ಎಂಇಎಸ್ ಪುಂಡಾಟಿಕೆ ಖಂಡಿಸಿ ಪ್ರತಿಭಟನೆ

ಗುಡಿಬಂಡೆ: ಇತ್ತೀಚೆಗೆ ಬೆಳಗಾವಿಯಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಗೂ ಸಂಗೊಳ್ಳಿ ರಾಯಣ್ಣ ವಿಗ್ರಹವನ್ನು ಕೆಡವಿದ ಎಂಇಎಸ್ ಪುಡಾoಟಿಕೆಯನ್ನು  ಖಂಡಿಸಿ ಕನ್ನಡಪರ ಸಂಘಟನೆಗಳು ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದವುಈ ವೇಳೆ ಮಾತನಾಡಿದ ಕರುನಾಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಫಯಾಜ್ ಮಹಾರಾಷ್ಟ್ರದ ಎಂ.ಇ.ಎಸ್ ಮತ್ತು ಶಿವಸೇನೆಯ ಮಹಾ ಪುಂಡರು ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲಿ ಬೇಕೆಂದೇ ಕೊಲ್ಲಾಪುರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿಯಿಟ್ಟು ಕನ್ನಡ ನಾಮಫಲಕಗಳು ಕಂಡಕಡೆ ವಾಹನಗಳು, ಸರಕಾರಿ ಬಸ್ಸು , ಪೋಲೀಸ್ ವಾಹನ,ಮನೆಗಳು, ಹೋಟಲುಗಳ ಮೇಲೆ ದಾಳಿ, ದಾಂಗುಡಿ ಇಡುತ್ತಾ ಸಮಾಜದಲ್ಲಿ ಭಯೋತ್ಪಾದನೆ ಬಿತ್ತುತ್ತಾ ಅಶಾಂತಿ ಉಂಟು ಮಾಡುತ್ತಿದ್ದಾರೆ. ಶಾಂತಿಪ್ರಿಯರಾದ ಕನ್ನಡಿಗರನ್ನು ಪದೇಪದೇ ಕೆಣಕುತ್ತಲೇ ಇದ್ದಾರೆ. ಕೂಡಲೇ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

ನಂತರ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಶ್ರೀನಿವಾಸ ಯಾದವ್ ಮಾತನಾಡಿ ಕನ್ನಡದ ಅಸ್ಮಿತೆಗಳಲ್ಲಿ ಒಂದಾದ ಸಂಗೊಳ್ಳಿ ರಾಯಣ್ಣನವರ ವಿಗ್ರಹಗಳನ್ನು ಅನಗೊಳ,ಸಳಗಾ ಕಡೆ ಧ್ವಂಸ ಮಾಡಿದ್ದಾರೆ.ಇದರ ವಿರುದ್ದ ಎಲ್ಲಡೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿರುವ ಹೊತ್ತಲ್ಲಿ ಅನೇಕ ನಾಮಕಾವಸ್ಥೆಯ ಸಂಘ ಸಂಘಟನೆಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಸುಮ್ಮನಾಗಿವೆ. ಸರ್ಕಾರ ಈ ಪುಂಡರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಇನ್ನು ಉಗ್ರ ಹೋರಾಟ ಹಮ್ಮಿಕೊಳ್ಳಲಾಗಿತ್ತದೆ ಎಂದರು.ಪ್ರತಿಭಟನೆಯ ಅಂಗವಾಗಿ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ತಹಶೀಲ್ದಾರ್ ಸಿಗ್ಬತ್ತುಲ್ಲಾ ರವರಿಗೆ ಮನವಿ ಪತ್ರ ಸಲ್ಲಿಸಿದರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಾಹನ ಚಾಲಕರಿಗೆ ರಸ್ತೆ ಸಚಿವಾಲಯದಿಂದ ಗುಡ್ ನ್ಯೂಸ್

Mon Dec 20 , 2021
ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವಾಲಯ(MoRTH), ಐಐಟಿ ಮದ್ರಾಸ್ ಮತ್ತು ಡಿಜಿಟಲ್ ಟೆಕ್ ಕಂಪನಿ MapmyIndia ದೊಂದಿಗೆ ಚಾಲಕ ಮತ್ತು ರಸ್ತೆ ಸುರಕ್ಷತೆ ತಂತ್ರಜ್ಞಾನಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂರು ಸೇರಿ ನಾಗರಿಕರಿಗಾಗಿ ಉಚಿತವಾಗಿ ಬಳಸಲು ನ್ಯಾವಿಗೇಷನ್ ಅಪ್ಲಿಕೇಶನ್ ಪ್ರಾರಂಭಿಸಿವೆ. ಇದು ರಸ್ತೆಯಲ್ಲಿರುವಾಗ ಮುಂಬರುವ ಅಪಘಾತ, ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಲಿದೆ. ನ್ಯಾವಿಗೇಷನ್ ಅಪ್ಲಿಕೇಶನ್ ಸೇವೆಯು ಮುಂಬರುವ ಅಪಘಾತ ಪೀಡಿತ ವಲಯಗಳು, ಸ್ಪೀಡ್ ಬ್ರೇಕರ್‌ಗಳು, ತಿರುವುಗಳು ಮತ್ತು […]

Advertisement

Wordpress Social Share Plugin powered by Ultimatelysocial