ಕೋವಿಡ್ ಮಹಾಮಾರಿ ಹಾಲು ಉತ್ಪಾದಕರ ಬದುಕಿನ ಮೇಲೂ ಪರಿಣಾಮ ಬೀರಿದೆ. ಸರಕಾರವು ಹಾಲು ಉತ್ಪಾದಕರಿಗೆ ಕಳೆದ ಮೂರು ತಿಂಗಳಿAದ ಪ್ರೋತ್ಸಾಹಧನ ನೀಡಿಲ್ಲ. ಜತೆಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಹಾಲು ಖರೀದಿ ದರವನ್ನು ಇತ್ತೀಚೆಗೆ ೧ ರೂಪಾಯಿಷ್ಟು ಇಳಿಸಿದೆ. ಇದು ಹಾಲು ಉತ್ಪಾದಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜಿಲ್ಲೆಯಲ್ಲಿ ಹಲವು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಮಂದಿಗೆ ಅದುವೇ ಜೀವನಾಧಾರ. ಜಾನುವಾರುಗಳ ಆಹಾರ ಪದಾರ್ಥಗಳಾದ ಬೂಸಾ, ಹಿಂಡಿ, ಹೊಟ್ಟು, […]

ಕೆರೆ ಕಾಮೇಗೌಡ ಎಂದೇ ಖ್ಯಾತಿ ಪಡೆದಿರುವ ಕಲ್ಮನೆ ಕಾಮೇಗೌಡರಿಗೂ ಕೊರೋನಾ ಪಾಸಿಟಿವ್ ಧೃಢಪಟ್ಟಿದೆ. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳಿಂದ ಬಲಗಾಲಿಗೆ ಗಾಯಗೊಂಡು, ಮಳವಳ್ಳಿ ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಂತ ಆಧುನಿಕ ಭಗೀರತ ಕಾಮೇಗೌಡರು, ಇತ್ತೀಚೆಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಕಾಮೇಗೌಡರನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಿದಾಗ, ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಅವರನ್ನು ಕೋವಿಡ್ -19 ಆಸ್ಪತ್ರೆಗೆ ದಾಖಲಿಸಿ […]

ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನ ಸೈನಿಕರ ಚಲನವಲನಗಳ ಮೇಲೆ ನಿಗಾ ಹೆಚ್ಚಿಸಲು ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ‘ಭಾರತ್’ ವಿಶೇಷ ಡ್ರೋನ್‌ಗಳನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ಈ ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಡಿಆರ್‌ಡಿಒದ ಚಂಡೀಗಢ ಪ್ರಯೋಗಾಲಯ ಅಭಿವೃದ್ಧಿಪಡಿಸಿದೆ. ವಿಶ್ವದ ಅತ್ಯಂತ ಚುರುಕು ಬುದ್ಧಿ ಮತ್ತು ಹಗುರವಾದ ಕಣ್ಗಾವಲು ಡ್ರೋನ್‌ಗಳ ಪಟ್ಟಿಗೆ ಇವು ಸೇರಬಲ್ಲವು ಎಂದು ಡಿಆರ್‌ಡಿಒ ವಿಶ್ವಾಸ ವ್ಯಕ್ತಪಡಿಸಿದೆ. ಪೂರ್ವ ಲಡಾಖ್‌ನ ಅತೀ […]

ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಸಚಿನ್ ಪೈಲಟ್ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಮಗೆ ಸಚಿನ್ ಪೈಲಟ್​ ಒಬ್ಬ ಅಪ್ರಯೋಜಕ, ಕೆಲಸಕ್ಕೆ ಬಾರದವನು ಅನ್ನೋದು ಗೊತ್ತಿತ್ತು, ಒಂದು ಸ್ವಲ್ಪವೂ ಕೆಲಸ ಮಾಡ್ತಿರಲಿಲ್ಲ. ಬರೇ ಜನರ ಜೊತೆ ಕಾನೂನು ಮಾತಾಡ್ತಿದ್ದ.. ೧೦-೧೨ ವರ್ಷಗಳಲ್ಲಿ ಅವನು ರಾಜಸ್ಥಾನ ರಾಜಕಾರಣದಲ್ಲಿ ದೊಡ್ಡಮಟ್ಟಕ್ಕೆ ಬೆಳೆದ, ಸಣ್ಣ ವಯಸ್ಸಿಗೇ mಠಿ ಯಾಗಿ, ಕೇಂದ್ರದಲ್ಲಿ ಸಚಿವನಾಗಿ ರಾಜ್ಯ ಕಾಂಗ್ರೆಸ್​ನ ಅಧ್ಯಕ್ಷನೂ ಆಗಿದ್ದ. ಅವನಿಗೆ ಎಲ್ಲವೂ […]

ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದೆ. ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ ಮಾಡಲಾಗುವುದು ಆದರೆ ಎಷ್ಟು ಸಂಬಳ ಹೆಚ್ಚಳ ಮಾಡಬೇಕು ಎಂಬುದನ್ನು ಸರ್ಕಾರದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮುಖ್ಯಮಂತ್ರಿ ಅವರು ನಿರ್ಧಾರ ಮಾಡಲಿದ್ದಾರೆ. 2-3 ದಿನಗಳಲ್ಲಿ ಆದೇಶ ತಿಳಿಯಲಿದೆ ಹಾಗೂ ದೇಶದಲ್ಲಿ ಕೊರೊನಾ ಇನ್ನೂ ಸಮುದಾಯ ಹಂತಕ್ಕೆ ತಲುಪಿಲ್ಲ. ಕಳೆದ 15 ದಿನಗಳಿಂದ […]

ಹಳ್ಳಿಗಳಲ್ಲಿ ಕೊರೊನಾದಿಂದ ಮರಣ ಮೃದಂಗವಾಗುತ್ತಿದೆ.ಮುಂದಿನ ಮೂರು ತಿಂಗಳು ಹಳ್ಳಿಗಳಿಗೆ ಕಂಟಕ ಎಂದು ಜಗತ್ ಪ್ರಸಿದ್ಧ ಸು ಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಾಚಾರ್ಯ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.ಹಳ್ಳಿಗಳ ಜನರು ಎಚ್ಚರದಿಂದ ಇರಬೇಕು ಎಂದು ಸ್ವಾಮೀಜಿ ಮನವಿ ಮಾಡಿಕೊಂಡಿದ್ದು, ಸ್ಚಚ್ಛತೆ, ಸುರಕ್ಷತೆ, ಅಂತರ ಕಾಪಾಡಿ ಎಂದು ಎಚ್ಚರಿಸಿದ್ದಾರೆ. ಸರ್ಕಾರದ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ. ಕೊರೊನಾ ಗಾಳಿಯಲ್ಲಿ ಸಂಚಾರ ಮಾಡೋದು ಕಡಿಮೆ, ಸರ್ಕಾರದ ತೀರ್ಮಾನಗಳು ಕೊರೊನಾ ಕಾಯಿಲೆ ಹೆಚ್ಚು ಮಾಡಿದ್ದು ಮತ್ತೊಂದು […]

ಡಾ ಬಾಬಾ ಸಾಹೇಬ್ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ರಾಜ್ಯದ ಡಿ ಎಸ್ ಎಸ್ ಸಂಘಟನೆ ದೀನರ,ದುರ್ಬಲ, ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಎದುರಿಸುತ್ತಾ ಕೊಲೆ,ಸುಲಿಗೆ ,ಸಾಮಾಜಿಕ ಬಹಿಷ್ಕಾರ, ಇನ್ನಿತರೆ ಪ್ರಕರಣಗಳಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ ವಿಜಯಪುರ ಜಿಲ್ಲೆ ಉಪವಿಭಾಗದ ಅಧಿಕಾರಿ ಡಿ ವೈ ಎಸ್ ಪಿ ಶ್ರೀ.ಎಂ.ಬಿ ಸಂಕದ ಅವರು ದಲಿತರ ಮೇಲೆ ದೌರ್ಜನ್ಯ ನಡೆಯಲು ನೇರ ಕಾರಣರಾಗಿದ್ದಾರೆ. ಇವರ ಕರ್ತವ್ಯದಲ್ಲಿ ಬಹುತೇಕ ದೌರ್ಜನ್ಯ […]

ವಿಜಯಪುರ ತಾಲ್ಲೂಕಿನ ಅಲಿಯಾಬಾದ್ ನಲ್ಲಿ ಅಕ್ರಮ ಸಂಬಂಧ ಆರೋಪದ ಹಿನ್ನೆಯಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ. ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವಕ ರೆಡ್ ಹ್ಯಾಂಡ್ ಆಗಿ ಸಿಕ್ಕು, ವಯಸ್ಸಲ್ಲದ ವಯಸ್ಸಲ್ಲಿ ಹೆಣವಾಗಿದ್ದಾನೆ. ವಿಜಯಪುರ ತಾಲ್ಲೂಕಿನ ಅಲಿಯಾಬಾದ್ ಗ್ರಾಮದಲ್ಲಿ ಮದ್ಯರಾತ್ರಿ ಘಟನೆ ನಡೆದಿದೆ. 25 ವರ್ಷದ ಅಮರನಾಥ ಸೊಲ್ಲಾಪುರ 35 ವರ್ಷದ ಸುನೀತಾ ತಳವಾರ್ ಕೊಲೆಯಾದವರು. ಇನ್ನು ನಿನ್ನೆ ರಾತ್ರಿ ಮಹಿಳೆ ಸುನಿತಾಳೊಂದಿಗೆ ಸರಸ ಸಲ್ಲಾಪಕ್ಕೆ ಬಂದಿದ್ದ ಪ್ರಿಯಕರ ಅಮರನಾಥ್ […]

ಅರಸೀಕೇರೇಯಲ್ಲಿ ಚಿರತೆಯೊಂದು ಕೆಲವು ದಿನಗಳಿಂದ ಗ್ರಾಮದ ಜನರ ನಿದ್ದೆ ಕೆಡಿಸಿತ್ತು, 10 ದಿನದಿಂದ ಪತ್ರಕರ್ತ ಮೋಹನ ಅವರ ತೋಟಕ್ಕೆ ಬಂದು ಹೋಗುತ್ತಿತ್ತು ಮತ್ತು ನಾಯಿ, ಹಸುಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು, ಜನರು ಚಿರತರಯಿಂದಾಗಿ ಆತಂಕದಲ್ಲಿದ್ದರು, ಅದಕ್ಕಾಗಿ ಅರಣ್ಯ ಇಲಾಖೆಯವರಿಗೆ ತಿಳಿಸಿದ್ದಾಗ, ಚಿರತೆಯನ್ನು ಹಿಡಿಯಲು ಬೋನು ಇಟ್ಟಿದ್ದರು. ನೆನ್ನೆ ರಾತ್ರಿ ಚಿರತೆ ಬಂದು ಬೋನಿಗೆ ಬಿದ್ದಿದೆ ಅರಣ್ಯ ಇಲಾಖಾ ಅಧಿಕಾರಿ ಅದನ್ನು ವಶಕ್ಕೆ ಪಡೆದು ಬೇರೆಕಡೆಗೆ ಸಾಗಿಸಿದರು.

ಬೆಂಗಳೂರು ,ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ ಡೌನ್ ತೆರವುಗೊಳಿಸಿದ ಕಾರಣ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಹಜ ರೀತಿಯಲ್ಲಿ ವಾಹನ ಸಂಚಾರ ಆರಂಭವಾಗಿದ್ದು,ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ ಯಥಾವತ್ತಾಗಿ ಟೋಲ್ ಸಂಗ್ರಹವಾಗುತ್ತಿದೆ. ಹಾಗು ಪ್ಲೈ ಒವರ್ ಗಳಲ್ಲಿ ಹಾಕಿದ್ದ ಬ್ಯಾರಿಕೇಡ್ ತೆರವುಗೊಳಿಸಿ ಮುಕ್ತ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು ಎಂದಿನಂತೆ ಗೂಡ್ಸ್ ವಾಹನಗಳು ಸಹ ಸಂಚರಿಸುತ್ತಿವೆ. ನೆಲಮಂಗಲ ಹೆದ್ದಾರಿಗಳಲ್ಲಿ ಸಹಜವಾಗಿ ಟೋಲ್ ಸುಂಕ ಪಾವತಿಸಿ ವಾಹನಗಳು ಸಂಚರಿಸುತ್ತಿವೆ.ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಬೆಂಗಳೂರಿಗೆ […]

Advertisement

Wordpress Social Share Plugin powered by Ultimatelysocial