ಫ್ರೆಶ್ ಅಂಡ್ ಫೀಲ್ ಲವ್ ಸ್ಟೋರಿ ‘ಲಗೋರಿ’ ರಿಲೀಸ್.. ಸತೀಶ್ ವಜ್ರ ಯೂಟ್ಯೂಬ್ ನಲ್ಲಿ ಮ್ಯಾಜಿಕ್ ಮಾಡ್ತಿದೆ ‘ಲಗೋರಿ’ ಟೆಲಿ ಫಿಲ್ಮ್


ಈ ಹಿಂದೆ ಫ್ರೆಶ್ ಅಂಡ್ ಫೀಲ್ ಕಂಟೆಂಟ್ ಜೊತೆಗೆ ಬ್ಯೂಟಿಫುಲ್ ಲವ್ ಸ್ಟೋರಿ ಕ್ರಶ್ ಎಂಬ ಕಿರುಚಿತ್ರ ಮಾಡಿದ್ದ ಕನ್ನಡದ ಯುವ ಪ್ರತಿಭೆ ಸತೀಶ್ ವಜ್ರ ಮತ್ತೊಂದು ಕಿರುಚಿತ್ರ ಮೂಲಕ ನಿಮ್ಮು ಮುಂದೆ ಹಾಜರಾಗ್ತಿದ್ದಾರೆ. ಈ ಬಾರಿ ಕೂಡ ಹೊಸ ಪ್ರೇಮಕಥಾಹಂದರದ ಲಗೋರಿ ಎಂಬ ಟೆಲಿ ಫಿಲ್ಮ್ ಮೂಲಕ ಪ್ರೇಕ್ಷಕರನ್ನು ಸತೀಶ್ ರಂಜಿಸ್ತಿದ್ದಾರೆ. ಸಖತ್ ಪ್ರಾಮೀಸಿಂಗ್ ಆಗಿರುವ ಲಗೋರಿ ಸಿನಿಮಾ ಸತೀಶ್ ವಜ್ರ ಯೂಟ್ಯೂಬ್ ನಲ್ಲಿ ಅನಾವರಣಕೊಂಡಿದೆ.

ಸತೀಶ್ ವಜ್ರ ನಾಯಕನಾಗಿ ನಟಿಸಿರುವ ಲಗೋರಿ ಟೆಲಿ ಫಿಲ್ಮ್ ನಲ್ಲಿ ದೀಪಿಕಾ ಆರಾಧ್ಯ ಹಾಗೂ ಸೋನು ಶ್ರೀನಿವಾಸ್ ಗೌಡ ನಾಯಕಿಯರಾಗಿ ಬಣ್ಣ ಹಚ್ಚಿದ್ದು, ಯುವಿ ಹರೀಶ್ ಗೌಡ ನಿರ್ದೇಶನ, ಅಕ್ಷಯ್ ಆರ್ ರಿಷಬ್ ಮ್ಯೂಸಿಕ್, ಸತೀಶ್ ರಾಜೇಂದ್ರನ್ ಕ್ಯಾಮೆರಾ ವರ್ಕ್ ಸಿನಿಮಾಕ್ಕಿದೆ. ಉಳಿದಂತೆ ಕೀರ್ತಿರಾಜ್ ಡಿ ಎಡಿಟಿಂಗ್ ಜವಾಬ್ದಾರಿ ಹೊತ್ತಿದ್ದಾರೆ.

ಡ್ರೀಮ್ ಹಂಟರ್ ಪ್ರೊಡಕ್ಷನ್ ಬ್ಯಾನರ್ ನಡಿ ಸಂತೋಷ್ ಸಿ ಗೌಡ ಲಗೋರಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಬೆಂಗಳೂರು ಹಾಗೂ ಮಂಡ್ಯ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. 48 ನಿಮಿಷವಿರುವ ಲಗೋರಿ ಟೆಲಿ ಫಿಲ್ಮ್ ಸತೀಶ್ ವಜ್ರ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗ್ತಿದ್ದು, ಸತೀಶ್ ನಟನೆಗೆ ಪ್ರೇಕ್ಷಕ‌ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಣ್ಯರ ಸಮ್ಮುಖದಲ್ಲಿ "ದಂಡಿ" ಹಾಡುಗಳ ಲೋಕಾರ್ಪಣೆ.

Tue Mar 15 , 2022
  ವಿಶಾಲ್ ರಾಜ್ ನಿರ್ದೇಶಿಸಿರುವ “ದಂಡಿ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಆದಿಚುಂಚನಗಿರಿ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಮೇಜರ್ ಸಿ.ಆರ್.ರಮೇಶ್, ಎನ್.ಮುನಿರಾಜುಗೌಡ ಮುಂತಾದ ಗಣ್ಯರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಲೋಕಾರ್ಪಣೆಯಾದವುಪೂಜ್ಯ ಶ್ರೀಗಳು ತಮ್ಮ ಹಿತನುಡಿಗಳ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು. ಉಳಿದ ಗಣ್ಯರು ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳಾಡಿದರು. ಪ್ರೊಫೆಸರ್ ರಾಜಶೇಖರ ಮಠಪತಿ ಅವರ ಕಾದಂಬರಿ ಆಧರಿಸಿ ಈ ಚಿತ್ರ ನಿರ್ಮಾಣವಾಗಿದೆ. 1904 ರಿಂದ 1942 […]

Advertisement

Wordpress Social Share Plugin powered by Ultimatelysocial