ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಕುರುಡನ ಮುಂದೆ ಆನೆ‌ ನಿಲ್ಲಿಸಿ ಏನು ಅಂತ ಕೇಳುವಂತಾಗಿದೆ.ಸತ್ತವರನ್ನು ಜೆಸಿಬಿಗಳಲ್ಲಿ  ಕೊಂಡೊಯ್ದು ಸಮಾಧಿ ಮಾಡ್ತಿದ್ದಾರೆ. ದೇಶದ ಇತಿಹಾಸದಲ್ಲಿ  ಇಂಥಹ ಸ್ಥಿತಿ ಬಂದಿರಲಿಲ್ಲ. ಮೆಡಿಕಲ್ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು  ಸರ್ಕಾರದ ವಿರುದ್ಧ ಕಿಡಿಕಾರಿದರು.

ಸರ್ಕಾರದ ವಿರುದ್ಧ ನಾನು ಸುಖಾಸುಮ್ಮನೆ ಆರೋಪ ಮಾಡಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ  ಮಾತನಾಡಿದ ಅವರು,ದಾಖಲೆ ಇಟ್ಟು ನಾನು ಮಾತಾಡುತ್ತೇನೆ .ಸಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಜನತೆಯ ದುರಾದೃಷ್ಟ ಪ್ರವಾಹ ಮತ್ತು ಕೋವಿಡ್ ಅನುಭವಿಸುತ್ತಿದ್ದಾರೆ. ಸರ್ಕಾರ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಸರ್ಕಾರದ ವೈಫಲ್ಯಗಳನ್ನ ನಾವು ಮನೆಮನೆಗೆ ತಲುಪಿಸಬೇಕಿದೆ. ಕಾರ್ಯಕರ್ತರು ಈ ವಿಷಯವನ್ನ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಸೆಲಬ್ರಿಟಿಗಳ ಜೀವನ ಅಂದ್ರೆ ಯಾವಾಗಲೂ ಕಲರ್​​​​​​​​​​​​​​​​​​​​​​​​​​​​​​​ಫುಲ್ ಆಗಿರುತ್ತದೆ. ಯಾವುದಾದರೂ ಸಭೆ, ಸಮಾರಂಭ ಎಂದರೆ ಸಾಕು ಸೆಲಬ್ರಿಟಿಗಳು ಎಂದಿಗಿಂತ ಸಖತ್ ಮಿಂಚುತ್ತಾರೆ. ಅಲ್ಲದೆ ಅವರ ಯೋಚನೆಗಳು ಕೂಡಾ ಬಹಳ ವಿಭಿನ್ನವಾಗಿರುತ್ತದೆ. ಏನೇ ಕೆಲಸ ಮಾಡಿದರೂ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಮುನ್ನುಗ್ಗುವ ಸೆಲಬ್ರಿಟಿಗಳು ಲಾಕ್​​ ಡೌನ್​​​​ನಲ್ಲಿ ಕೂಡಾ ಸುಮ್ಮನೆ ಕೂರುವ ಜಾಯಮಾನದವರಲ್ಲ. ಅದೇ ಸಾಲಿಗೆ ಸಿಂಪಲ್ ಸುಂದ್ರಿ ಶ್ವೇತಾ ಶ್ರೀವಾತ್ಸವ್ ಕೂಡಾ ಸೇರುತ್ತಾರೆ. ಸೊಶೀಯಲ್  ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಇರುವ ಶ್ವೇತಾ ಏನಾದರೂ […]

ತುಮಕೂರಿನಲ್ಲಿ  ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ತುಮಕೂರಿನಲ್ಲಿರುವ ಡಿಎಚ್ ಒ ಕಚೇರಿಯಲ್ಲಿ ಸಾಮಾಜಿಕ ಅಂತರ ಮರೆತ ಜನತೆ.  ಟಿ.ಬಿ.ಮೇಲ್ವಿಚಾರಕರು ಹಾಗೂ ಸ್ಟಾಪ್ ನರ್ಸ್ ಹುದ್ದೆಗಳಿಗೆ ನಡೆಯುತಿದ್ದ ಇಂಟರ್ವ್ಯೂನಲ್ಲಿ ನೂಕು ನುಗ್ಗಲು. ಡಿಎಚ್ ಒ ಕಚೇರಿ ಆವರಣದಲ್ಲಿ ಗುಂಪು ಗುಂಪಾಗಿ ಸೇರಿದ ಸಂದರ್ಶಕರು ಹಾಗೂ ಸಾಮಾಜಿಕ ಅಂತರವನ್ನೇ ಮರೆತ ಅಭ್ಯರ್ಥಿಗಳು ಇದನ್ನು ಕಂಡು ಕಾಣದಂತೆ ಸುಮ್ಮನಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು.    

ನಾನು ವಿಪಕ್ಷ ನಾಯಕನಾಗಿ ಸರ್ಕಾರಕ್ಕೆ ಲೆಕ್ಕ ಕೊಡಿ ಅಂತ ಕೇಳಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಲೆಕ್ಕ ಕೇಳುವ ಕಾಂಗ್ರೆಸ್ ನವರಿಗೆ ಕೆಲಸ ಇಲ್ಲ ಎಂಬ ಸುಧಾಕರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ಪ್ರಜಾಪ್ರಭುತ್ವದಲ್ಲಿ ಲೆಕ್ಕ ಯಾರಿಗೆ ಕೊಡಬೇಕು. ಜನಪ್ರತಿನಿಧಿಗಳಿಗೆ, ಜನರಿಗೆ ಉತ್ತರ ಕೊಡಬೇಕು. ನಾನು ಮೂರು ಸರಿ ಪತ್ರ ಬರೆದಿದ್ದೀನಿ, ಉತ್ತರ ಕೊಟ್ಟಿದ್ದಾರಾ?.ನಿನ್ನೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸುಳ್ಳು ಹೇಳಿರುವುದು ಎಂದು ಸರ್ಕಾರದ ವಿರುದ್ಧ  ಕಿಡಿಕಾರಿದರು.

ರಾಯಚೂರು  ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಅವರ ಹುಟ್ಟು ಹಬ್ಬದ ನಿಮಿತ್ತ ಕಾಂಗ್ರೆಸ್ ಮುಖಂಡರಿಂದ ಬಡ ರೋಗಿಗಳಿಗೆ ಮಾಸ್ಕ್ ಬ್ರೆಡ್ ಮತ್ತು ಬಾಳೆ ಹಣ್ಣು ವಿತರಣೆ ಮಾಡಲಾಯಿತು.ಈ ಬಳಿಕ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹೆಚ್.ಪಿ ಪಂಪಾಪತಿ ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರು ದೇವದುರ್ಗ ತಾಲೂಕಿನ ಅಭಿವೃದ್ಧಿ ಹರಿಕಾರರು ದಿನದಲಿತ ನಾಯಕರಿಗೆ 60 ನೇ ಹುಟ್ಟು […]

ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ್ ಪಟ್ಟಣದಲ್ಲಿ 3ನೇ ಹಂತದ ನಗರೋತ್ಥಾನ ಕಾಮಗಾರಿ ಯನ್ನ ಸ್ಥಳೀಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ವಾತಿ ದರಗಿ ಚಾಲನೆ ನೀಡಿದರು.ಬಹುದಿನದಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಮರು ಚಾಲನೆ ನೀಡುವ ಮೂಲಕ ಸ್ವಾತಿ ದರಗಿಯವರು ದಿಟ್ಟ ಹೆಜ್ಜೆಯನ್ನಇಟ್ಟಿದ್ದಾರೆ. ರಸ್ತೆಯ ಮೇಲೆ ಒತ್ತುವರಿ ಮಾಡಿದಂತಹ ಕಟ್ಟೆ , ಕಾಂಪೋಂಡ್ ಗಳನ್ನು ತೆರವು ಗೊಳಿಸಲಾಯಿತು.ಸಾರ್ವಜನಿಕರು ಕಾಮಗಾರಿಯನ್ನು ಅಡ್ಡಿಪಡಿಸಿದಾಗ ಅವರನ್ನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಹಿಳಾ ಅಧಿಕಾರಿಯ ಕಾರ್ಯ ವೈಖರಿಯನ್ನು […]

ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದೆ. ಖಾಸಗಿ ಆಸ್ಪತ್ರೆಗಳಲ್ಲಿನ ಕೊರೊನಾ ವೈರಸ್ ಪರೀಕ್ಷಾ ದರವನ್ನು ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಒಂದು ಕೊರೊನಾ ಪರೀಕ್ಷೆಗೆ 4 ಸಾವಿರಕ್ಕಿಂತಲೂ ಅಧಿಕ ಹಣ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಗಳು ಈಗ ಗರಿಷ್ಠ 3 ಸಾವಿರ ರೂ. ಪಡೆಯುವಂತೆ ಸರ್ಕಾರ ದರವನ್ನು ನಿಗದಿಪಡಿಸಿದೆ. ಸರ್ಕಾರದಿಂದ ಪರೀಕ್ಷೆಗೆ ಶಿಫಾರಸು ಪಡೆದು ಹೋದವರಿಗೆ […]

ಅಮೆರಿಕದಲ್ಲಿ ಸೋಂಕಿನ ಪರಿಸ್ಥಿತಿ ನಿರ್ವಹಣೆಗಾಗಿ ೩ ಟ್ರಿಲಿಯನ್ ಡಾಲರ್‌ಗಳ ಪ್ಯಾಕೇಜ್ ಅಂಗೀಕರಿಸಲಾಗಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಯಲ್ಲಿ ಈ ಅಂಶ ರಿಪಬ್ಲಿಕನ್, ಡೆಮಾಕ್ರಾಟಿಕ್ ಪಕ್ಷಗಳಿಗೆ ಪ್ರಮುಖವಾಗಿದೆ. ಆದರೆ ಪ್ಯಾಕೇಜ್ ಅಂಗೀಕರಿಸುವ ಮೊದಲು ಅಧ್ಯಕ್ಷ ಟ್ರಂಪ್ ಭಾರಿ ಸವಾಲನ್ನೇ ಎದುರಿಸಬೇಕಾಯಿತು. ಸೆನೆಟ್‌ನಲ್ಲಿ ಆಡಳಿತ ಪಕ್ಷದ ನಾಯಕರಾಗಿರುವ ಮಿಶ್ ಮೆಕ್‌ಕಾನೆಲ್ ಅವರು ಕೊರೊನಾಗಾಗಿ ೧ ಟ್ರಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್‌ನ್ನು ಬಿಡುಗಡೆ ಮಾಡುವ ಪ್ರಸ್ತಾವನೆ ಮಂಡಿಸಿದರು. ಆದರೆ, ಪ್ಯಾಕೇಜ್ ಘೋಷಣೆ ವಿಷಯದಲ್ಲಿ ಟ್ರಂಪ್ […]

ಶ್ರೀಲಂಕಾ ಮಹಿಳಾ ಕ್ರಿಕೆಟ್​ ತಂಡದ ವೇಗಿ ಸ್ರಿಪಾಲಿ ವೀರಕ್ಕೋಡಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಶ್ರೀಲಂಕಾ ಪರ 89 ಏಕದಿನ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ. ಹಾಗೇ 2018ರಲ್ಲಿ ಬಾಂಗ್ಲಾದೇಶ ವಿರುದ್ಧ ಅವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. 2006ರಂದು ಜೈಪುರದಲ್ಲಿ ಪಾಕಿಸ್ತಾನ ವಿರುದ್ದ ಪಾದಾರ್ಪಣೆ ಮಾಡಿದ್ದ ಅವರು 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ತೆರೆ ಎಳೆದಿದ್ದಾರೆ. ನಾನು ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಅದಕ್ಕೆ ಇದು ಸರಿಯಾದ ಸಮಯ ಎಂದು […]

Advertisement

Wordpress Social Share Plugin powered by Ultimatelysocial