ಮನೆಯೊಳಗೆ ಕೆಟ್ಟ ವಾಸನೆ ಬರ್ತಿದೆಯಾ…? ಹೀಗೆ ಮಾಡಿ

ಮನೆಯೊಳಗೆ ಕೆಟ್ಟ ವಾಸನೆ ಬರ್ತಿದೆಯಾ...? ಹೀಗೆ ಮಾಡಿ

ನಿಮ್ಮ ಮನೆ ಹಾಗೂ ಕೊಠಡಿ ಗಬ್ಬು ವಾಸನೆ ಹೊಡೆಯುತ್ತಿದೆಯೇ? ಪ್ರತಿಬಾರಿ ಅದಕ್ಕಾಗಿ ರೂಮ್ ಫ್ರೆಶ್ನರ್ ತರಬೇಕಿಲ್ಲ. ಮನೆಯಲ್ಲಿರುವ ಈ ಕೆಲವು ವಸ್ತುಗಳಿಂದ ಈ ನಾತವನ್ನು ದೂರ ಮಾಡಬಹುದು.

ಮನೆಯೊಳಗೆ ಬ್ಯಾಕ್ಟೀರಿಯಗಳು ಸೇರಿಕೊಂಡಾಗ, ಒದ್ದೆ ಬಟ್ಟೆ ಅಥವಾ ಕಾರ್ಪೆಟ್ ಗಳು ಇದ್ದಾಗ ಹೀಗೆ ಮನೆ ಗಬ್ಬುವಾಸನೆ ಬರುವುದುಂಟು.

ಅದರ ನಿವಾರಣೆಗೆ ನೀವು ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಿಡಿ. ಸೂರ್ಯನ ಕಿರಣಗಳು ನೇರವಾಗಿ ಮನೆಯನ್ನು ಪ್ರವೇಶಿಸುವಂತೆ ಮಾಡಿ. ಮಳೆಗಾಲವಾದರೆ ಹೊರಗಿನ ಗಾಳಿಯಾದರು ಒಳ ಬರಲಿ.

ವಾಸನೆ ಬರುವ ಕೊಠಡಿಯಲ್ಲಿ ಒಂದು ಸಣ್ಣ ತಟ್ಟೆಗೆ ಕರ್ಪೂರದ ಹೊಗೆ ಹಾಕಿ. ಇದರ ವಾಸನೆಗೆ ಶಿಲೀಂದ್ರ ನಾಶವಾಗುತ್ತದೆ.

ವಾಸನೆ ಬರುವ ಕೊಠಡಿಯ ಮೂಲೆಯಲ್ಲಿ ಬಿಳಿ ವಿನೆಗರ್ ನ ನೀರನ್ನು ಸ್ಪ್ರೇ ಮಾಡುವುದರಿಂದಲೂ ಈ ವಾಸನೆಯನ್ನು ದೂರ ಮಾಡಬಹುದು. ಮನೆಯ ಮೂಲೆಯಲ್ಲಿ ಇಲ್ಲವೇ ಕಪಾಟಿನ ಬಳಿ ಬೇವಿನ ಎಲೆಗಳನ್ನು ಗೆಲ್ಲು ಸಮೇತ ನೀಡುವುದರಿಂದಲೂ ದುರ್ಗಂಧ ದೂರವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇನ್ಮುಂದೆ 21 ವಯಸ್ಸಿನವರೂ ʻಎಣ್ಣೆʼ ಹೊಡಿಯಬಹುದು -ಹರಿಯಾಣ ಸರ್ಕಾರ

Thu Dec 23 , 2021
ಚಂಡೀಗಢ: ಹರಿಯಾಣ ಸರ್ಕಾರವು ಬುಧವಾರ ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದಿದ್ದು, ರಾಜ್ಯದಲ್ಲಿ ಮದ್ಯ ಸೇವನೆ ಮತ್ತು ಅದರ ಖರೀದಿ, ಮಾರಾಟದ ಕಾನೂನುಬದ್ಧ ವಯಸ್ಸನ್ನು 25ರಿಂದ 21ಕ್ಕೆ ಇಳಿಸಿದೆ. ಹರಿಯಾಣ ಅಬಕಾರಿ (ತಿದ್ದುಪಡಿ) ಮಸೂದೆ- 2021 ಅನ್ನು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಈಚೆಗಷ್ಟೇ ಮದ್ಯ ಸೇವನೆ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಇಳಿಸಿದೆ. ಅಬಕಾರಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ದುಷ್ಯಂತ್‌ ಚೌತಾಲ್‌ ಅವರು ಮಸೂದೆ ಮಂಡಿಸಿದರು. ಈ ವೇಳೆ […]

Advertisement

Wordpress Social Share Plugin powered by Ultimatelysocial