Prime Minister: ಪ್ರಧಾನಿ ಮೋದಿ ಸಂಚರಿಸುವ ಕಾರಿಗೆ ಎಷ್ಟೆಲ್ಲಾ ಭದ್ರತೆಗಳು

ಯಾವುದೇ ದೇಶವಿರಲಿ ಅಲ್ಲಿನ ಪ್ರಧಾನಿ  ಅಥವಾ ರಾಷ್ಟ್ರಪತಿಗಳು ಸಾಮಾನ್ಯವಾಗಿ ಸಂಚರಿಸುವ ಕಾರುಗಳು ಭದ್ರತೆಯ ದೃಷ್ಟಿಯಿಂದ ಅನೇಕ ವೈಶಿಷ್ಟ್ಯತೆಗಳನ್ನು   ಹೊಂದಿರುತ್ತವೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು  ಬಳಸಲಾಗಿರುತ್ತದೆ.
ಅದರಲ್ಲೂ ಭಾರತದ ಪ್ರಧಾನಿ ಎಂದರೇ ಕೇಳಬೇಕೆಹೌದು ಜಗತ್ತಿನ ಹೆಚ್ಚು ಜನಪ್ರೀಯ ಪ್ರಧಾನಿ ಎಂದೇ ಹೇಳಬಹುದಾದ ಮೋದಿಯವರು ಓಡಾಡುವ ಕಾರು ಈಗ ಅಪ್ ಗ್ರೇಡ್ ಆಗಿದೆ.

VR10 ಹಂತಗಳ ಸುರಕ್ಷತೆ;

ಪ್ರಸ್ತುತ ಮೋದಿ ಅವರ ಹೊಸ ಕಾರು ಮರ್ಸಿಡೀಸ್ ಮೇಬ್ಯಾಚ್ S 650 ಗಾರ್ಡ್ ಆಗಿದೆ. ಈ ಹಿಂದೆ ಪ್ರಧಾನಿ ಅವರು ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಅನ್ನು ಬಳಸುತ್ತಿದ್ದರು. ಅಸ್ತ್ರ-ಶಸ್ತ್ರಗಳಿಂದ ಸುಸಜ್ಜಿತವಾದ ಮೇಬ್ಯಾಚ್ ಕಾರಿನಲ್ಲಿ ಮೋದಿಯವರು ಇತ್ತೀಚೆಗೆ ದೆಹಲಿಯ ಹೈದರಾಬಾದ್ ಭವನಕ್ಕೆ ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಮೇಬ್ಯಾಚ್ S 650 ಗಾರ್ಡ್ ಕಾರು VR10 ಹಂತಗಳ ಸುರಕ್ಷತೆಯನ್ನು ಹೊಂದಿದೆ.

ಗುಂಡು-ನಿರೋಧಕ;
ಉತ್ಪಾದನಾ ಕಾರುಗಳ ವಿಭಾಗದಲ್ಲಿ ಮರ್ಸಿಡೀಸ್ ಮೇಬ್ಯಾಚ್ S 650 ಗಾರ್ಡ್ ಕಾರು ಅತಿ ಗರಿಷ್ಠ ಮಟ್ಟದ ಸುರಕ್ಷೆಯನ್ನು ಒದಗಿಸುತ್ತದೆ. ಇದರ ಕಿಟಕಿ ಗಾಜುಗಳು ಹಾಗೂ ಇದರ ಮೈ ಕವಚ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗುಂಡು-ನಿರೋಧಕಗಳಿಂದ ಮಾಡಲ್ಪಟ್ಟಿದ್ದು ಎಕೆ-47 ಗುಂಡುಗಳೂ ಸಹ ಇದನ್ನು ಭೇದಿಸಲಾರವು. ಇದರ ಸುರಕ್ಷತಾ ವೈಶಿಷ್ಟ್ಯ ಹೇಗಿದೆ ಎಂದರೆ ಕಾರಿನ ಕೇವಲ ಎರಡು ಮೀ ಅಂತರದಿಂದ 15 ಕೆ.ಜಿ ಗಳಷ್ಟು ಸಾಮರ್ಥ್ಯದ ಟಿಎನ್‍ಟಿ ಸ್ಫೋಟಕದಿಂದ ಸ್ಫೋಟ ಮಾಡಿದರೂ ಸಹ ಇದರೊಳಗಿರುವ ವ್ಯಕ್ತಿಗೆ ಹಾನಿಯಾಗುವುದಿಲ್ಲ. ಹಾಗಾಗಿ ಇದು 2010ರ ಎಕ್ಸ್ಪ್ಲೋಸಿವ್ ರೆಸಿಸ್ಟಂಟ್ ವೆಹಿಕಲ್ ರೇಟಿಂಗ್ ಪಡೆದಿದೆ.

ಶುದ್ಧ ಗಾಳಿ ಸರಬರಾಜು;
ಕಾರಿನ ಕಿಟಿಕಿ ಗಾಜುಗಳ ಒಳಭಾಗಕ್ಕೆ ಪಾಲಿಕಾರ್ಬೋನೇಟ್ ಕೋಟಿಂಗ್ ಇದ್ದರೆ ಕಾರಿನ ಒಟ್ಟಾರೆ ಒಳಭಾಗವು ಯಾವುದೇ ನೇರ ಸ್ಫೋಟವಾದರೂ ಅದರಲ್ಲಿರುವ ವ್ಯಕ್ತಿಗೆ ಯಾವುದೇ ರೀತಿ ಹಾನಿಯುಂಟಾಗದಂತೆ ಸದೃಢವಾದ ಕವಚಗಳಿಂದ ನಿರ್ಮಿಸಲ್ಪಟ್ಟಿದೆ. ಕ್ಯಾಬಿ ನಲ್ಲಿ, ಒಂದು ವೇಳೆ ವಿಷಕಾರಿ ಅನಿಲದಿಂದ ಆಕ್ರಮಣವಾದ ಸಂದರ್ಭದಲ್ಲಿ ಅದರಿಂದ ಬಚಾವಾಗಲು ಶುದ್ಧ ಗಾಳಿಯನ್ನು ಸರಬರಾಜು ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಹಾರ್ಸ್ ಪವರ್ ಉತ್ಪಾದಿಸುವ ಶಕ್ತಿ;
ಈ ಕಾರು 6 ಲೀ. ಸಾಮರ್ಥ್ಯದ v12 ಟರ್ಬೋ ಇಂಜಿನ್ ಹೊಂದಿದ್ದು 516 ಬ್ರೇಕ್ ಹಾರ್ಸ್ ಪವರ್ ಉತ್ಪಾದಿಸುವ ಶಕ್ತಿ ಹೊಂದಿದ್ದು ಇದರ ಗರಿಷ್ಠ ಟಾರ್ಕ್ 900Nm ಆಗಿದೆ. ಇದರ ಗರಿಷ್ಠ ವೇಗವನ್ನು 160 ಕಿ.ಮೀ ಪ್ರತಿ ಗಂಟೆಗೆ ನಿಯಂತ್ರಿಸಲಾಗಿದೆ. ಈ ಕಾರು ವಿಶೇಷವಾದ ಚಕ್ರಗಳನ್ನು ಹೊಂದಿದ್ದು ಪಂಕ್ಚರ್ ಅಥವಾ ಯಾವುದೇ ಇತರೆ ಹಾನಿ ಚಕ್ರಗಳಿಗಾದಾಗಲೂ ಸಹ ಯಾವುದೇ ಕಷ್ಟವಿಲ್ಲದೆ ಚಕ್ರಗಳು ಕಾರ್ಯನಿರ್ವಹಿಸಲಿವೆ. ಇವುಗಳಲ್ಲದ ಮರ್ಸಿಡೀಸ್ ಎಸ್ ಕ್ಲಾಸ್ ನಲ್ಲಿ ಬರುವ ಇತರೆ ಎಲ್ಲ ಐಷಾರಾಮು ಸವಲತ್ತುಗಳು, ಅದ್ಭುತವಾದ ನೋಟ ಎಲ್ಲವೂ ಈ ಕಾರಿನಲ್ಲಿದೆ.

ಪ್ರಸ್ತಾವನೆ;
ಸಾಮಾನ್ಯವಾಗಿ ಹೊಸ ಕಾರು ಬೇಕಿದ್ದಲ್ಲಿ ಅದರ ಬಗ್ಗೆ ಪ್ರಸ್ತಾವನೆಯನ್ನು ಪ್ರಧಾನಿಯವರ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಸ್ಪೇಷಲ್ ಪ್ರೊಟೆಕ್ಷನ್ ಗ್ರೂಪ್ ನೀಡುತ್ತದೆ. ಈ ವಿಶೇಷ ರಕ್ಷಣಾ ದಳವು ಮೊದಲಿಗೆ ಸುರಕ್ಷತೆಯ ಅವಶ್ಯಕತೆಯನ್ನು ಗುರುತಿಸಿ ಅದಕ್ಕೆ ತಕ್ಕಂತೆ ಪ್ರಧಾನಿಯವರ ಸುರಕ್ಷತೆಗಾಗಿ ಅದಕ್ಕೆ ಬೇಕಿರುವ ಭದ್ರತೆಯ ಅವಶ್ಯಕತೆಗಳಿಗನುಸಾರವಾಗಿ ವಾಹನದ ಪ್ರಸ್ತಾವನೆ ಸಲ್ಲಿಸುತ್ತದೆ. ಎಸ್ ಪಿ ಜಿ ಸಾಮಾನ್ಯವಾಗಿ ಎರಡು ಒಂದೇ ರೀತಿಯ ಕಾರುಗಳನ್ನು ಆರ್ಡರ್ ಮಾಡುತ್ತದೆ. ಒಂದು ಕಾರು ಡಿಕಾಯ್ ಆಗಿ ಪ್ರಧಾನಿ ಜೊತೆ ಚಲಿಸುತ್ತದೆ.

ಕಳೆದ ಹಲವು ವರ್ಷಗಳಿಂದ ಮೋದಿಯವರು ಸಂಚರಿಸುವ ಕಾರುಗಳಲ್ಲಿ ಬದಲಾವಣೆಗಳಾಗಿವೆ. ಮೊದಲಿಗೆ ಗುಜರಾತಿನ ಸಿಎಂ ಆಗಿದ್ದಾಗ ಮೋದಿಯವರು ಗುಂಡು-ನಿರೋಧಕ ಮಹೀಂದ್ರಾ ಸ್ಕಾರ್ಪಿಯೊ ಬಳಸುತ್ತಿದ್ದರು. ತದನಂತರ ಪ್ರಧಾನಿಯಾದ ಮೇಲೆ ಇಲ್ಲಿಯವರೆಗೆ ಅವರು ಬಿಎಂಡಬ್ಲ್ಯೂ 7 ಸಿರೀಸ್ ಹೈ ಸೆಕ್ಯೂರಿಟಿ ಎಡಿಷನ್, ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಬಳಸಿದ್ದಾರೆ. ಪ್ರಸ್ತುತ ಬಳಸುತ್ತಿರುವ ಮೇಬ್ಯಾಚ್ S 650 ಗಾರ್ಡ್ ಕಾರಿನ ಬೆಲೆ ರೂ. 12 ಕೋಟಿ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Cricket:ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ 15 ಸದಸ್ಯರ ಸಂಭಾವ್ಯ ಭಾರತ ತಂಡ ಇಲ್ಲಿದೆ‌,ರೋಹಿತ್ ಔಟ್;

Tue Dec 28 , 2021
cricket: ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಅಲಭ್ಯವಾಗಲಿದ್ದಾರೆಂದು ಹೇಳಲಾಗಿದೆ. ಹೀಗಾಗಿ ಕೆಎಲ್ ರಾಹುಲ್ ನಾಯಕತ್ವ ವಹಿಸಲಿದ್ದಾರೆ. ಆಫ್ರಿಕಾ ವಿರುದ್ಧದ ಒಡಿಐ ಸರಣಿಗೆ ಭಾರತದ 15 ಸದಸ್ಯರ ಸಂಭಾವ್ಯ ತಂಡವನ್ನು ನೋಡೋಣ. ಹರಿಣಗಳ ನಾಡಿನಲ್ಲಿ ಈಗಾಗಲೇ ತನ್ನ ಪ್ರವಾಸವನ್ನು ಆರಂಭಿಸಿರುವ ಭಾರತ ತಂಡ ದಕ್ಷಿಣ ಆಫ್ರಿಕಾ  ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ ಮುಗಿದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ […]

Advertisement

Wordpress Social Share Plugin powered by Ultimatelysocial