ದಾಂಪತ್ಯ ಜೀವನಕ್ಕೆ ಕಾಲಿಟ್ಟ ”ಕನ್ಯಾಕುಮಾರಿ” ಧಾರಾವಾಹಿ ನಟಿ ಯಾಮಿನಿ..!

 

ಕಿರುತೆರೆ ನಟಿ ರಶ್ಮಿತಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವತ್ತಿರುವ ಕನ್ಯಾಕುಮಾರಿ ಧಾರಾವಾಹಿ ನಟಿ ಯಾಮಿನಿ ಅಲಿಯಾಸ್ ರಶ್ಮಿತಾ ಶೆಟ್ಟಿ ಹಸೆಮಣೆ ಏರಿದ್ದಾರೆ. ಈ ಅದ್ದೂರಿ ಮದುವೆಗೆ ಕಿರುತೆರೆ ನಟ ನಟಿರು ಸಾಕ್ಷಿಯಾಗಿದ್ದಾರೆ.

ತ್ರಿವೇಣಿ ಸಂಗಮ, ಸುಬ್ಬಲಕ್ಷ್ಮಿ ಸಂಸಾರ, ಬ್ರಹ್ಮಾಸ್ತ್ರ, ಹೀಗೆ ಸಾಕಷ್ಟು ಧಾರಾವಾಹಿ ಮೂಲಕ ಮೋಡಿ ಮಾಡಿರುವ ನಟಿ ರಶ್ಮಿತಾ ಜೆ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪ್ರಸ್ತುತ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಮಿಂಚ್ತಿರುವ ರಶ್ಮಿತಾ ಖಳನಾಯಕಿಯಾಗಿ ಯಾಮಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2019ರ `ಕೃಷ್ಣ ಗಾರ್ಮೆಟ್ಸ್’ ಚಿತ್ರದಲ್ಲೂ ನಟಿಸಿ ರಶ್ಮಿತಾ ಸೈ ಎನಿಸಿಕೊಂಡಿದ್ದಾರೆ. ರಶ್ಮಿತಾ ಶೆಟ್ಟಿ ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದು, ಇದೀಗ ಮದುವೆಯ ಫೋಟೋಗಳು ಭಾರೀ ವೈರಲ್ ಆಗುತ್ತಿದೆ. ಈ ಮದುವೆ ಕನ್ಯಾಕುಮಾರಿ ಧಾರಾವಾಹಿ ತಂಡ ಕೂಡ ಸಾಕ್ಷಿಯಾಗಿದೆ. ಸಾಕಷ್ಟು ಕಿರುತೆರೆ ಕಲಾವಿದರು ನವದಂಪತಿಗೆ ಶುಭಹಾರೈಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಖದಲ್ಲಿ ಮೂಡುವ ನೆರಿಗೆಗೆ ಇಲ್ಲಿದೆ 'ಮನೆಮದ್ದು'

Fri Jun 3 , 2022
ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಅದು 20-30ರ ಹರೆಯದಲ್ಲೇ ಮೂಡುವುದುಂಟು. ಇದಕ್ಕೆ ಮುಖ್ಯ ಕಾರಣ ಅನುವಂಶೀಯತೆ, ವಿಪರೀತ ಧೂಮಪಾನ ಹಾಗೂ ದೇಹದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚುವುದು ಆಗಿರಬಹುದು. ಇದನ್ನು ಹೋಗಲಾಡಿಸುವ ಮನೆಮದ್ದುಗಳು ಇಲ್ಲಿವೆ ಕೇಳಿ. ಒಂದು ತಟ್ಟೆಗೆ ಒಂದು ಚಮಚ ಜೇನು ಹಾಗೂ ಒಂದು ಚಮಚ ಕ್ಯಾರೆಟ್ ರಸ ಬೆರೆಸಿ. ಈ ಮಿಶ್ರಣವನ್ನು ನೆರಿಗೆ ಮೂಡಿರುವ ಭಾಗಕ್ಕೆ ಹಚ್ಚಿ. ಇಪ್ಪತ್ತು ನಿಮಿಷದ […]

Advertisement

Wordpress Social Share Plugin powered by Ultimatelysocial