ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರ ಹಡಗಿನಲ್ಲಿ ಅಗ್ನಿ ಅವಘಡ: 36 ಮಂದಿ ಸಜೀವ ದಹನ, 200 ಜನರ ಸ್ಥಿತಿ ಗಂಭೀರ


ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರ ಹಡಗಿನಲ್ಲಿ ಅಗ್ನಿ ಅವಘಡ: 36 ಮಂದಿ ಸಜೀವ ದಹನ, 200 ಜನರ ಸ್ಥಿತಿ ಗಂಭೀರ

ಢಾಕಾ: ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರ ಹಡಗಿನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ 36 ಮಂದಿ ಸಜೀವ ದಹನವಾಗಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಘಟನೆಯನ್ನು ಸುಮಾರು 200 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದು (ಡಿ.24) ನಸುಕಿನ ಜಾವ 3 ಗಂಟೆ ಸಮಯದಲ್ಲಿ ಬಾಂಗ್ಲಾದ ಬಾರ್ಗಾನ ಮೂಲದ ಎಂವಿ ಅಭಿಜಾನ್​-10 ಹೆಸರಿನ ಪ್ರಯಾಣಿಕರ ಹಡಗಿನ ಇಂಜಿನ್​ ರೂಮ್​ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬಳಿಕ ಬೆಂಕಿಯ ಜ್ವಾಲೆ ಹೆಚ್ಚಾಗಿ 36 ಮಂದಿಯನ್ನು ಬಲಿ ಪಡೆದುಕೊಂಡಿದೆ. ಹಡಗು ಢಾಕಾದಿಂದ ಪ್ರಯಾಣ ಬೆಳೆಸಿತ್ತು.

ರಾಜಧಾನಿಕ ಢಾಕಾದಿಂದ 250 ಕಿ.ಮೀ ದೂರದಲ್ಲಿರುವ ಜಲಕಥಿಯ ಸುಗಂಧ ನದಿಯಲ್ಲಿ ಘಟನೆ ನಡೆದಿದ್ದು, ಈವರೆಗೆ 36 ಸುಟ್ಟ ದೇಹಗಳನ್ನು ಅಧಿಕಾರಿಗಳು ಹೊರತೆಗೆದಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

200 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅಲ್ಲದೆ, ಹಡಗಿನಲ್ಲಿ ಕಾರ್ಯಾಚರಣೆ ಮುಂದುವರಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುದ್ಧಕ್ಕೇ ಶರಣಾದ ಯುದ್ಧಕಾಂಡ ನಿರ್ದೇಶಕ ಕೆ.ವಿ.ರಾಜು

Fri Dec 24 , 2021
ಕನ್ನಡ ಚಿತ್ರರಂಗದ ಹಿರಿಯ ಹಾಗೂ ಖ್ಯಾತಾ ನರ್ದೇಶಕ ಕೆ.ವಿ.ರಾಜು ರವರು ಕನ್ನಡ ಚಲನಚಿತ್ರ ಪ್ರೇಕ್ಷಕರನ್ನು ಬಂಧಿಸಿಕೊಂಡು ಹೆಸರಾಂತ ಸಿನಿಮಾಗಳನ್ನು ಕನ್ನಡ ಚಲನಚಿತ್ರರಂಗಕ್ಕೇ ಉನ್ನತವಾದ ಕೊಡುಗೆಯನ್ನು ನೀಡಿದ್ದಾರೆ ಪ್ರಮುಖ ನಿರ್ದೇಶಿಸಿದ ಸಿನಿಮಾಗಳೆಂದರೆ,ಸಂಗ್ರಾಮ ,ಬೆಳ್ಳಿಕಾಲುಂಗುರ,ಬೆಳ್ಳಿಮೋಡಗಳು ,ಪಾಂಡವರು ಮುಂತಾದವುಗಳನ್ನು ನಿರ್ದೇಶಿಸಿದ್ದಾರೆ..ಕೆ.ವಿ.ರಾಜು ರವರು ಕನ್ನಡ ಚಿತ್ರರಂಗದ ರೆಬಲ್‌ ನಿರ್ದೇಶಕ ಎಂದೇ ಕರೆಸಿಕೊಳ್ಳುತ್ತಿದ್ದ ಕೆ.ವಿ.ರಾಜು ತನ್ನ ನೇರ ನುಡಿಗಳಿಂದಲೇ ಹೆಸರು ವಾಸಿಯಾಗಿದ್ದರು,ಇವರಿಗೆ ಹೆಚ್ಚು ಸಿನಿಮಾ ಯುದ್ಧಕಾಂಡ ಇದನ್ನು ನಿರ್ಮಿಸಿದ ಸಿನಿಮಾಗಳನ್ನು ಯುವಕರು ಇಷ್ಷಪಟ್ಟು ನೊಡುತ್ತಿದ್ದರು ಹಾಗೂ ಕ್ರಾಂತಿಕಾರಿ […]

Advertisement

Wordpress Social Share Plugin powered by Ultimatelysocial