ನವಜಾತ ಶಿಶುವನ್ನು ಹೊತ್ತುಕೊಂಡು ಊರಿಗೆ ತೆರಳಲಾಗದ ಬಾಣಂತಿ ಹಾಗೂ ಅವರ ಪೋಷಕರಿಗೆ ಪೊಲೀಸರು ಊರಿಗೆ ತಲುಪಲು ಸಹಾಯ ಮಾಡುವ ಮೂಲಕ ಮಾನವೀಯತೆ ತೋರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಿತ್ತೂರಿನ ಮಹಿಳೆಯೊಬ್ಬರು ಹೆರಿಗೆಗೆಂದು ನಗರ ಸಿಟಿ ಕ್ಲಿನಿಕ್ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಗೆ ಹೆರಿಗೆಯಾಗಿ ಮೂರು ದಿನವಾದ ನಂತರ ಇಂದು ಕ್ಲಿನಿಕ್ ನವರು ಏಕಾಏಕಿ ಡಿಸ್ಚಾರ್ಜ್ ಮಾಡಿದ್ದಾರೆ. ಆದ್ರೆ ಲಾಕ್‌ಡೌನ್ ಆಗಿದ್ದರಿಂದ ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ನಾಳೆ ಡಿಸ್ಚಾರ್ಜ್ ಮಾಡುವಂತೆ ಮಹಿಳೆ […]

ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದ ಗುಜರಾತ್ ಸಚಿವರ ಮಗನನ್ನು ಬಂಧಿಸಿದ್ದ ಗುಜರಾತ್ ಮಹಿಳಾ ಪೊಲೀಸ್ ಕೆಲಸಕ್ಕೇ ರಾಜೀನಾಮೆ ನೀಡಿದ್ದು, ಇದೀಗ ಅದೇ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಗುಜರಾತ್ ನ ಆರೋಗ್ಯ ಸಚಿವರ ಪುತ್ರ ಪ್ರಕಾಶ್ ಕನಾನಿ ಹಾಗೂ ಅವರ ಇಬ್ಬರು ಸ್ನೇಹಿತರನ್ನು ಮಹಿಳಾ ಪೊಲೀಸ್ ಪೇದೆ ಸುನಿತಾ ಯಾದವ್ ಲಾಕ್ ಡೌನ್ ನನ್ನು ಉಲ್ಲಂಘಿಸಿದ್ದಕ್ಕಾಗಿ ಸೂರತ್ ನಲ್ಲಿ ಬಂಧಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಆಕೆ ತನ್ನ […]

ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ಮುಂದುವರೆದಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಕೊರೊನಾ ಸೋಂಕಿತ ಬಿಬಿಎಂಪಿ ಪೌರಕಾರ್ಮಿಕ ಮಹಿಳೆ ಸಾವನ್ನಪ್ಪಿದ್ದಾರೆ. ಬಿಬಿಎಂಪಿಯ 30 ವರ್ಷದ ಪೌರಕಾರ್ಮಿಕ ಮಹಿಳೆ  ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಸುಮಾರು 5 ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಆದರೆ ಚಿಕಿತ್ಸೆ ಸಿಗದೇ ಇಂದು ಮೃತಪಟ್ಟಿದ್ದಾರೆ.ಚಿಕಿತ್ಸೆ ಸಿಗದೇ ಪೌರಕಾರ್ಮಿಕ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡದ ಆಸ್ಪತ್ರೆ ವಿರುದ್ಧ ಮೃತ ಮಹಿಳೆಯ ಕುಟುಂಬಸ್ಥರು ಆಸ್ಪತ್ರೆ ಎದುರು […]

ಒಂದು ವಾರಗಳ ಕಾಲ ಪಟ್ಟಣವನ್ನ ಕಂಪ್ಲೀಟ್ ಲಾಕ್‌ಡೌನ್ ಮಾಡಲು ತೀರ್ಮಾನಿಸಲಾಗಿದೆ ಎಂದು ಶಾಸಕ ಎಸ್ ಎನ್ ನಾರಾಯಣ ಸ್ವಾಮಿ ಹೇಳಿದ್ದಾರೆ. ಬಂಗಾರಪೇಟೆಯಲ್ಲಿ ಮತನಾಡಿದ ಅವರು, ತಾಲೂಕಿನಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದೆ, ಇದುವರೆಗೂ ತಾಲೂಕಿನಲ್ಲಿ ೪ ಕೋವಿಡ್ ಸೋಕಿನ ವ್ಯಕ್ತಿಗಳು ಸಾವಿಗೀಡಾಗಿದ್ದಾರೆ. ಇನ್ನೂ ಅಲವು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ಉಳಿದ ಪ್ರಕರಣಗಳ ವರದಿ ಬರಬೇಕಿದೆ. ತಾಲೂಕಿನ ಆಡಳಿತ ಮಂಡಳಿ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು, ಇದಕ್ಕೆ ಸಾರ್ವಜನಿಕರು ಸಹಕಾರವನ್ನು […]

ಸರಗಳ್ಳತನ ಮಾಡುತ್ತಿದ್ದ ಇರಾನಿ ಕಾಲೋನಿಯ ಖದೀಮರನ್ನು ಬಂಧಿಸುವಲ್ಲಿ ಸಂತಪೂರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ೧.೨೦ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ, ಎರಡು ಬೈಕ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮಹಮ್ಮದ ಅಲಿ, ಜಾಫರ್ ಆಜಮ್, ಗುಲಾಮ್ ರಸೂಲ್, ಹಸನ್ ನಯನ್, ಫರಿದಾ(ಮಸ್ಕಾನ್, ಸಕೀನಾ) ಅಲಿ, ನೀತು, ಸೇಲ್ವಾನಿ ಬೇಗಂ ಹಾಗೂ ಸಬಿಗುಲ್ ಬಂದಿತ ಆರೋಪಿಗಳು ಎಂದು ತಿಳಿದು ಬಂದಿದೆ. ಸರ‍್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿದ್ದ ಮಹಿಳೆಯರ ಮೈಮೇಲಿನ ಚಿನ್ನಾಭರಣ ಲೂಟಿ […]

ಭಾರತದಂತೆ ಚೀನಾ ಆಯಪ್ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಅಮೆರಿಕಾದ ೨೬ ಕಾಂಗ್ರೆಸ್ ಸದಸ್ಯರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ರಾಷ್ಟ್ರೀಯ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಟಿಕ್ ಸೇರಿದಂತೆ ಚೀನಾದ ಆಯಪ್ ಗಳನ್ನು ಬ್ಯಾನ್ ಮಾಡುವಂತಹ ಮಹತ್ವದ ನರ‍್ಧಾರವನ್ನು ಭಾರತ ಜೂನ್ ನಲ್ಲಿ ತೆಗೆದುಕೊಂಡಿದೆ.ಅಮೆರಿಕದ ಜನತೆಯ ಡಾಟಾ, ಖಾಸಗಿತನ ಅಥವಾ ಭದ್ರತೆಯನ್ನು ಟಿಕ್ ಟಾಕ್ ನಂತಹ ಚೀನಾ ಆಯಪ್ ಗಳು ಸುರಕ್ಷಿತವಾಗಿ ಇಡಲಿವೆ ಎಂಬ […]

ವೈದ್ಯಕೀಯ  ಶಿಕ್ಷಣ  ಸಚಿವ  ಡಾ. ಕೆ. ಸುಧಾಕರ್  ಅವರು  ಇಂದಿರಾನಗರದಲ್ಲಿರುವ  ಸಿವಿ ರಾಮನ್  ಸಾರ್ವಜನಿಕ  ಆಸ್ಪತ್ರೆಗೆ  ಭೇಟಿ  ನೀಡಿದರು. ಆಸ್ಪತ್ರೆಯಲ್ಲಿ  ಕೋವಿಡ್  ರೋಗಿಗಳ  ಚಿಕಿತ್ಸೆ, ಸೌಲಭ್ಯಗಳ  ಪರಿಶೀಲನೆ  ನಡೆಸಿದರು. ವೈದ್ಯರು, ಸಿಬ್ಬಂದಿ  ಬಳಿ ಮಾಹಿತಿ  ಪಡೆದು ಸಮಾಲೋಚನೆ  ನಡೆಸಿ, ಸಲಹೆ  ನೀಡಿದರು. ನಂತರ  ಕೋವಿಡ್  ರೋಗಿಗಳ  ಜತೆ  ವಿಡಿಯೋ ಸಂವಾದ  ನಡೆಸಿದ  ಸಚಿವರು  ಮಾಹಿತಿ  ಪಡೆದರು. ಲಘು  ರೋಗ ಲಕ್ಷಣ  ಇರುವವರನ್ನು ದಾಖಲು  ಮಾಡಿರುವ  ಬಗ್ಗೆ ಅಧಿಕಾರಿಗಳನ್ನು  ತರಾಟೆ  ತೆಗೆದುಕೊಂಡರು. […]

ಈ ಹಿಂದೆ ಇಟಲಿಯ ಓನಿರೋಸ್ ಚಿತ್ರೋತ್ಸವದಲ್ಲಿ ‘ರುದ್ರಿ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ಪಾವನಾ ಗೌಡ, ಇದೀಗ ಠ್ಯಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ ಇನ್ನೂ ಎರಡು ಪ್ರಶಸ್ತಿಗಳನ್ನು ಈ ಚಿತ್ರೋತ್ಸವದಲ್ಲಿ ಚಿತ್ರ ಪಡೆದುಕೊಂಡಿದೆ. ಕಡೆ ಚಿತ್ರವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ಸಂತೋಷದ ವಿಷಯವಾದರೆ, ಇನ್ನೊಂದು ಕಡೆ ನಮ್ಮವರಿಗೆ ಈ ಚಿತ್ರ ತೋರಿಸಲಾಗುತ್ತಿಲ್ಲ ಎಂಬ ಬೇಸರವೂ ಇದೆ ಎನ್ನುತ್ತಾರೆ ಪಾವನಾ. ಈ […]

ಮದುವೆ  ಹೆಸರಿನಲ್ಲಿ  ವಂಚನೆ  ಪ್ರಕರಣಕ್ಕೆ  ಸಂಬಂಧಿಸಿದಂತೆ  ಮಾಲಿವುಡ್​  ನಟಿ  ಶಾಮ್ನಾ ಕಾಸಿಂ  ಕೊನೆಗೂ  ಮೌನ  ಮುರಿದಿದ್ದಾರೆ. ಮಾಧ್ಯಮ  ಸಂದರ್ಶನವೊಂದರಲ್ಲಿ  ಮಾತನಾಡಿರುವ ಶಾಮ್ನಾ, ನಾನು  ಶೂಟಿಂಗ್​ನಲ್ಲಿ  ಬಿಜಿಯಾಗಿರುವ  ಸಮಯದಲ್ಲಿ  ನನ್ನ  ಕುಟುಂಬ  ನನಗೆ ಮದುವೆ  ಮಾಡಲು  ವರ  ಹುಡುಕುತ್ತಿದ್ದರು. ಇದೇ  ವೇಳೆ  ವರನ  ಕುಟುಂಬ  ಎಂದು ಹೇಳಿಕೊಂಡು ವಂಚಕರ  ಜಾಲವೊಂದು  ನಮ್ಮ  ಕುಟುಂಬವನ್ನು  ಸಂಪರ್ಕಿಸಿತು. ಆರಂಭದಲ್ಲಿ ಎಲ್ಲವೂ  ಸರಿಯಾಗಿತ್ತು. ನಂತರದ  ದಿನಗಳಲ್ಲಿ  ಅವರು  ನೀಡಿರುವ  ಫೋಟೋ, ಹೆಸರು  ಹಾಗೂ ವಿಳಾಸ  ನಕಲಿ […]

ಇತ್ತೀಚೆಗಷ್ಟೇ  ಹಿರಿಯ  ನಟ  ಜಗ್ಗೇಶ್​  ಸಖತ್ ​ ಬೇಜಾರಾಗಿದ್ದರು. ಅದಕ್ಕೆ  ಕಾರಣ, ಡ್ರೋನ್​  ಪ್ರತಾಪ್ ​ ಕುರಿತಾಗಿ ಮಾಧ್ಯಮಗಳಲ್ಲಿ  ಹಲವು  ರೀತಿಯ  ವಿಷಯಗಳು  ಹೊರಬಂದಿದ್ದು. ಡ್ರೋಣ್ ​ ಪ್ರತಾಪ್ ​ ಅವರನ್ನು  ಹಲವರಿಗೆ  ಪರಿಚಯ  ಮಾಡಿಕೊಡುವುದರ  ಮೂಲಕ  ಸಾಕಷ್ಟು  ಸಹಾಯ  ಮಾಡಿದ್ದ  ಅವರು, ಪ್ರತಾಪ್ ​ ಕುರಿತಾದ  ನೆಗೆಟಿವ್​  ವಿಚಾರಗಳನ್ನು  ಕೇಳಿ  ನೊಂದಿದ್ದರು. ಈಗ  ಜಗ್ಗೇಶ್​  ಮುಖದಲ್ಲಿ  ಮಂದಹಾಸ  ಮೂಡಿದೆ. ಅದಕ್ಕೆ ಕಾರಣ,  ಅವರ  ಅಭಿಮಾನಿಯೊಬ್ಬರು, ‘ಮಹಾಭಾರತ’  ಕುರಿತಾದ  ಒಂದು […]

Advertisement

Wordpress Social Share Plugin powered by Ultimatelysocial