ಪಾಲಿಕೆ 4 ಸ್ಥಾಯಿ ಸಮಿತಿ ಚುನಾವಣೆ: 28 ಸದಸ್ಯರು ಅವಿರೋಧವಾಗಿ ಆಯ್ಕೆ!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಇಂದು ನಡೆದ 4 ಸ್ಥಾಯಿ ಸಮಿತಿ ಚುನಾವಣೆಯಲ್ಲಿ 28 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಎರಡೂ ಪಕ್ಷಗಳು ತಲಾ ನಾಲ್ಕು ಹಾಗೂ ಮೂರು ಸೂತ್ರದನ್ವಯ ಹೊಂದಾಣಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.ಹಣಕಾಸು ಸ್ಥಾಯಿ ಸಮಿತಿ: ಬಿಜೆಪಿಯ ಶಿವು ಮೆಣಸಿನಕಾಯಿ,ಸತೀಶ ಹಾನಗಲ್, ಸರಸ್ವತಿ ಧೋಂಗಡಿ, ಚಂದ್ರಿಕಾ ಮೇಸ್ತ್ರಿ, ಕಾಂಗ್ರೆಸ್‍ನಿಂದ ಇಮ್ರಾನ್ ಯಲಿಗಾರ, ಇಲಿಯಾಸ್ ಮನಿಯಾರ್, ಮಂಜುನಾಥ ಬಡಕುರಿ ಆಯ್ಕೆ ಆಗಿದ್ದಾರೆ.
ನಗರಯೋಜನಾ ಸಮಿತಿ : ಬಿಜೆಪಿಯಿಂದ ವಿಜಯಾನಂದ ಶೆಟ್ಟಿ, ಶಂಕರ ಶೇಳಕೆ,ಪೂಜಾ ಶೇಜವಾಡಕರ, ಕಿಶನ್ ಬೆಳಗಾವಿ ಕಾಂಗ್ರೆಸ್‍ನಿಂದ ರಾಜಶೇಖರ ಕಮತಿ, ಮಂಗಳಾ ಹಿರೇಮನಿ, ಗೀತಾ ಹೊಸಮನಿ ಆಯ್ಕೆಯಾಗಿದ್ದಾರೆ.ಆರೋಗ್ಯ ಸ್ಥಾಯಿ ಸಮಿತಿ: ಬಿಜೆಪಿಯ ಸುರೇಶ ಬೆದರೆ, ಆನಂದ ಯಾವಗಲ್, ಎಂ.ವೈ. ನರಗುಂದ,ದುರ್ಗಮ್ಮ ಬಿಜವಾಡ ಹಾಗೂ ಕೈ ಪಾಳೆಯದಿಂದ ಕವಿತಾ ಕಬ್ಬೇರ, ಪ್ರಕಾಶ ಕುರಹಟ್ಟಿ, ಸುನಿತಾ ಬುರಬುರೆ ಆಯ್ಕೆಯಾಗಿದ್ದಾರೆ.

ಲೆಕ್ಕಪತ್ರಗಳ ಸ್ಥಾಯಿ ಸಮಿತಿ : ಕಮಲ ಪಾಳೆಯದಿಂದ ರಾಧಾಭಾಯಿ ಸಫಾರೆ,ಅನಿತಾ ಚಳಗೇರಿ, ಲಕ್ಷ್ಮಿ ಹಿಂಡಸಗೇರಿ, ರೂಪಾ ಶೆಟ್ಟಿ ಹಾಗೂ ಕಾಂಗ್ರೆಸ್‍ನಿಂದ ಸಂದಿಲ್‍ಕುಮಾರ, ಗಣೇಶ ಮುಧೋಳ ಹಾಗೂ ಅಕ್ಷತಾ ಅಸುಂಡಿ ನಾಮಪತ್ರ ಸಲ್ಲಿಸಿದ್ದು,ಅವಿರೋಧ ಆಯ್ಕೆ ಆಗಿದ್ದರೆ. ತಲಾ 7 ಸ್ಥಾನಗಳಿಗೆ 7 ಜನ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದರೆ. . ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು. ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ ಸ್ಥಾಯಿ ಸಮಿತಿ ಚುನಾವಣೆ ಫಲಿತಾಂಶ ಪ್ರಕಟಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರೀತಿಸಿ ಮದುವೆಯಾಗಿ ಈಗ ಮತಾಂತರ ನಾಟಕವಾಡುತ್ತಿರುವ ಪತ್ನಿ;

Tue Jul 12 , 2022
ಹುಬ್ಬಳ್ಳಿ: ಅವರಿಬ್ಬರೂ ಕಳೆದ 11 ವರ್ಷಗಳ ಪ್ರೀತಿಸಿ ಮದುವೆಯಾಗಿದ್ದರು. ಈಗ ಅವರಿಬ್ಬರ ನಡುವೆ ಬಿರುಗಾಳಿ ಎದ್ದಿದೆ. ಪತ್ನಿ ಬೇರೊಬ್ಬನ ಜೊತೆ ಲವ್ವಡವ್ವಿ ಆರಂಭ ಮಾಡಿದ್ದಾಳೆ. ಇದು ಪತಿಗೆ ಗೊತ್ತಾಗಿದ್ದರಿಂದ ಅದನ್ನ ಮುಚ್ಚಿ ಹಾಕಲು ಹೆಂಡತಿ ಮತಾಂತರ ಕಾಯ್ದೆಯನ್ನ ಬಂಡವಾಳ ಮಾಡಿಕೊಂಡಿದ್ದಾಳೆ. ಇದರಿಂದ ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಗಾದೆ ಮಾತು ಇಲ್ಲಿ ನಿಜವಾಗಿದೆ.. ಪ್ರೀತಿಸಿ ಮದುವೆಯಾಗಿ ಈಗ ಮತಾಂತರದ ನಾಟಕವಾಡುತ್ತಿರುವ ಪತ್ನಿ. ಇದರಿಂದ ನೊಂದು ನ್ಯಾಯಕ್ಕಾಗಿ ಪತಿಯ ಅಲೆದಾಟ. […]

Advertisement

Wordpress Social Share Plugin powered by Ultimatelysocial