ಯು/ಎ ಪ್ರಮಾಣಪತ್ರ ನೀಡಿದೆ ಸೆನ್ಸಾರ್ ಮಂಡಳಿ ಸಿನಿಮಾಗೆ :777 ಚಾರ್ಲಿ

ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಲಾಗುತ್ತಿದೆ, ಈ ನಡುವೆ ಸೆನ್ಸಾರ್ ಮಂಡಳಿ ಸಿನಿಮಾಗೆ ಯು/ಎ ಪ್ರಮಾಣಪತ್ರ ನೀಡಿದೆ.

ಎಲ್ಲವೂ ಅಂದಕೊಂಡಂತೆ ಹಾಗಿದ್ದರೇ 777 ಚಾರ್ಲಿ ಡಿಸೆಂಬರ್ 31ರಂದು ರಿಲೀಸ್ ಆಗಬೇಕಿತ್ತು, ಆದರೆ ಸಿನಿಮಾಗೆ ಸರಿಯಾದ ನ್ಯಾಯಸಿಗುವುದಿಲ್ಲ ಎಂದು ತಿಳಿದು ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶಕ ಕಿರಣ್ ರಾಜ್ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ಪಡೆದಿದ್ದಾರೆ. ಚಿತ್ರವನ್ನು ವೀಕ್ಷಿಸಿದ ಕೆಲವು ನಿರ್ಮಾಣ ಸಂಸ್ಥೆಗಳು ಮತ್ತು ವಿತರಕರಿಂದ ಭಾರೀ ರೆಸ್ಪಾನ್ಸ್ ಸಿಕ್ಕಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ಥಿಯೇಟರ್ ಪುನರಾರಂಭದ ಬಗ್ಗೆ ಸ್ಪಷ್ಟತೆ ದೊರೆತ ನಂತರ ಸಿನಿಮಾ ತಂಡವು ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದೆ.

ವಿವಿಧ ವಿತರಕರೊಂದಿಗೆ ಅಂತಿಮ ಚರ್ಚೆಯು ಈ ತಿಂಗಳ ಕೊನೆಯಲ್ಲಿ ನಡೆಯಲಿದೆ. ಫೆಬ್ರವರಿ ತಿಂಗಳಲ್ಲಿ ಸಿನಿಮಾ ಬಿಡುಗಡೆಯ ಅಧಿಕೃತ ದಿನಾಂಕವನ್ನು ಪ್ರಕಟಿಸಲಾಗುವುದು,” ಎಂದು ಕಿರಣ್‌ರಾಜ್‌ ತಿಳಿಸಿದ್ದಾರೆ.

777 ಚಾರ್ಲಿ ಸಿನಿಮಾವನ್ನು ಜಿಎಸ್ ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ಅವರ ಪರಮಾವ್ ಸ್ಟುಡಿಯೋಸ್ ಬ್ಯಾನರ್‌ ನಲ್ಲಿ ನಿರ್ಮಾಣ ಮಾಡಲಾಗಿದೆ. ಚಿತ್ರಕ್ಕೆ ನೋಬಿನ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಅರವಿಂದ್ ಕಶ್ಯಪ್ ಕ್ಯಾಮೆರಾವರ್ಕ್ ನಿರ್ವಹಿಸಿದ್ದಾರೆ. ಚಲನಚಿತ್ರವು ಧರ್ಮ (ರಕ್ಷಿತ್ ಶೆಟ್ಟಿ) ಮತ್ತು ಚಾರ್ಲಿ ಎಂಬ ನಾಯಿಯ ನಡುವಿನ ಸಂಬಂಧ ಕುರಿತಾಗಿದೆ.

ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ ಮತ್ತು ಡ್ಯಾನಿಶ್ ಸೇಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ತಮಿಳು ನಟ ಬಾಬ್ಬಿ ಸಿಂಹ ಅವರು 777 ಚಾರ್ಲಿಯೊಂದಿಗೆ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HEALTH TIPS:ಮೊಟ್ಟೆ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು;

Mon Jan 24 , 2022
ಮೊಟ್ಟೆ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದೇನೋ ನಿಜ. ಅದರೆ ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಅಷ್ಟೇ ಮುಖ್ಯ. ಇದರಿಂದ ನಮ್ಮ ದೇಹದಲ್ಲಿ ಪೌಷ್ಟಿಕಾಂಶವೂ ಹೆಚ್ಚುತ್ತದೆ. ಮೊಟ್ಟೆಯ ಹಳದಿ ಭಾಗದಲ್ಲಿ ಮಾತ್ರ ಕೊಲೆಸ್ಟ್ರಾಲ್ ಇರುತ್ತದೆ. ಬಿಳಿ ಭಾಗ ಕೊಲೆಸ್ಟ್ರಾಲ್ ಮುಕ್ತವಾಗಿದೆ. ಐಸಿಎಂಅರ್ ಮತ್ತು ಎನ್ ಐಎನ್ ಮಾರ್ಗಸೂಚಿಗಳ ಪ್ರಕಾರ ದಿನ್ಕಕೆ 300 ಗ್ರಾಂ ಕೊಲೆಸ್ಟ್ರಾಲ್ ಸೇವಿಸಬಹುದು. ಅಂದರೆ ದಿನಕ್ಕೊಂದು ಮೊಟ್ಟೆ ತಿನ್ನಬಹುದು. ಯುವಕರು ದೇಹಾರೋಗ್ಯ ಕಾಪಾಡಿಕೊಳ್ಳಲು ದಿನಕ್ಕೊಂದು ಮೊಟ್ಟೆ ಸೇವಿಸಬಹುದು. ಮಕ್ಕಳಿಗೂ […]

Advertisement

Wordpress Social Share Plugin powered by Ultimatelysocial