೀಗೆ ಹೇಳುವುದಕ್ಕೂ ಕಾರಣ ಇದೆ.ಈ ವರ್ಷ ತೆರೆಕಂಡ ಪ್ರಭಾಸ್ ಅವರ ರಾಧೆ ಶ್ಯಾಮ್ ಸೋಲನ್ನು ಕಂಡಿದೆ. ಅದಕ್ಕೂ ಹಿಂದೆ ಬಂದಿದ್ದ ‘ಸಾಹೋ’ ಕೂಡ ಫ್ಯಾನ್ಸ್‌ಗೆ ಅಷ್ಟಾಗಿ ರುಚಿಸಿರಲಿಲ್ಲ. ಸದ್ಯ ಪ್ರಭಾಸ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಒಂದು ಭರ್ಜರಿ ಗೆಲುವಿಗಾಗಿ ಅವರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಸದ್ಯ ಅವರ ಸಿನಿಮಾಗಳು 2023ರಲ್ಲಿ ಒಂದೊಂದಾಗಿಯೇ ರಿಲೀಸ್ ಆಗಲಿವೆ. ಈಗಾಗಲೇ ಎರಡು ಸಿನಿಮಾಗಳು ರಿಲೀಸ್ ಡೇಟ್ ಘೋಷಣೆ ಆಗಿವೆ.ಸುಮಾರು 500 ಕೋಟಿ ರೂ. ಬಜೆಟ್‌ನಲ್ಲಿ ‘ಆದಿಪುರುಷ್’ ಸಿನಿಮಾವನ್ನು ಮಾಡಲಾಗಿದೆ. ಜನವರಿ 12ರಂದು ತೆರೆಗೆ ಬರಲಿರುವ ಈ ಸಿನಿಮಾವು 3ಡಿ ರೂಪದಲ್ಲಿ ಸಿದ್ಧವಾಗಿದ್ದು, ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ಈಚೆಗೆ ರಿಲೀಸ್ ಆಗಿರುವ ಟೀಸರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇದ್ದರೂ, ‘ಆದಿಪುರುಷ್’ ಮೇಲೆ ದೊಡ್ಡ ನಿರೀಕ್ಷೆ ಇರುವುದಂತೂ ಸುಳ್ಳಲ್ಲ.ಪ್ರಭಾಸ್ & ಪ್ರಶಾಂತ್ ನೀಲ್ ಕಾಂಬಿನೇಷನ್‌ನ ‘ಸಲಾರ್‌’ ಮೇಲೆ ಫ್ಯಾನ್ಸ್ ದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ. ಇದು ಕೂಡ ಬಹುಭಾಷೆಯಲ್ಲಿ ತೆರೆಗೆ ಬರಲಿದ್ದು, ಭರ್ಜರಿ ಆಕ್ಷನ್ ಸಿನಿಮಾದ ಹೈಲೈಟ್. ಹೊಂಬಾಳೆ ಫಿಲ್ಮ್ಸ್ ಇದಕ್ಕೆ ಹಣ ಹಾಕಿದ್ದು, ‘ಕೆಜಿಎಫ್’ಗೆ ಕೆಲಸ ಮಾಡಿದ ತಂಡವೇ ಇಲ್ಲೂ ಕೆಲಸ ಮಾಡುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯ ಜಿಲ್ಲೆಯ ಜೆಡಿ ಎಸ್ ಮುಖಂದ ರಾಮಕೃಷ್ಣ ಕೂಡ ಕಾಂಗ್ರೆಸ್ ಸೇರ್ಪಡೆಗೆ ಆಗಮನ.

Mon Jan 9 , 2023
ಹೊಸಬರು ಹಳಬರು ಎನ್ನದೆ ಜೊತೆ ಯಲ್ಲಿ ಪಕ್ಷ ಸಂಘಟನೆ ಪಕ್ಷ ದಲ್ಲಿ ಯಾರೂ ಮುಖಂಡರಿಲ್ಲ, ಎಲ್ಲಾ ಕಾರ್ಯಕರ್ತರು ಕಾರ್ಯಕರ್ತರ ಸ್ಥಾನ ಯಾರೂ ಬದಲಿಸಲು ಸಾಧ್ಯ ಇಲ್ಲ ಬೆಲೆ ಏರಿಕೆ ಇಂದ‌ ದಿನ. ಪಿಕ್ ಪ್ಯಾಕೆಟ್ ನಡೀತಿದೆ ಅದಾಯ ಡಬಲ್ ಮಾಡ್ತಿವಿ ಎಂದಿದ್ರು ಕರೋನ ಸಮಯದಲ್ಲಿ ಸಾವಿರಾರು ಮಕ್ಕಳು, 64ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸದಿಂದ ಹೊರಗೆ ಬಂದಿದ್ದಾರೆ ಅಡುಗೆಯ ಎಣ್ಣೆ 120 ರೂಪಾಯಿ ಆಗಿದೆ, ಸಿಲಿಂಡರ್ ಬೆಲೆ ಬಗ್ಗೆ ನಿಮಗೆ ಗೊತ್ತಿದೆ ನಾಡಿದ್ದು […]

Advertisement

Wordpress Social Share Plugin powered by Ultimatelysocial