ಯೋಗಸನಗಳನ್ನು ಮಾಡಿ ಆರೋಗ್ಯ ವೃದ್ಧಿಸಿ ಕೊಳ್ಳಿ

ಈ ಐದು ಆಸನಗಳನ್ನು ಮಾಡಿದರೆ ಒಳ್ಳೆಯ ಹಾಗೂ ದೇಹಕ್ಕೆ ತುಂಬಾ ಪ್ರಯೋಜನಗಳನ್ನು ಹಾಗು ಸಫಲತೆ ಕಾಣಲು ಸಾಧ್ಯ.

ಭುಜಂಗಾಸನ
ಇದರಲ್ಲಿ ದೇಹದ ಭಂಗಿಯು ಹೆಡೆ ಎತ್ತಿದ ಹಾವಿನಂತೆ ಇರುತ್ತದೆ. ಆದ್ದರಿಂದ ಇದನ್ನು ಭುಜಂಗಾಸನ ಎಂದು ಕರೆಯಲಾಗುತ್ತದೆ. ಇದನ್ನು ಮಾಡಲು, ಮೊದಲು ನಿಮ್ಮ ಹೊಟ್ಟೆ ನೆಲಕ್ಕೆ ತಾಗುವಂತೆ ಮಲಗಿ. ನಂತರ ಎರಡೂ ಕಾಲುಗಳ ನಡುವಿನ ಅಂತರವನ್ನು ಕಡಿಮೆ ಮಾಡಿ ಮತ್ತು ಕಾಲುಗಳನ್ನು ನೇರವಾಗಿ ಇರಿಸಿ. ಈಗ ಕೈಗಳನ್ನು ನೆಲ್ಲಕ್ಕೆ ಊರಿ ತಲೆ ಎತ್ತಿ. ದೇಹದ ಭಂಗಿಯು ಹಾವಿನ ಹೆಡೆಯಂತೆ ಕಾಣುತ್ತದೆ. ಈ ಮಧ್ಯೆ ಸೊಂಟದ ಮೇಲೆ ಹೆಚ್ಚು ಒತ್ತಡ ಕೊಡಬೇಡಿ. ಈ ಭಂಗಿಯಲ್ಲಿ ಸ್ವಲ್ಪ ಸಮಯ ಇರಿ. ನಂತರ ಉಸಿರನ್ನು ಬಿಡುತ್ತಾ ಸಹಜ ಸ್ಥಿತಿಗೆ ಹಿಂತಿರುಗಿ. ಇದನ್ನು ಅನುಕ್ರಮವನ್ನು ಒಮ್ಮೆಗೆ 5 ರಿಂದ 7 ಬಾರಿ ಪುನರಾವರ್ತಿಸಿ

ಚಕ್ರಾಸನ
ನೇರವಾಗಿ ನಿಂತುಕೊಳ್ಳಿ. ಹಿಂದಕ್ಕೆ ಸಂಪೂರ್ಣವಾಗಿ ಬಾಗಿ ನಿಮ್ಮ ಕೈಗಳನ್ನು ನೆಲಕ್ಕೆ ತಾಗಿಸಿ. ಈ ಆಸನ ಅಭ್ಯಾಸ ಮಾಡುವ ಮೂಲಕ ನೀವು ಸದೃಢರಾಗುತ್ತೀರಿ. ಬೆನ್ನು ನೋವಿನಿಂದ ಮುಕ್ತರಾಗಲು ಈ ಆಸನ ಮಾಡಿ. ಈ ಆಸನವನ್ನು ಎಳೆಯ ವಯಸ್ಸಿನಿಂದಲೂ ಮಾಡಿಕೊಂಡು ಬಂದಾಗ ವೃದ್ಧಾಪ್ಯದಲ್ಲಿ ಬೆನ್ನು ಬಾಗುವುದಿಲ್ಲ.

ಚತುರಂಗ ದಂಡಾಸನ
ನೇರವಾಗಿ ಮಲಗಿಕೊಳ್ಳಿ. ನಿಮ್ಮ ಕೈಗಳು ನೇರವಾಗಿರಲಿ. ನಿಮ್ಮ ಕೈಗಳ ಮೂಲಕ ಮೇಲೆದ್ದುಕೊಳ್ಳಿ. ಕಾಲುಗಳ ತುದಿ ಬೆರಳು ನೆಲಕ್ಕೆ ತಾಗಿರಲಿ. ಇದೇ ಭಂಗಿಯಲ್ಲಿ ಸುಮಾರು 10 ರಿಂದ 15 ಸೆಕೆಂಡುಗಳ ಕಾಲ ಇರಿ. ಈ ಆಸನ ಮಾಡುವುದರಿಂದ ಕಿಬ್ಬೊಟ್ಟೆಯ ಸ್ನಾಯುಗಳು ಸದೃಢವಾಗುತ್ತದೆ. ತೋಳುಗಳ ಬಲವನ್ನು ಹೆಚ್ಚಿಸುತ್ತದೆ. ಬೆನ್ನು ನೋವು ನಿವಾರಣೆಯಾಗುತ್ತದೆ.

ಸೇತುಬಂಧಾಸನ
ಕಾಲುಗಳನ್ನು ಬಗ್ಗಿಸಿ ಮತ್ತು ಅವುಗಳನ್ನು ನಿಮ್ಮ ಸೊಂಟಕ್ಕೆ ಹತ್ತಿರಕ್ಕೆ ತನ್ನಿ. ನಿಧಾನವಾಗಿ ಉಸಿರಾಡುವಾಗ, ನಿಮ್ಮ ಕೆಳಗಿನ ಬೆನ್ನಿನ ಭಾರವನ್ನು ಮೇಲಕ್ಕೆತ್ತಿ. ಕೈಗಳಿಂದ ಪಾದಗಳನ್ನು ಹಿಡಿಯಿರಿ. ಪಾದಗಳನ್ನು ನೆಲದ ಮೇಲೆ ಬಲವಾಗಿ ಇರಿಸಿ. ತಲೆ ಮತ್ತು ಭುಜದ ಭಾಗವನ್ನು ಸಹ ನೆಲದಲ್ಲಿ ಇರಿಸಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಈ ಭಂಗಿಯಲ್ಲಿ ಇರಿ. ಅದರ ನಂತರ, ಸಾಮಾನ್ಯ ಭಂಗಿಗೆ ಹಿಂತಿರುಗಿ. ಸೇತುಬಂಧಾಸನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಎದೆ, ಕುತ್ತಿಗೆ ಮತ್ತು ಬೆನ್ನುಮೂಳೆಯನ್ನು ವಿಸ್ತರಿಸುತ್ತದೆ.

ಪಶ್ಚಿಮೋತ್ತಾಸನ
ಪಶ್ಚಿಮೋತ್ತಾಸನವನ್ನು ಮಾಡಲು, ಮೊದಲನೆಯದಾಗಿ ಎರಡೂ ಕಾಲುಗಳನ್ನು ನೇರವಾಗಿ ಚಾಚಿ ನಂತರ ಬಲಗಾಲನ್ನು ಮಡಚಿ ಬಲಗೈಯಿಂದ ಬಲಗಾಲಿನ ಬೆರಳನ್ನು ಹಿಡಿದುಕೊಳ್ಳಿ. ನಂತರ ಎಡಗೈಯಿಂದ ಎಡಗಾಲಿನ ಬೆರಳನ್ನು ಹಿಡಿಯಿರಿ. ಗರ್ಭಕೋಶ ಅಥವಾ ಬೆನ್ನುನೋವಿನ ಸಮಸ್ಯೆಯಿದ್ದರೆ ಈ ಆಸನವನ್ನು ಮಾಡಬೇಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ?

Fri Jan 7 , 2022
ಬೇಸಿಗೆಯ ಮಧ್ಯಾಹ್ನದ ಸಮಯದಲ್ಲಿ ಬೆಲ್ಲ-ಮಜ್ಜಿಗೆಯ ಹೊಂದಾಣಿಕೆ ದೇಹಕ್ಕೆ ತಂಪು ನೀಡುತ್ತದೆ. ಬೆಲ್ಲದೊಂದಿಗೆ ಚೂರು ನೀರು ಬೆರೆಸಿ, ಲಿಂಬೆರಸ ಸೇರಿಸಿ, ಪಾನಕ ಮಾಡಿ ಸೇವಿಸುವುದೂ ಇದೆ. ಇನ್ನು, ಸಾಂಬಾರಿಗೂ ಸ್ವಲ್ಪ ಬೆಲ್ಲ, ಪಲ್ಯಕ್ಕೂ ಬೆಲ್ಲ ಸೇರಿಸುವ ಅಭ್ಯಾಸವಂತೂ ಹಲವೆಡೆ ಇದೆ. ಇದೆಲ್ಲ ಸುಮ್ಮನೆ ಬಾಯಿರುಚಿಗಲ್ಲ. ಪಚನಶಕ್ತಿ ಬೆಲ್ಲದಿಂದ ಪಚನಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆಗೆ ನೆರವಾಗುವ ಬೆಲ್ಲದಿಂದ ಮಲಬದ್ಧತೆಯೂ ದೂರವಾಗುತ್ತದೆ. ಪಚನಗೊಳಿಸುವ ಪ್ರಕ್ರಿಯೆಗೆ ಪುರಕವಾಗಿರುವ ಕಿಣ್ವಗಳನ್ನು ಬೆಲ್ಲದಲ್ಲಿರುವ ಅಂಶ ಸಕ್ರಿಯಗೊಳಿಸುತ್ತದೆ. ಹೀಗಾಗಿ, ತಿನ್ನುವ ಆಹಾರ […]

Advertisement

Wordpress Social Share Plugin powered by Ultimatelysocial