ಆರ್​ಆರ್​ಆರ್​ ಸಿನಿಮಾ ಬಗ್ಗೆ ಕುತೂಹಲಕಾರಿ ವಿಚಾರ ಹಂಚಿಕೊಂಡ​ ರಾಜಮೌಳಿ

ಆರ್​ಆರ್​ಆರ್​ ಸಿನಿಮಾ ಬಗ್ಗೆ ಕುತೂಹಲಕಾರಿ ವಿಚಾರ ಹಂಚಿಕೊಂಡ ಎಸ್​.ಎಸ್.​ ರಾಜಮೌಳಿ

ಆರ್​ಆರ್​ಆರ್​ ಸಿನಿಮಾ ರಿಲೀಸ್​ಗೂ ಮುನ್ನವೇ ಸಾಕಷ್ಟು ವಿಚಾರಗಳ ಮೂಲಕ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈಗಾಗಲೇ ಸಿನಿಮಾದ ಟ್ರೇಲರ್​, ಟೀಸರ್​ ಹಾಗೂ ಹಾಡುಗಳು ಈಗಾಗಲೇ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿವೆ. ಮುಂಬೈನಲ್ಲಿ ನಡೆದ ಆರ್​ಆರ್​ಆರ್​ ಪ್ರಿ ರಿಲೀಸ್​ ಸಮಾರಂಭದಲ್ಲಿ ನಿರ್ದೇಶಕ ಎಸ್​.ಎಸ್.​ ರಾಜಮೌಳಿ ಜ್ಯೂನರ್​ ಎನ್​ಟಿಆರ್ ಹಾಗೂ ರಾಮ್​ಚರಣ್​​ರ ಇಂಟ್ರಾಡಕ್ಷನ್​ ಸೀನ್​ ಪ್ರಸ್ತುತಪಡಿಸಿದರು.

ಈ ವೇಳೆಯಲ್ಲಿ ಇಬ್ಬರು ನಟರ ಜೊತೆ ಕೆಲಸ ಮಾಡುವ ತಮ್ಮ ಅನುಭವವನ್ನು ಹಂಚಿಕೊಂಡರು. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಸಲ್ಮಾನ್​ ಖಾನ್​ ಭಜರಂಗಿ ಭಾಯಿಜಾನ್​ ಚಿತ್ರದ ಸೀಕ್ವೆಲ್​ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಕರಣ್​ ಜೋಹರ್​ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಎಸ್​.ಎಸ್.​ ರಾಜಮೌಳಿ ಆರ್​ಆರ್​ಆರ್​ ಸಿನಿಮಾದಲ್ಲಿ ಜ್ಯೂನಿಯರ್​ ಎನ್​ಟಿಆರ್​ ಹಾಗೂ ರಾಮ್​ಚರಣ್​​ ಪರಿಚಯದ ದೃಶ್ಯದ ಬಗ್ಗೆ ವಿವರಣೆ ನೀಡಿದರು.

ಚರಣ್​ ಹಾಗೂ ತಾರಕ್​​ರನ್ನು ರಾಮ್​ ಮತ್ತ ಭೀಮ್​ ಎಂದು ಕರೆದ ರಾಜಮೌಳಿ, ಇವರಿಬ್ಬರು ನನ್ನ ಕುಟುಂಬದ ಭಾಗವಾಗಿದ್ದಾರೆ. ನಾವು ಈ ಹಿಂದೆ ಕೂಡ ಸ್ಟಾರ್​ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ಸ್ಟಾರ್​ಡಮ್​ನಿಂದ ನಾನು ಸ್ಟಾರ್​ ನಿರ್ದೇಶಕ ಎಂಬ ಹೆಸರನ್ನು ಪಡೆದಿದ್ದೇನೆ. ಚರಣ್​ ಒಬ್ಬ ಅದ್ಭುತ ನಟ ಆದರೆ ಅವರಿಗೆ ಈ ವಿಚಾರ ತಿಳಿದಿಲ್ಲ. ತಾರಕ್​ ಕೂಡ ಅದ್ಭುತ ನಟ ಆದರೆ ಅವರಿಗೆ ಈ ವಿಚಾರ ತಿಳಿದಿದೆ ಎಂದು ಮಾರ್ಮಿಕವಾಗಿ ಮಾತನಾಡಿದ್ರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲದ ಅಧಿವೇಶನದಲ್ಲಿ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆ ಬಗ್ಗೆ ಇಂದು ನಿರ್ಧಾರ:ಸಿಎಂ ಬೊಮ್ಮಾಯಿ

Mon Dec 20 , 2021
ಬೆಳಗಾವಿಯ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸುವ ಬಗ್ಗೆ ಇಂದು ನಿರ್ಧಾರವಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡು ಮುಂದಿನ ಬುಧವಾರದ ನಂತರ ಮಸೂದೆ ಮಂಡನೆ ಮಾಡುವ ಸಾಧ್ಯತೆ ಹೆಚ್ಚಿದೆ. ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕಕ್ಕೆ ಅನುಮೋದನೆ ಸಾಧ್ಯತೆಯಿದ್ದು, ಪ್ರತಿಭಟನೆಗಳ ನಡುವೆ ವಿಧೇಯಕ ಕುರಿತ ಚರ್ಚೆಗೂ ಅನುವು ಮಾಡಿಕೊಡಬೇಕಿದೆ.ಪ್ರಸ್ತಾವಿತ ಮಸೂದೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ […]

Advertisement

Wordpress Social Share Plugin powered by Ultimatelysocial