ಬೀದರ್‌ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮುಖಕ್ಕೆ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕತೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಹೇಳಿದ್ದಾರೆ.ಬೀದರ್‌ನಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಕೇಸುಗಳು ಹೆಚ್ಚಾಗುತ್ತಲೇ ಇವೆ, ಜನರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುಬೇಕು.ಅದೇ ರೀತಿ ತಮ್ಮ ಕೈಗಳನ್ನು ಸ್ಯಾನಿಟೈಜರ್ ಇಲ್ಲದಿದ್ದರೂ ಕನಿಷ್ಠ ಸೋಪಿನಿಂದ ಕಾಲ ಕಾಲಕ್ಕೆ ಕೈ ತೊಳೆದುಕೊಳ್ಳುವ ರೂಡಿ ಮಾಡಿಕೊಳ್ಳಿ. ಸರಕಾರದ ಕಾನೂನಿನ ಪ್ರಕಾರ ಯಾರು ಮಾಸ್ಕ್ ಧರಿಸುವುದಿಲ್ಲವೋ ಅಂತವರಿಗೆ […]

ಕೊರೊನಾದಿಂದ ಜನರಿಗೆ ಅನ್ಯಾಯವಾಗತ್ತಿದೆ ಜೀವನ ಮಾಡುವುದು ಕಷ್ಟವಾಗತ್ತಿದೆ ಎಂದು ತಾಲ್ಲೂಕು ಶಾಸಕ ಶಿವಲಿಂಗೇಗೌಡ ಅತಂಕ ವ್ಯಕ್ತಪಡಿಸಿದ್ದಾರೆ. ಅರಸೀಕೆರೆಯಲ್ಲಿ ಮಾತನಾಡಿದ ಅವರು, ಹಳ್ಳಿ ಹಳ್ಳಿಗೆ ಹೋಗಿ ಟಾಂ ಟಾಂ ಹೋರಡಿಸಿ ಇತ್ತೀಚೆಗೆ ಬೆಂಗಳೂರಿನಿAದ ಬಂದ ಜನರಿಗೆ ಮೊದಲು ಪರೀಕ್ಷೆ ವಳಪಡಿಸಿ ಎಂದು ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿ ತಾಕೀತು ಮಾಡಿದರು ಎಂದು ಹೇಳಿದರು. ತಾಲ್ಲೂಕು ದಂಡಾದಿಕಾರಿ ಸಂತೋಷ್ ಕುಮಾರ್ ಮಾತನಾಡಿ ಈಗಿನ ಪರಿಸ್ಥಿತಿ ೬೨ ಪ್ರಕರಣದಲ್ಲಿ ೫ಜನ ಆರೋಗ್ಯವಾಗಿ […]

ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತಿದ್ದು, ಹಾಸನದಲ್ಲಿ ಇಂದು ಬರೋಬ್ಬರಿ ೪೯ ಜನರಿಗೆ ಕೊರೋನ ಪಾಸಿಟಿವ್ ಆಗಿದೆ. ಇನ್ನೂ ಹೊಸದಾಗಿ ಕೊರೊನಾ ಪತ್ತೆಯಾಗಿರುವ ಪೈಕಿ ಬೇಲೂರು ತಾಲ್ಲೂಕಿನ ೨, ಚನ್ನರಾಯಪಟ್ಟಣ ತಾಲ್ಲೂಕಿನ ೬, ಹಾಸನ ತಾಲ್ಲೂಕಿನ ೩೬, ಹೊಳೆನರಸೀಪುರ ತಾಲ್ಲೂಕಿನ ೧, ಸಕಲೇಶಪುರ ೪ ಜನರಿಗೆ ಸೇರಿ ಒಟ್ಟು ೪೯ ಜನರಿಗೆ ಕೊರೊನಾ ಪತ್ತೆಯಾಗಿದೆ.

ಕಾಂಗ್ರೆಸ್ ಪದಾಧಿಕಾರಿ ನೇಮಕದ ಬಗ್ಗೆ ಇನ್ನು ಯಾವುದೇ ಚರ್ಚೆ ನಡೆದಿಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಲಿಂ ಅಹಮ್ಮದ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದೆ ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದಾಗ ಇದ್ದ ಪದಾಧಿಕಾರಿಗಳೇ ಇದ್ದಾರೆ. ನೋಡಬೇಕು ಏನ ಚರ್ಚೆ ಆಗುತ್ತೆ ಅಂತಾ. ಇನ್ನೂ ಯುತ್ ಕಾಂಗ್ರೆಸ್ ಅಧ್ಯಕ್ಷ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಕೂಡ ಯಾವುದೇ ನಿರ್ಧಾರ ಮಾಡಿಲ್ಲ. ಹಲವು ಆಕಾಂಕ್ಷಿಗಳು ಇದ್ದಾರೆ ಆದ್ರೆ ಎಲ್ಲರ ಅಭಿಪ್ರಾಯ ಪಡೆಯಬೇಕು. ನೋಡೊಣ […]

ಕೊರೊನಾ ಮಹಾಮಾರಿ ಇಂದ ಇಡೀ ದೇಶವೇ ಸ್ತಬ್ಧವಾಗಿದೆ ಎಂದು ಜೆಡಿಯು ರಾಜ್ಯಧ್ಯಕ್ಷ ಮಹೀಮಾ ಪಟೇಲ್ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಅವರು, ಕೊರೊನಾದಿಂದ ಬಡ ಜನರಿಗೆ ಸಾಕಷ್ಟು ಸಮಸ್ಯೆಗಳಾಗಿವೆ. ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಖಾಸಗಿ ಒಲಯದಲ್ಲಿ ಕೆಲಸ ಮಾಡುತ್ತಿರುವವರಿಗೆ ತೀರ ಕಷ್ಟ ಎದುರಾಗಿದೆ. ಸುಮಾರು ೩೫ ಸಾವಿರ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ಖಾಸಗಿ ಶಿಕ್ಷಕರಿಗೆ ಸರ್ಕಾರ ಸಹಾಯ ಮಾಡಬೇಕು.ನೊಂದ ಶಿಕ್ಷಕರಿಗೆ ಸರ್ಕಾರ ೫೦ ಕೊಟಿ ಅನುದಾನ […]

ಯಡಿಯೂರಪ್ಪ ಅವರ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ.ಸುದ್ದಗೋಷ್ಟಿಯಲ್ಲಿ ಮತನಾಡಿದ ಅವರು, ಜನರಿಗೆ ಯಡಿಯೂರಪ್ಪ ಅವರು ಉತ್ತರದಾಯಿತ್ವ ಆಗಿದ್ದಾರೆ. ಯಾರಾದ್ರು ಒಬ್ಬರು ಡಾಕ್ಟರ್‌ನಲ್ಲಿ ಕಾನ್ಫಿಡೆನ್ಸ್ ಕ್ರಿಯೇಟ್ ಮಾಡುವುದಕ್ಕೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೀರಾ. ದುಡ್ಡು ಲೂಟಿ ಮಾಡಲು ಯಡಿಯೂರಪ್ಪ ಸರ್ಕಾರ ಮುಂದಾಗಿದೆ. ಜನರ ಪ್ರಾಣ ಉಳಿಸಬೇಕಿರುವುದು ರಾಜ್ಯ , ಕೇಂದ್ರ ಸರ್ಕಾರಗಳು. ದೇಶದ ಗಡಿ ಉಳಿಸುವುದಕ್ಕೆ ಮೋದಿ ಕೈನಲ್ಲಿ ಆಗಿಲ್ಲ. ಆರಂಭ ಶೂರತ್ವ ಇದ್ರೆ ಅದು ಬಿಜೆಪಿ […]

ಕೊರೊನಾ ಪರಿಸ್ಥಿತಿ ನೆನಸಿಕೊಂಡ್ರೆ ಬಹಳ ದುಗುಡ, ನಡುಕ ಹುಟ್ಟಿಸುತ್ತಿದೆ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಿಶ್ವ ಮಟ್ಟದಲ್ಲಿ ಭಾರತ ೧೧ ನೇ ಸ್ಥಾನದಲ್ಲಿ ಇತ್ತು , ಈಗ ೩ ನೇ ಸ್ಥಾನಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆ ದಂತ ಗೋಪುರ ಬಿಟ್ಟು ಹೊರಗಡೆ ಬರುತ್ತಿಲ್ಲ. ಸಿಎಂ ಯಡಿಯೂರಪ್ಪ ಅವರು ಕೃಷ್ಣಾ ಬಿಟ್ಟು ಹೊರಗಡೆ ಬರುತ್ತಿಲ್ಲ. ರೋಗಕ್ಕೆ ತುತ್ತಾದವರನ್ನು ಸಂತೈಸುವ ಕೆಲಸ […]

ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದೆ. ಈ ಮಧ್ಯೆ ನಗರ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರ ಪರಿಸ್ಥಿತಿ ಹೇಳತೀರದ್ದಾಗಿದೆ. ಈಗಾಗಲೇ ಅನೇಕ ಪೌರ ಕಾರ್ಮಿಕರಿಗೆ ಕೊರೊನಾ ವಕ್ಕರಿಸಿದೆ. ಇನ್ನು ಈ ಹಿಂದೆ ಅರ್ಧದಿನ ಕೆಲಸ ಮಾಡಿಸುತ್ತಿದ್ದ ಇಲಾಖೆ, ಇದೀಗ ಇಡೀ ದಿನ ಕೆಲಸ ಮಾಡಿಸುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಕೊರೊನಾದಿಂದ ಭೀತಿಗೊಳಗಾದ ಕಾರ್ಮಿಕರು, ನಮಗೆ ಅರ್ಧ ದಿನ ಕೆಲಸ ಮಾಡಲು ಅವಕಾಶ ಕೊಡಿ, ಇಡೀ ದಿನ ಬೇಡ ಎಂದು […]

ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ಮಟ್ಟ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ರವಿವಾರ ಲಾಕ್‌ಡೌನ್ ಘೋಷಣೆ ಮಾಡಿರುವುದಕ್ಕೆ ಉಡುಪಿ ಜಿಲ್ಲೆಯಾ ದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನರು ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸಿ ಸರಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ನಗರದ ಪ್ರಮುಖ ಭಾಗಗಳಾದ ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಕೆ.ಎಂ. ಮಾರ್ಗ, ಕರಾವಳಿ ಬೈಪಾಸ್, ಬ್ರಹ್ಮಗಿರಿ ವೃತ್ತಗಳಲ್ಲಿ ಜನರ ಓಡಾಟ ಬಹುತೇಕ […]

ಹೆರಿಗೆಗೆಂದು ದಾಖಲಾಗಿದ್ದ ಗರ್ಭಿಣಿಗೆ ಕೋವಿಡ್ ತಪಾಸಣೆ ಮಾಡಿದಾಗ ಪಾಸಿಟಿವ್ ಬಂದ ಕಾರಣ ಹೆರಿಗೆ ಮಾಡಿಸಲು ನಿರಾಕರಿಸಿದ ಖಾಸಗಿ ಆಸ್ಪತ್ರೆ ಬಳಿಕ ಶಾಸಕ ಯು.ಟಿ. ಖಾದರ್ ಅವರ ಪ್ರಯತ್ನದ ಫಲವಾಗಿ ಹೆರಿಗೆ ಮಾಡಿಸಲು ಸಮ್ಮತಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗರ್ಭಿಣಿ ಹೆರಿಗೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ರವಿವಾರ ಕೋವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿತ್ತು. ಆಗ ಆಸ್ಪತ್ರೆಯವರು ಹೆರಿಗೆ ಮಾಡಿಸಲು ನಿರಾಕರಿಸಿದರು. ಗರ್ಭಿಣಿಯ ಕುಟುಂಬದವರು ವಿಷಯವನ್ನು ಖಾದರ್ ಅವರ ಗಮನಕ್ಕೆ […]

Advertisement

Wordpress Social Share Plugin powered by Ultimatelysocial