ನಿರಂತರವಾಗಿ ಹೋರಾಟದ ಬದುಕು ಸಾಗಿಸಿರುವ ಹೆಚ್‌.ಡಿ. ದೇವೇಗೌಡರು ಎಂದಿಗೂ ಪರ್ಸೆಂಟೇಜ್‌ ರಾಜಕಾರಣ ಮಾಡಲಿಲ್ಲ:ಕಾಂಗ್ರೆಸ್‌ ಮುಖಂಡ ಬಿ.ಎಲ್‌. ಶಂಕರ್‌

ನಿರಂತರವಾಗಿ ಹೋರಾಟದ ಬದುಕು ಸಾಗಿಸಿರುವ ಜೆಡಿಎಸ್‌ ವರಿಷ್ಠ  ಹೆಚ್‌.ಡಿ. ದೇವೇಗೌಡರು ಎಂದಿಗೂ ಪರ್ಸೆಂಟೇಜ್‌ ರಾಜಕಾರಣ ಮಾಡಲಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಎಲ್‌. ಶಂಕರ್‌ ಹೇಳಿದರು.ನಗರದಲ್ಲಿ ಸೋಮವಾರ ನಡೆದ, ದೇವೇಗೌಡರ ಜೀವನ ಚರಿತ್ರೆ ಕುರಿತಾದ ‘ಫರೋಸ್ ಇನ್ ಎ ಫೀಲ್ಡ್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂದು ಪರ್ಸೆಂಟೇಜ್‌ ಬಗ್ಗೆ ಅತಿ ಹೆಚ್ಚು ಚರ್ಚೆಗಳು ನಡೆಯುತ್ತಿವೆ.ಒಬ್ಬ ರಾಜಕಾರಣಿಯ ಬದುಕನ್ನು ಪರ್ಸೆಂಟೇಜ್‌ನಲ್ಲೇ ಅಳೆಯಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ದೇವೇಗೌಡರು ವಿಭಿನ್ನ ರಾಜಕಾರಣಿಯಾಗಿ ನಿಲ್ಲುತ್ತಾರೆ’ ಎಂದರು.ಅಂತರ್ಮುಖಿಯೂ ಆಗಿರುವ ದೇವೇಗೌಡರು ಅನೇಕ ನೋವುಗಳನ್ನು ನುಂಗಿಕೊಂಡಿದ್ದಾರೆ. ದೇಶದ ರಾಜಕಾರಣದಲ್ಲಿ ಅಪರೂಪದ ಮತ್ತು ಬದ್ಧತೆವುಳ್ಳ ವ್ಯಕ್ತಿ. ಅವರನ್ನು ನಿರ್ಲಕ್ಷಿಸಿ ಕರ್ನಾಟಕ ರಾಜಕಾರಣವನ್ನು ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ಅವರನ್ನು ಇಷ್ಟಪಡುವವರಷ್ಟೇ ಸಂಖ್ಯೆಯಲ್ಲಿ ವಿರೋಧಿಗಳೂ ಇದ್ದಾರೆ’ ಎಂದರು.

ವರ್ಚುವಲ್‌ ವ್ಯವಸ್ಥೆ ಮೂಲಕ ಕೃತಿ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ, ‘ದೇವೇಗೌಡರು ಸುದೀರ್ಘ ಅವಧಿಯವರೆಗೆ ರಾಜಕೀಯದಲ್ಲಿದ್ದರೂ ಅತ್ಯಂತ ಕಡಿಮೆ ಅವಧಿಗೆ ಅಧಿಕಾರದಲ್ಲಿದ್ದರು. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧರಾಗಿದ್ದರು’ ಎಂದರು. ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌, ‘ರಾಜಕಾರಣಿಗಳ ಜೀವನ ಚರಿತ್ರೆ ಬರೆಯುವವರಿಗೆ ಈ ಕೃತಿ ಮಾದರಿ’ ಎಂದರು.ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಎಸ್‌.ಎಸ್‌. ಮೀನಾಕ್ಷಿ ಸುಂದರಂ, ‘ಅಧಿಕಾರಿಗಳ ಮೇಲೆ ದೇವೇಗೌಡರು ವಿಶ್ವಾಸವಿಡುತ್ತಿದ್ದರು. ದೇವರು ನಮ್ಮನ್ನು ದೊಡ್ಡ ಜಾಗದಲ್ಲಿ ಇಟ್ಟಿದ್ದಾನೆ. ನಾವು ಸಣ್ಣತನ ತೋರಬಾರದು ಎನ್ನುತ್ತಿದ್ದರು’ ಎಂದು ದೇವೇಗೌಡರ ಜತೆಗಿನ ಒಡನಾಟವನ್ನು ನೆನಪಿಸಿಕೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಯಣ್ಣನ ಮೂರ್ತಿ ವಿರೂಪ ಹಾಗೂ ಶಿವಾಜಿ ಮೂರ್ತಿಗೆ ಮಸಿ ಬಳಿದವರ ವಿರುದ್ಧ ಗುಂಡಾ ಕಾಯ್ದೆ ಹಾಗೂ ದೇಶದ್ರೋಹ ಕೇಸ್ ದಾಖಲಿಸಿ:ಸಿಎಂ ಬೊಮ್ಮಾಯಿ

Tue Dec 21 , 2021
ಮಹಾರಾಷ್ಟ್ರದ 40 ಗ್ರಾಮಗಳು ಕರ್ನಾಟಕಕ್ಕೆ ಸೇರಿಸುವಂತೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಈ ಬಗ್ಗೆ ಸದನದಲ್ಲಿ ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿಯವರು ಮಾತನಾಡುತ್ತ, ಈ ಬಗ್ಗೆ ಹೇಳಿದರು.ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿರೂಪಗೊಳಿಸಿದವರು ಹಾಗೂ ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದಂತ ಬಂಧಿತರ ವಿರುದ್ಧ ಗುಂಡಾ ಕಾಯ್ದೆ ಹಾಗೂ ದೇಶದ್ರೋಹ ಕಾಯ್ದೆಗಳಡಿಯಲ್ಲಿ ಕೇಸ್ ದಾಖಲಿಸಿ, ತನಿಖೆಯ ಮೂಲಕ ಅವರ ಹಿಂದೆ ಯಾರ್ ಇದ್ದಾರೆ ಎನ್ನುವ ಬಗ್ಗೆ […]

Advertisement

Wordpress Social Share Plugin powered by Ultimatelysocial