ಪಿಟೀಲು ಚೌಡಯ್ಯ ಕರ್ಣಾಟಕ ಸಂಗೀತದ ಮಹಾನ್ ವಿದ್ವಾಂಸ.

 

ಬೆಂಗಳೂರಿನ ಮಲ್ಲೇಶ್ವರದಲ್ಲಿ ಇತ್ತಕಡೆ ಸ್ಯಾಂಕಿ ರಸ್ತೆಗೂ ಕಾಣುವಂತೆ ಪಿಟೀಲಿನ ಆಕಾರದ ಚೌಡಯ್ಯ ಮೆಮೋರಿಯಲ್ ಹಾಲ್ ಇದೆ. ಅದು ಕರ್ಣಾಟಕ ಸಂಗೀತದ ಮಹಾನ್ ವಿದ್ವಾಂಸ, ಪ್ರಖ್ಯಾತ ವಯಲಿನ್ ವಾದಕ ತಿರುಮಕೂಡಲು ಚೌಡಯ್ಯನವರ ಸ್ಮಾರಕವಾಗಿದೆ. ಪಿಟೀಲು ಚೌಡಯ್ಯ ಎಂದೇ ಅವರು ಪ್ರಖ್ಯಾತರು. ಮೈಸೂರಿನ ಚಾಮರಾಜಪುರಂನಲ್ಲಿ ಈಗಲೂ ಪಿಟೀಲು ಚೌಡಯ್ಯನವರಿದ್ದ ಮನೆ ಇದೆ. ಜನವರಿ 19 ಚೌಡಯ್ಯನವರ ಪುಣ್ಯ ಸ್ಮರಣೆಯ ದಿನವಾಗಿದೆ. 1894ರ ವರ್ಷದಲ್ಲಿ ಜನಿಸಿದ ಚೌಡಯ್ಯನವರು 1967ರ ಜನವರಿ 19ರಂದು ಈ ಲೋಕವನ್ನಗಲಿದರು.
ಪಿಟೀಲು ಚೌಡಯ್ಯನವರು ಸಪ್ತ ತಂತಿಗಳ ಪಿಟೀಲನ್ನು ನುಡಿಸುತ್ತಿದ್ದ ಖ್ಯಾತಿವಂತರು. ಚೌಡಯ್ಯನವರ ಏಳು ತಂತಿ ಪಿಟೀಲಿನ ಕಲ್ಪನೆಯ ಬಗೆಗೆ, ಕೆಲಕಾಲ ಅವರ ಶಿಷ್ಯರಾಗಿದ್ದ ಕನ್ನಡದ ಪ್ರಸಿದ್ಧ ಕವಿ ವಿ. ಸೀತಾರಾಮಯ್ಯನವರ ವಿಚಾರ ಲಹರಿ ಇದು. “ಸಪ್ತಸ್ವರಗಳ ದೇವತೆಗಳು ಚೌಡಯ್ಯನವರಿಗೆ ಸಪ್ತತಂತಿಗಳ ಕಲ್ಪನೆಗೆ ಇಂಬು ಕೊಟ್ಟಿರಬೇಕು. ತನ್ನ ಎರಡನೆಯ ಪ್ರಾಣವೆಂದೇ ಭಾವಿಸಿದ್ದ ಈ ಏಳು ತಂತಿಗಳ ವಾದ್ಯದಲ್ಲಿ ತಮ್ಮ ಇಷ್ಟ ದೇವತೆಯ ಇರವನ್ನು ಕಂಡುಕೊಂಡ ಅವರಿಗೆ ಅದರ ಮೇಲೆ ವಿಶೇಷವಾದ ಪ್ರೀತಿ. ಅದರ ಮೇಲೆ ಅವರು ಪ್ರತಿದಿನವೂ ಪ್ರಾಮಾಣಿಕವಾಗಿ, ಶ್ರದ್ಧಾಪೂರ್ವಕವಾಗಿ ನುಡಿಸುತ್ತಿದ್ದರು. ಪಿಟೀಲು ಚೌಡಯ್ಯನವರ ಗುರುಗಳು ಬಿಡಾರಂ ಕೃಷ್ಣಪ್ಪನವರು. ಅವರ ಗುರುಗಳು ವೀಣೆ ಶೇಷಣ್ಣನವರು. ಸ್ವಯಂ ವೀಣೆ ಶೇಷಣ್ಣನವರೇ ಚೌಡಯ್ಯನವರ ಸಪ್ತತಂತಿಗಳಿಂದ ಮೂಡಿಬಂದ ನಾದ ಸೊಗಸಾಗಿದೆ ಎಂದು ಬೆನ್ನುತಟ್ಟಿದರು.”
ದೀರ್ಘ, ಸುಸ್ಥಿರ, ಮೋಹಕ ದಾಖಲೆಯನ್ನು ಕರ್ಣಾಟಕ ಸಂಗೀತದಲ್ಲಿ ಮೂಡಿಸಿದ ಕೆಲವೇ ಕೆಲವು ಸಂಗೀತಕಾರರಲ್ಲಿ ತಿರುಮಕೂಡಲು ನರಸೀಪುರದ ಸಂಗೀತರತ್ನ ಚೌಡಯ್ಯನವರೂ ಪ್ರಮುಖರು. ಉತ್ಕೃಷ್ಟ ಮಟ್ಟದ ಈ ವಯಲಿನ್ ವಾದಕರ ಐದು ದಶಕಗಳ ಸಾರ್ಥಕ ಸಂಗೀತ ಸೇವೆ ಸ್ಮರಣೀಯವಾದುದು. ಸಾಮಾನ್ಯ ಜನತೆಯಿಂದ ಹಿಡಿದು ಸಂಗೀತದ ರಸಜ್ಞರನ್ನು ರಂಜಿಸಿದ ಕಲೋಪಾಸಕರವರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಣ ಎಣಿಸಲು ಬಾರದ ಅನಕ್ಷರಸ್ಥನ ಜೊತೆ ಮದುವೆ ಮುರಿದುಕೊಂಡ ವಧು.

Sun Jan 22 , 2023
ಲಖ್ನೌ ,ಜ.22- ಅನಕ್ಷರಸ್ಥ ವರನಿಗೆ ಹಣ ಎಣಿಸಲು ಬಾರದಿದ್ದಾಗ ಕೋಪಗೊಂಡ ವಧು ವಿವಾಹವನ್ನೇ ರದ್ದು ಪಡಿಸಿದ ಘಟನೆ ಉತ್ತರ ಪ್ರದೇಶದ ಫರೂಕಾಬಾದ್‍ನಲ್ಲಿ ನಡೆದಿದೆ. ಫರೂಕಾಬಾದ್ ನಗರದ ನಿವಾಸಿಯಾದ ವಧು ಮೈನ್‍ಪುರಿಯ ಯುವಕನೊಂದಿಗೆ ವಿವಾಹ ನಿಶ್ಚಿತವಾಗಿತ್ತು ಮದುವೆಗೆ ಸಕಲ ಸಿದ್ಧತೆಯೂ ಆಗಿತ್ತು. ಆದರೆ ವರ ಅನಕ್ಷರಸ್ಥ ಎಂದು ವಧುವಿನ ಕುಟುಂಬಕ್ಕೆ ಗೊತ್ತಿರಲಿಲ್ಲ. ಆದರೆ ನಿನ್ನೆ ವರ ಮೆರವಣಿಗೆ ಬಂದಾಗ ದಾರ್ಮಿಕ ಆಚರಣೆ ಪ್ರಾರಂಭವಾಗಿದ್ದವು. ರಾತ್ರಿ 1 ಗಂಟೆಗೆ ಮದುವೆಗೆ ತಯಾರಿ ಶುರುವಾಯಿತು. […]

Advertisement

Wordpress Social Share Plugin powered by Ultimatelysocial