ತೀರಿ ಹೋದ ತಂದೆ ಪದೇ ಪದೇ ಕನಸಿನಲ್ಲಿ ಬರ್ತಿದ್ದಾರಾ?

“ಅಪ್ಪ ಎಂದರೆ ಆಕಾಶ” ಅಪ್ಪನ ಜಾಗವನ್ನು ತುಂಬೋದಕ್ಕೆ ಯಾವ ವ್ಯಕ್ತಿಯಿಂದಲೂ ಸಾಧ್ಯವಿಲ್ಲ. ಅದ್ರಲ್ಲೂ ಅಪ್ಪನನ್ನು ಕಳೆದುಕೊಂಡ ನೋವು ಬದುಕಿರುವವರೆಗೂ ನಮ್ಮನ್ನು ಕಾಡುತ್ತಲೇ ಇರುತ್ತದೆ. ತೀರಿ ಹೋದ ಅಪ್ಪ ಪದೇ ಪದೇ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ?

ರಾತ್ರಿ ಅಪ್ಪನನ್ನು ನೆನೆದು ಒಮ್ಮೆಲೆ ಬೆಚ್ಚಿ ಬೀಳ್ತಿದ್ದೀರಾ? ಹಾಗಾದ್ರೆ ತೀರಿಕೊಂಡ ಅಪ್ಪ ಪದೇ ಪದೇ ಕನಸಿನಲ್ಲಿ ಕಾಣಿಸಿಕೊಳ್ಳುವುದಕ್ಕು ಒಂದು ಬಲವಾದ ಕಾರಣವಿದೆ.

ನಮಗೆ ಕಾಣೋ ಪ್ರತಿಯೊಂದು ಕನಸಿನ ಬಗ್ಗೆನೂ ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಸ್ವಪ್ನ ಶಾಸ್ತ್ರ ಇಂತಹ ಕನಸುಗಳ ಬಗ್ಗೆ ಏನು ಹೇಳುತ್ತೆ ಅನ್ನೋದನ್ನ ಹೇಳ್ತಿವಿ.

1. ನಿಮ್ಮ ಮೃತ ತಂದೆಗೆ ಬಗೆಹರಿಯದ ಸಮಸ್ಯೆ ಇದೆ.

ತೀರಿಕೊಂಡ ನಿಮ್ಮ ಅಪ್ಪ ಪದೇ ಪದೇ ಕನಸಿನಲ್ಲಿ ಬರುತ್ತಿದ್ದಾರೆ ಅಂದರೆ ಇದಕ್ಕೆ ಕಾರಣ ಬದುಕಿದ್ದಾಗ ಅವರು ಒಂದು ಸಮಸ್ಯೆ ಸಿಲುಕಿಕೊಂಡಿದ್ರು ಅಥವಾ ಏನನ್ನೋ ಮಾಡಬೇಕು ಅಂದು ಕೊಂಡಿರ್ಬೇಕು. ಆದರೆ ಅದು ಈಡೇರಲಿಲ್ಲ ಹೀಗಾಗಿ ನಿಮ್ಮ ಮೂಲಕ ಅದನ್ನು ಪೂರೈಸಲು ಇಚ್ಚಿಸುತ್ತಿದ್ದಾರೆ. ಈಗ ಅವರು ಮನಶಾಂತಿ ಇಲ್ಲದೆ ಅಲೆಯುತ್ತಿದ್ದಾರೆ ಎಂದರ್ಥ. ಆದ್ರೆ ಅವರ ಸಮಸ್ಯೆ ಏನು ಅನ್ನೋದನ್ನ ತಿಳಿದುಕೊಳ್ಳಲು ನಿಮಗೆ ಕಷ್ಟ ಆಗಬಹುದು. ಆಗ ನೀವು ಅಪ್ಪನನ್ನ ನೆನೆದು ಭಕ್ತಿಯಿಂದ ಆ ಸಮಸ್ಯೆ ಯಾವುದು ಮತ್ತು ಅದಕ್ಕೆ ಪರಿಹಾರ ಏನು ಎಂಬುದನ್ನು ತಿಳಿದುಕೊಳ್ಳಿ.

2. ಅನಾರೋಗ್ಯದ ಬಗ್ಗೆ ಸೂಚನೆ

ಸತ್ತು ಹೋದ ತಂದೆಯ ಜೊತೆಗೆ ನೀವು ಕನಸಿನಲ್ಲಿ ಮಾತನಾಡುತ್ತಿದ್ದೀರಿ ಎಂದರೆ ಇದರರ್ಥ ನಿಮಗೆ ಸದ್ಯದಲ್ಲೇ ಅನಾರೋಗ್ಯ ಕಾಡಲಿದೆ ಎಂಬ ಸೂಚನೆಯಿದು. ಹೀಗಾಗಿ ಹೊರಗಡೆ ಹೋಗುವಾಗ ಮುಂಜಾಗೃತೆಯಿಂದಿರಿ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸಿ. ಇನ್ನೂ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅತಿಯಾದ ಆತ್ಮವಿಶ್ವಾಸ ಬೇಡ. ಇತರರ ಸಲಹೆ ಪಡೆದುಕೊಂಡು ಮುಂದಿನ ಹೆಜ್ಜೆಇಡಿ.

3. ಶುಭ ಸೂಚನೆಯ ಸಂಕೇತ

ಅಪ್ಪ ನಿಮ್ಮ ಕನಸಿನಲ್ಲಿ ಜೀವಂತವಾಗಿದ್ದಂತೆ ಭಾಸವಾದರೆ ಖಂಡಿತ ಇದು ಶುಭ ಸೂಚನೆ. ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗಲಿದೆ ಮತ್ತು ನೀವು ಅಂದುಕೊಂಡ ಗುರಿ ಈಡೇರುತ್ತದೆ ಎಂದರ್ಥ. ಒಂದು ವೇಳೆ ಕನಸಿನಲ್ಲಿ ಅಪ್ಪ ನಿಮ್ಮನ್ನು ತಪ್ಪಿಕೊಂಡರೆ ಇತರರಿಂದ ಸಹಾಯವನ್ನು ಪಡೆಯಿರಿ ಎಂಬ ಸೂಚನೆ.

4. ನಿಮ್ಮವರೊಂದಿಗೆ ಜಗಳವಾಗುತ್ತದೆ

ಸತ್ತು ಹೋಗಿರುವ ತಂದೆಯ ದೇಹ ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ನೀವು ನಿಮಗೆ ಹತ್ತಿರವಾದವರೊಂದಿಗೆ ಜಗಳವಾಡುತ್ತೀರಿ ಎಂದರ್ಥ. ಅದು ನಮ್ಮ ತಾಯಿ, ಸಂಗಾತಿ, ಅಥವಾ ಪ್ರಾಣಸ್ನೇಹಿತನೇ ಆಗಿರಬಹುದು. ಇದರಿಂದ ನಿಮಗೆ ಸಮಸ್ಯೆ ಉಂಟಾಗಲಿದೆ ಎಂಬ ಸೂಚನೆಯಿದು.

5. ಶಾಂತಿಯನ್ನು ಕಾಪಾಡಲು ಸೂಚನೆ

ನಿಮ್ಮ ಕನಸಿನಲ್ಲಿ ಸತ್ತು ಹೋಗಿರುವ ತಂದೆ ಮನೆಗೆ ಬಂದಂತೆ ಕನಸು ಬಿದ್ದರೆ ಅವರು ನಿಮಗೆ ಕ್ಷಮೆಯನ್ನು ಯಾಚಿಸಿ ಮತ್ತು ಶಾಂತಿಯಿಂದ ಇರಿ ಎಂದು ಹೇಳುತ್ತಿದ್ದಾರೆ. ನಿಮ್ಮ ಗರ್ವವನ್ನು ಕಡಿಮೆಗೊಳಿಸಿ ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಸೂಚಿಸುತ್ತಿದ್ದಾರೆ.

6. ನಿಮ್ಮ ಸ್ನೇಹ ದೀರ್ಘವಾಗಿರಲಿದೆ

ಈಗಾಗಲೇ ಸತ್ತು ಹೋಗಿರುವ ತಂದೆ ಮತ್ತೆ ನಿಮ್ಮ ಕನಸಿನಲ್ಲಿ ಸತ್ತರೆ ಇದು ಅಶುಭದ ಸೂಚನೆಯಲ್ಲ. ಬದಲಿಗೆ ದೀರ್ಘಾಯುಷ್ಯ, ಸಾಮರಸ್ಯ ಮತ್ತು ಆಶಾವಾದದ ಸೂಚನೆಯಾಗಿದೆ. ಇದು ನಿಮ್ಮ ಜೊತೆಗಿರುವವರೊಂದಿಗೆ ಗಟ್ಟಿಯಾದ ಸ್ನೇಹ ಸಂಬಂಧವನ್ನು ಹೊಂದುತ್ತೀರಿ ಎಂಬ ಶುಭ ಸೂಚನೆಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸನ್​​​ ಗ್ಲಾಸ್​​ ಧರಿಸುವುದು ಎಷ್ಟು ಮುಖ್ಯ?

Fri Feb 17 , 2023
ಸನ್ ಗ್ಲಾಸ್​​​ ಧರಿಸುವುದರಿಂದ ಕಣ್ಣುಗಳು ಆರೋಗ್ಯವಾಗಿರುವುದಲ್ಲದೆ, ಆರಂಭಿಕ ಕಣ್ಣಿನ ಪೊರೆ, ಕಾರ್ನಿಯಲ್ ಹಾನಿ, ಒಣ ಕಣ್ಣುಗಳು, ರೆಟಿನಾದ ಹಾನಿ ಮತ್ತು ಕಣ್ಣಿನ ಸುತ್ತ ಚರ್ಮದ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡಬಹುದು.ಸನ್​​ಗ್ಲಾಸ್ ​​​​ ಕೇವಲ ಫ್ಯಾಷನ್​​ ಆಗಿ ಮಾತ್ರ ಧರಿಸುವುದಲ್ಲ, ಬದಲಾಗಿ ಬಿಸಿಲಿನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಸನ್​​​ ಗ್ಲಾಸ್ ಧರಿಸುವುದು ಅತ್ಯಂತ ಅಗತ್ಯವಾಗಿದೆ. ಕೇವಲ ಹೊರಗಡೆ ಬಿಸಿಲಿನಿಂದ ಮಾತ್ರವಲ್ಲದೇ ಧೂಳು ಮಾಲಿನ್ಯಗಳಿಂದ ನಿಮ್ಮ ಕಣ್ಣುಗಳನ್ನುರಕ್ಷಿಸುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ಶೈಲಿಗಳ […]

Advertisement

Wordpress Social Share Plugin powered by Ultimatelysocial