ಖಾಸಗಿ ಶಾಲೆಗಳನ್ನು ಮೀರಿಸಿ ಮೊದಲನೇ ಸ್ಥಾನ ಪಡೆಯುವಲ್ಲಿ ರಾಯಚೂರು ಜಿಲ್ಲೆಯ ಸರ್ಕಾರಿ ಶಾಲೆ

ಖಾಸಗಿ ಶಾಲೆಗಳನ್ನು ಮೀರಿಸಿ ಮೊದಲನೇ ಸ್ಥಾನ ಪಡೆಯುವಲ್ಲಿ ರಾಯಚೂರು ಜಿಲ್ಲೆಯ ಸರ್ಕಾರಿ ಶಾಲೆ

ರಾಯಚೂರು: ಖಾಸಗಿ ಶಾಲೆಗಳನ್ನು ಮೀರಿಸಿ ಮೊದಲನೇ ಸ್ಥಾನ ಪಡೆಯುವಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಸರ್ಕಾರಿ ಶಾಲೆ ಯಶಸ್ವಿಯಾಗಿದೆ. ರಾಯಚೂರು ಜಿಲ್ಲೆಯಲ್ಲೇ ನಂಬರ್​ ಒನ್ ಹೈಟೆಕ್ ಕಂಪ್ಯೂಟರ್ ಲ್ಯಾಬ್ ಅನ್ನು ಜವಳಗೇರಾ ಸರ್ಕಾರಿ ಶಾಲೆ ಹೊಂದಿದ್ದು, ಈಗ ಕಂಪ್ಯೂಟರ್​ ಲ್ಯಾಬ್​ಗೆ ಮೊದಲನೇ ಸ್ಥಾನ ಸಿಕ್ಕಿದೆ.

ಸುಮಾರು 1980 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಸರ್ಕಾರಿ ಹೈಟೆಕ್​ ಕಂಪ್ಯೂಟರ್ ಲ್ಯಾಬ್​ಗೆ ಖಾಸಗಿ ಶಾಲಾ ಮಕ್ಕಳು ಮನಸೋತಿದ್ದಾರೆ. ಜವಳಗೇರಾ ಸರ್ಕಾರಿ ಶಾಲೆಯಲ್ಲಿ ಪ್ರೊಜೆಕ್ಟರ್, ಏಸಿ, ಎಲ್‌ಇಡಿ ಡಿಸ್​ಪ್ಲೇಯಲ್ಲಿ ಕಂಪ್ಯೂಟರ್ ಮೂಲಕವೇ ಮಕ್ಕಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ. 50ಕ್ಕೂ ಹೆಚ್ಚು ಕಂಪ್ಯೂಟರ್​ಗಳ ಮೂಲಕ ಭೋಧಿಸಲಾಗುತ್ತಿದ್ದು, ವಿವಿಧ ಹೈಟೆಕ್ ಉಪಕರಣಗಳ ಬಳಕೆ ಈ ಸರ್ಕಾರಿ ಶಾಲೆಯಲ್ಲಿ ಇದೆ.

ವಿಜ್ಞಾನ, ಗಣಿತ ಸೇರಿ ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಡೆಮೊ ರೂಂ ಹಾಗೂ ಲ್ಯಾಬ್ ರೂಂ ಅಂತ ವಿಂಗಡಿಸಿ ಬೋಧನೆ ಮಾಡಲಾಗುತ್ತಿದೆ. ವಿವಿಧ ಉಚಿತ ಸಾಫ್ಟ್​ವೇರ್​ಗಳ ಮೂಲಕವೇ ಮಕ್ಕಳಿಗೆ ತರಬೇತಿ ನೀಡುತ್ತಿರುವುದು ವಿಶೇಷ.

ಕೆಪಿಎಸ್​ಸಿ ಮೂಲಕ ಈ ಸೌಲಭ್ಯ ಸದ್ಬಳಕೆ ಮಾಡಿಕೊಂಡಿದ್ದೇವೆ. ಕಂಪ್ಯೂಟರ್ ಮೂಲಕವೇ ತರಬೇತಿ ನೀಡುತ್ತಿದ್ದೇವೆ. ಎಲ್ಲಾ ಮಕ್ಕಳಿಗೂ ಕಂಪ್ಯೂಟರ್ ಮೂಲಕವೇ ಟ್ರೈನಿಂಗ್ ನೀಡಲಾಗುತ್ತಿದೆ. ರಆಯಚೂರಿನಲ್ಲೇ ನಂಬರ್ ಒನ್ ಸ್ಥಾನ ಪಡೆದಿದ್ದೇವೆ ಎಂದು ಜವಳಗೇರಾ ಸರ್ಕಾರಿ ಶಾಲೆ ಶಿಕ್ಷಕ ಗಿರೀಶ್ ಹೇಳಿದ್ದಾರೆ.

ಕಂಪ್ಯೂಟರ್ ನೋಡಿದ್ವಿ ಅಷ್ಟೇ. ಅದನ್ನು ಬಳಕೆ ಮಾಡಿರಲಿಲ್ಲ. ಈ ಲ್ಯಾಬ್​ನಿಂದ ನಾವೇ ಕಂಪ್ಯೂಟರ್​ನಲ್ಲಿ ಕಲಿಯುತ್ತಿದ್ದೇವೆ. ಖಾಸಗಿ ಶಾಲೆ ಮಕ್ಕಳು, ನಮ್ಮ ಶಾಲೆಯಲ್ಲಿರುವ ಸೌಲಭ್ಯ ನಿಮ್ಮಲಿಲ್ಲ ಅಂತಿದ್ದರು. ಈಗ ನಮಗೂ ಎಲ್ಲಾ ಸೌಲಭ್ಯವಿದೆ. ಸರ್ಕಾರಿ ಶಾಲೆ ಮಕ್ಕಳು ದಡ್ಡರು ಅಂತಾರೆ. ಆದರೆ ಈಗ ನಮ್ಮ ಶಾಲೆ ಮಕ್ಕಳು ಯಾರಿಗೂ ಕಮ್ಮಿಯಿಲ್ಲ ಎಂದು ವಿದ್ಯಾರ್ಥಿನಿ ವಿಜಯಲಕ್ಷ್ಮೀ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಗ್​ ಬ್ಯಾಷ್​ನಲ್ಲೊಂದು ಊಹಿಸಲಾಗದ ಕ್ಯಾಚ್: ಮ್ಯಾಥ್ಯೂ ಶಾರ್ಟ್ ಹಿಡಿದ ರೋಚಕ ಕ್ಯಾಚ್ ನೋಡಿ

Fri Dec 24 , 2021
Matthew Short Catch Video: ಬಿಗ್​ಬ್ಯಾಷ್ ಲೀಗ್​ನಲ್ಲಿ ಬ್ರಿಸ್ಬೇನ್ ಹೀಟ್ ತಂಡಕ್ಕೆ ಆಸರೆಯಾಗಿ ನಿಂತಿದ್ದ ಸ್ಯಾಮ್ ಹೆಜ್ಲೆಟ್ ಔಟ್ ಆದ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ರಶೀದ್ ಖಾನ್ ಗೂಗ್ಲಿ ಟ್ರಿಕ್ ಅನ್ನು ಅರಿಯಲು ವಿಫಲವಾದ ಸ್ಯಾಮ್ ಫೀಲ್ಡಿಂಗ್ ಮಾಡುತ್ತಿದ್ದ ಮ್ಯಾಥ್ಯೂ ಶಾರ್ಟ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾಗಬೇಕಾಯಿತು. ಕಾಂಗರೂಗಳ ನಾಡಿನಲ್ಲಿ ಸಾಗುತ್ತಿರುವ 2021-22ನೇ ಸಾಲಿನ ಬಿಗ್ ಬ್ಯಾಷ್ ಲೀಗ್ (Big Bash League BBL) ಟೂರ್ನಿ ರೋಚಕ ಘಟ್ಟಕ್ಕೆ […]

Advertisement

Wordpress Social Share Plugin powered by Ultimatelysocial