ಅನಾರೋಗ್ಯಕ್ಕೂ ಮುನ್ನವೇ ಗೊತ್ತಾಗುತ್ತೆ ಒಮಿಕ್ರಾನ್ ನ ಮೊದಲ ಲಕ್ಷಣ

ಅನಾರೋಗ್ಯಕ್ಕೂ ಮುನ್ನವೇ ಗೊತ್ತಾಗುತ್ತೆ ಒಮಿಕ್ರಾನ್ ನ ಮೊದಲ ಲಕ್ಷಣ

ಕೊರೊನಾ ವೈರಸ್‌ನ ಹೊಸ ರೂಪಾಂತರ ಒಮಿಕ್ರಾನ್‌ ಈಗ ಎಲ್ಲರ ತಲೆನೋವಿಗೆ ಕಾರಣವಾಗಿದೆ. ಡೆಲ್ಟಾ ಜೊತೆಗೆ ಒಮಿಕ್ರಾನ್ ಕೂಡ ಈಗ ಜನರನ್ನು ಕಾಡ್ತಿದೆ. ಒಮಿಕ್ರಾನ್ ವೇಗವಾಗಿ ಹರಡುತ್ತದೆ ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ. ಒಮಿಕ್ರಾನ್ ಲಕ್ಷಣಗಳು ಡೆಲ್ಟಾ ರೂಪಾಂತರಕ್ಕಿಂತ ಬೇಗ ಕಾಣಿಸಿಕೊಳ್ಳುತ್ತವೆ ಎಂಬುದು ಈಗ ಗೊತ್ತಾಗಿದೆ.

ಡೆಲ್ಟಾಗಿಂತ ಒಮಿಕ್ರಾನ್ ಲಕ್ಷಣ, ಅನಾರೋಗ್ಯಕ್ಕೆ ಒಳಗಾಗುವ ಮೊದಲೇ ಕಾಣಿಸಿಕೊಳ್ಳುತ್ತದೆ ಮತ್ತು ಅದು ಅನುಭವಕ್ಕೆ ಬರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಒಮಿಕ್ರಾನ್ ಸೋಂಕಿಗೆ ಒಳಗಾದಾಗ ಧ್ವನಿಯಲ್ಲಿ ಬದಲಾವಣೆಯಾಗುತ್ತದೆ. ಕಿರುಚಲು ಅಥವಾ ದೊಡ್ಡದಾಗಿ ಹಾಡಲು ಸಾಧ್ಯವಾಗುವುದಿಲ್ಲ. ಧ್ವನಿಯಲ್ಲಿ ಬದಲಾವಣೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಎಂದು ವೈದ್ಯರು ಹೇಳಿದ್ದಾರೆ. ಒಮಿಕ್ರಾನ್ ಗೆ ಒಳಗಾದ ಜನರಿಗೆ ಗಂಟಲು ನೋವು ಕಾಣಿಸಿಕೊಂಡಿತ್ತು ಎಂದು ವೈದ್ಯರು ಹೇಳಿದ್ದಾರೆ.

ಒಮಿಕ್ರಾನ್‌ನಿಂದ ಬಳಲುತ್ತಿರುವ ಜನರು ಒಣ ಕೆಮ್ಮು ಮತ್ತು ಸ್ವಲ್ಪ ಪ್ರಮಾಣದಲ್ಲಿ ಬೆನ್ನುನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಡೆಲ್ಟಾ ರೂಪಾಂತರಕ್ಕಿಂತ ಒಮಿಕ್ರಾನ್ ಕಡಿಮೆ ಅಪಾಯಕಾರಿ ಎಂದು ಕೆಲವು ವರದಿಗಳು ಹೇಳುತ್ತಿವೆ. ಡೆಲ್ಟಾ ರೂಪಾಂತರಕ್ಕಿಂತ ಒಮಿಕ್ರಾನ್ ಸೋಂಕಿಗೆ ಒಳಗಾದ ನಂತರ 50 ರಿಂದ 70 ರಷ್ಟು ಕಡಿಮೆ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಂಧನ ಭೀತಿಯಿಂದ ನಟಿ ಆತ್ಮಹತ್ಯೆ

Mon Dec 27 , 2021
ಮುಂಬಯಿ: NCB ಅಧಿಕಾರಿಗಳ ಸೋಗಿನಲ್ಲಿ ಕಿಡಿಗೇಡಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೆದರಿದ ಭೋಜ್ ಪುರಿ ನಟಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಸಾಂತಾಕ್ರೂಜ್ ನಲ್ಲಿರುವ ಹೋಟೆಲ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ನಕಲಿ NCB ಅಧಿಕಾರಿಗಳು ದಾಳಿ ಮಾಡಿದ್ದಾರೆ. NCB ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿದ್ದ ಕೆಲವರು ಭೋಜ್ ಪುರಿ ಸಿನಿಮಾಗಳಲ್ಲಿ ಅಭಿನಯಿಸಿದ 28 ವರ್ಷದ ನಟಿ ಮತ್ತು ಆಕೆಯ ಸಹಚರರನ್ನು ಬಂಧಿಸುವುದಾಗಿ ಬೆದರಿಸಿದ್ದಾರೆ. ಬಳಿಕ 20 […]

Advertisement

Wordpress Social Share Plugin powered by Ultimatelysocial