ರಮ್ಯಾ ಟವೆಲ್ ಹಾಕಲು ಬಂದಿದ್ದಾರೆ: ನಲಪಾಡ್ ಕಿಡಿ!

ನಟಿ ರಮ್ಯಾ ನಿನ್ನೆ ಕರ್ನಾಟಕ ಕಾಂಗ್ರೆಸ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸರಣಿ ಟ್ವೀಟ್‌ಗೆ ಡಿ.ಕೆ.ಶಿವಕುಮಾರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿವಕುಮಾರ್ ಆಪ್ತ ಬಳಗದ ಮೊಹಮ್ಮದ್ ನಲಪಾಡ್ ಈ ಬಗ್ಗೆ ಮಾತನಾಡಿ ರಮ್ಯಾ ವಿರುದ್ಧ ಕಿಡಿ ಕಾರಿದ್ದಾರೆ.

ಡಿಸಿಎಂ‌ ಅಶ್ವಥ್ ನಾರಾಯಣ್ ಅವರನ್ನು ಮಾಜಿ ಸಚಿವ ಎಂ ಬಿ ಪಾಟೀಲ್ ಭೇಟಿಯಾದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ಖಂಡಿಸಿ ನಟಿ ರಮ್ಯಾ ಟ್ವೀಟ್ ಮಾಡಿದ್ದರು. ಆ ನಂತರ ಡಿ.ಕೆ.ಶಿವಕುಮಾರ್, ಕರ್ನಾಟಕ ಕಾಂಗ್ರೆಸ್ ವಿರುದ್ಧವೂ ಟ್ವೀಟ್ ಮಾಡಿದ್ದರು. ಇದನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಖಂಡಿಸಿದ್ದಾರೆ.

ಉಡುಪಿಯಲ್ಲಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಲಪಾಡ್, ”ರಮ್ಯಾ ಇಷ್ಟು ದಿನ ಎಲ್ಲಿದ್ದರೂ ಎಂಬುದು ಗೊತ್ತಿಲ್ಲ. ಇಷ್ಟು ತಿಂಗಳು, ಇಷ್ಟು ವರ್ಷ ರಮ್ಯಾ ಎಲ್ಲಿದ್ದರು? ಎಲ್ಲೂ ಇಲ್ಲದ ರಮ್ಯಾ ಈಗ ಅಚಾನಕ್ಕಾಗಿ ಏಕೆ ಬಂದಿದ್ದಾರೆ. ರಮ್ಯಾ ರಾಜಕೀಯದಲ್ಲಿ ತನ್ನ ಅಸ್ತಿತ್ವ ತೋರಿಸಲು ಬಂದಿದ್ದಾರಾ? ನಾನು ಒಬ್ಬಳು ಇದೀನಿ ಅಂತಾ ತೋರಿಸಿಕೊಳ್ಳುತ್ತಿದ್ದಾರಾ? ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ. ರಮ್ಯಾ ಬಂದದ್ದು ಯಾಕೆ ಹೀಗೆಲ್ಲಾ ಮಾಡುತ್ತಿರುವುದು ಯಾವುದಕ್ಕೆ ಅಂತ ನಾವು ಅರ್ಥ ಮಾಡಿಕೊಳ್ಳಬೇಕು” ಎಂದ ನಲಪಾಡ್, ರಮ್ಯಾ ರಾಜ್ಯ ರಾಜಕಾರಣದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಯತ್ನದಲ್ಲಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ: ನಲಪಾಡ್ಎಂಬಿ ಪಾಟೀಲ್ ಕುರಿತು ಎದ್ದಿರುವ ವಿವಾದದ ಬಗ್ಗೆ ಡಿಕೆ ಶಿವಕುಮಾರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ”ಎಂಬಿ ಪಾಟೀಲ್ ಅಶ್ವತ್ ನಾರಾಯಣ್ ಭೇಟಿ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ. ಹೌದಪ್ಪ. ಬಂದಿರಬಹುದು ರಕ್ಷಣೆಗೋಸ್ಕರ ಎಂದು ಹೇಳಿದ್ದಾರೆ. ಎಂಬಿ ಪಾಟೀಲ್ ಹೋಗಿದ್ದಾರೆ ಎಂದು ಎಲ್ಲೂ ಡಿಕೆ ಶಿವಕುಮಾರ್ ಹೇಳಿಲ್ಲ. ಕಾಂಗ್ರೆಸ್‌ ಎಲ್ಲ ನಾಯಕರು ಒಗ್ಗಟ್ಟಾಗಿದ್ದಾರೆ‌. ಡಿಕೆಶಿ, ಎಂಬಿ ಪಾಟೀಲ್, ಸಿದ್ದರಾಮಯ್ಯ ನಾವೆಲ್ಲ ಜೊತೆಗಿದ್ದೇವೆ ಎಂದು ನಲಪಾಡ್ ಸ್ಪಷ್ಟಪಡಿಸಿದ್ದಾರೆ.

”ರಮ್ಯಾ ಸುಮ್ಮನೆ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ”

”ರಮ್ಯಾ ಸುಮ್ಮನೆ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ರಮ್ಯಾ ಈಗ ಎಲ್ಲರ ಗಮನ ಅವರ ಕಡೆಗೆ ಕೇಂದ್ರಿಕರಿಸಲು ಹೀಗೆ ಮಾಡಿದ್ದಾರೆ. ರಮ್ಯಾ ನಾನು ಇನ್ನೂ ಇದ್ದೀನಿ ಎಂದು ತೋರಿಸಿ ಕೊಳ್ಳುತ್ತಿರಬಹುದು. ನನಗೂ ಒಂದು ಕುರ್ಚಿ ಕೊಡಿ ಎಂದು ಟವಲ್ ಹಾಕುತ್ತಿರಬಹುದು. ಈ ವಿಚಾರಕ್ಕೂ ರಮ್ಯಾಗೂ ಏನು ಸಂಬಂಧ? ರಮ್ಯಾ ಅವರ ಹಳೆಯ ಟ್ವೀಟ್ ಗಳನ್ನು ತೆಗೆದುಕೊಂಡು ನೋಡಿ. ಯಾವುದೋ ಸಿನಿಮಾಗಳ ಬಗ್ಗೆ ಮಾತ್ರ ಟ್ವೀಟ್ ಮಾಡಿಕೊಂಡಿದ್ದರು. ಇತ್ತೀಚಿಗೆ ಅವರು ಯಾವುದೇ ರಾಜಕೀಯ ಟ್ವೀಟ್ ಗಳನ್ನು ಮಾಡಿಲ್ಲ. ರಮ್ಯಾ ಸಡನ್ನಾಗಿ ಯಾಕೆ ನಮ್ಮ ನಾಯಕರ ಮೇಲೆ ಬಿದ್ದಿದ್ದಾರೆ. ಇದರಲ್ಲಿ ಯಾವುದೋ ಒಳ ಉದ್ದೇಶ ಇದೆ. ನಟಿ ರಮ್ಯಾಗೆ ಯಾರು ಹೆಚ್ಚು ಇಂಪಾರ್ಟೆನ್ಸ್ ಕೊಡಬಾರದು” ಎನ್ನುವ ಮೂಲಕ ರಮ್ಯಾ ಡಿ.ಕೆ.ಶಿವಕುಮಾರ್ ವಿರುದ್ಧ ದುರುದ್ಧೇಶಪೂರ್ವಕವಾಗಿ ಟ್ವೀಟ್ ಮಾಡಿದ್ದಾರೆ ಎಂದಿದ್ದಾರೆ ನಲಪಾಡ್.

ರಮ್ಯಾ, ಒಳ್ಳೆಯವರೇ: ನಲಪಾಡ್

”ರಮ್ಯಾ, ಒಳ್ಳೆಯವರೇ. ಚಿಕ್ಕ ವಯಸ್ಸಿನಲ್ಲಿ ಸಂಸದರಾದವರು. ರಮ್ಯಾ ಈಗಾಗಲೇ ಒಳ್ಳೆಯ ಸಾಧನೆಗಳನ್ನು ಮಾಡಿದ್ದಾರೆ. ನಾನು ರಮ್ಯಾ ಅವರ ವಿರುದ್ಧ ಇಲ್ಲ. ನಟಿ ರಮ್ಯಾ ಇಂತಹ ಚೀಪ್ ಪಾಲಿಟಿಕ್ಸ್ ಮಾಡಬಾರದು‌. ರಮ್ಯಾ ಅವರು ಆರೋಗ್ಯ ತಪಾಸಣೆ ಮಾಡಿಸಬೇಕು” ಎಂದು ಖಾರವಾಗಿ ನುಡಿದಿದ್ದಾರೆ ನಲಪಾಡ್.

ನಾವೆಲ್ಲರೂ ಒಗ್ಗಟ್ಟಾಗಿದ್ದೀವಿ: ರಮ್ಯಾ

ಯಾರು ಮುಂದಿನ ಮುಖ್ಯಮಂತ್ರಿ ಅನ್ನೋದು ಮುಖ್ಯ ಅಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಮುಖ್ಯ. ಕಾಂಗ್ರೆಸ್ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ. ಕಾಂಗ್ರೆಸ್ ಇದ್ದರೆ ಮಾತ್ರ ರಾಜ್ಯ ಮತ್ತು ರಾಷ್ಟ್ರದಲ್ಲಿ ಜನಪರ ಕೆಲಸ ಆಗಲು ಸಾಧ್ಯ. ಕಾಂಗ್ರೆಸ್ ಪಕ್ಷ ಇದ್ದಿದ್ದರೆ ದೇಶದ ನಿರುದ್ಯೋಗ ಸಮಸ್ಯೆ ಇರುತ್ತಿರಲಿಲ್ಲ. ಬಂಡೆ ನಾ ಹಂಗೆಲ್ಲಾ ಒಡೆಯಕ್ಕೆ ಆಗಲ್ಲ ಅಂತಾ ಮಹಮ್ಮದ್ ನಲಪಾಡ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅವಧಿ ಮುನ್ನವೇ ಮಾನ್ಸೂನ್​ ಪ್ರವೇಶ, ಈ ದಿನಾಂಕದಿಂದ ಭಾರೀ ಮಳೆಯಾಗಲಿದೆ:

Fri May 13 , 2022
  ನವದೆಹಲಿ: ಈ ವರ್ಷ ಮಾನ್ಸೂನ್​ ಅವಧಿಗೂ ಮುನ್ನವೇ ಪ್ರವೇಶಿಸಲಿದ್ದು, ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್​ ತಿಂಗಳಲ್ಲಿ ದಾಖಲೆಯ ತಾಪಮಾನದ ನಡುವೆ ಇದೀಗ ಮಾನ್ಸೂನ್​ ಮಳೆಯಿಂದಾಗಿ ತಾಪಮಾನ ಇಳಿಕೆಯಾಗಲಿದ್ದು, ದೇಶದ ಎಲ್ಲಾ ಭಾಗಗಳಲ್ಲೂ ಈ ಬಾರಿ ಮಾನ್ಸೂನ್​ ಮಳೆ ಬೇಗವೇ ಬರಲಿದೆ. ಕೆಲವೆಡೆ ಅಕಾಲಿಕ ಮಳೆ ಸುರಿಯತ್ತಿದ್ದು, ಇದರಿಂದ ವಾತಾವರಣವನ್ನು ತಂಪು ಮಾಡಿದೆಯಾದರೂ, ಮೇ ತಿಂಗಳಾರ್ಧದಲ್ಲಿ ಸುರಿಯುವ ಮಳೆ ಭಾರೀ ಅನುಕೂಲಕರವಾಗಲಿದೆ. ಅಸನಿ ಚಂಡಮಾರುತದಿಂದಾಗಿ ಪೂರ್ವ […]

Advertisement

Wordpress Social Share Plugin powered by Ultimatelysocial