ದೀಪಾವಳಿಗೆ ತಲೈವಾ ರಜನಿಯ ‘ಅಣ್ಣಾತ್ತೆ’ ಪಟಾಕಿ..!!

ಸೂಪರ್‌ಸ್ಟಾರ್‌ ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’ ಚಿತ್ರದ ಟ್ರೈಲರ್‌ ಯೂಟ್ಯೂಬ್‌ನಲ್ಲಿ ಬುಧವಾರ ಸಂಜೆ 6 ಗಂಟೆಗೆ ಬಿಡುಗಡೆಯಾಗಿತ್ತು. ರಜನಿಕಾಂತ್‌ ಅಂಗಿ, ಪಂಚೆಯಲ್ಲಿ ಕಾಣಿಸಿಕೊಂಡು ಮಾಸ್‌ ಲುಕ್‌ ನೀಡಿದ್ದಾರೆ.ಟ್ರೈಲರ್‌ ನೋಡಿದರೆ ಇದೊಂದು ಪಕ್ಕಾ ಕೌಟುಂಬಿಕ ಸಿನಿಮಾದಂತೆ ಕಾಣುತ್ತದೆ. ಹಳ್ಳಿಯ ಕಥಾ ಹಂದರ ಇರುವ ಈ ಸಿನಿಮಾದಲ್ಲಿ ಕೀರ್ತಿ ಸುರೇಶ್‌ ತಂಗಿ ಪಾತ್ರದಲ್ಲಿ ನಟಿಸಿದ್ದಾರೆ. ರಜನಿಯ ವಿಭಿನ್ನ ಸ್ಟೈಲ್‌ಗೆ ಅಭಿಮಾನಿಗಳು ಫಿದಾ ಆಗಿರುವುದು ಸುಳ್ಳಲ್ಲ. ನವೆಂಬರ್ 4 ರಂದು ದೀಪಾವಳಿ ಹಬ್ಬಕ್ಕೆ ‘ಅಣ್ಣಾತ್ತೆ’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಸನ್‌ ಪಿಕ್ಚರ್ಸ್‌ನ ಕಲಾನಿಧಿ ಮಾರನ್ ನಿರ್ಮಿಸುತ್ತಿದ್ದು, ನಿರ್ದೇಶಕ ಶಿವಾ ಅವರು ನಿರ್ದೇಶಿಸುತ್ತಿದ್ದಾರೆ. ನಯನತಾರಾ, ಕೀರ್ತಿ ಸುರೇಶ್, ಖುಷ್ಬೂ, ಮೀನಾ ಹಾಗೂ ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

11 ಕ್ರೀಡಾಪಟುಗಳಿಗೆ ಖೇಲ್‌ರತ್ನ ಪ್ರಶಸ್ತಿ..!

Thu Oct 28 , 2021
  ಭಾರತದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ದೊರೆಯುವ ಅತ್ಯುನ್ನತ ಪ್ರಶಸ್ತಿಯಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ 11 ಕ್ರೀಡಾಪಟುಗಳ ಹೆಸರನ್ನು ಶಿಫಾರಸು ಮಾಡಲಾಗಿದೆ. ಈ ಬಾರಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಕ್ರೀಡಾಪಟು ನೀರಜ್ ಚೋಪ್ರ ಸೇರಿದಂತೆ 11 ಕ್ರೀಡಾಪಟುಗಳ ಹೆಸರು ಈ ಪಟ್ಟಿಯಲ್ಲಿದೆ. ಇನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾರತದ ಹಿರಿಯ ಕ್ರಿಕೆಟ್ ಆಟಗಾರ್ತಿ […]

Advertisement

Wordpress Social Share Plugin powered by Ultimatelysocial