RCB Captain: ರಾಹುಲ್ ಅಲ್ಲ, ವಾರ್ನರ್ ಅಲ್ಲ ಇವರೇ ನೋಡಿ RCB ತಂಡಕ್ಕೆ ಮುಂದಿನ ಕ್ಯಾಪ್ಟನ್

UAE ಯಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್(IPL) ವಿರಾಟ್ ಕೊಹ್ಲಿ(Virat Kohli) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers Bengaluru) ತಂಡದ ನಾಯಕತ್ವ(Captain) ತ್ಯಜಿಸಿದ ಬಳಿಕ ಬೆಂಗಳೂರು ತಂಡದ ಮುಂದಿನ ನಾಯಕ ಯಾರು ಎನ್ನುವ ಪ್ರಶ್ನೆ ಕ್ರೀಡಾ ಅಭಿಮಾನಿಗಳಲ್ಲಿ(Fans) ಕಾಡುತ್ತಿದೆ..

ಹೀಗಾಗಿ ಹಲವರು ಹಲವು ಕ್ರೀಡಾಪಟುಗಳ ಹೆಸರನ್ನು ಹೇಳಿ ಇವರು ಬೆಂಗಳೂರು ತಂಡದ ಮುಂದಿನ ನಾಯಕರಾಗಬಹುದು ಎಂದು ಹೇಳುತ್ತಿದ್ದರು. ಅದರಲ್ಲಿ ಕನ್ನಡಿಗ ಕೆಎಲ್ ರಾಹುಲ್ (KL Rahul), ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್(David Warner), ಮ್ಯಾಕ್ಸ್​ವೆಲ್(Maxwell) ಸೇರಿ ಹಲವರ ಹೆಸರುಗಳು ಆರ್​ಸಿಬಿ ಕ್ಯಾಪ್ಟನ್ ಹೆಸರಿನ ರೇಸ್ನಲ್ಲಿ ಇದ್ದವು. ಈಗ ರೇಸ್​ಗೆ ಹೊಸ ಹೆಸರೊಂದು ಸೇರ್ಪಡೆಯಾಗಿದ್ದು, ಅವರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕ ಎಂದು ಹೇಳಲಾಗುತ್ತಿದೆ.

ಕನ್ನಡಿಗ ಮನೀಶ್ ಪಾಂಡೆ ಮುಂದಿನ RCB ನಾಯಕ..?
ಮುಂದಿನ ವರ್ಷ ನಡೆಯಲಿರುವ 15ನೇ ವೃತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಹತ್ತು ಹಲವಾರು ಕಾರಣಗಳಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.. ದಿನೇದಿನೇ ಆವೃತ್ತಿಯ ಐಪಿಎಲ್ ನಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಲಿವೆ. ಲಖನೌ ಮತ್ತು ಅಹಮದಾಬಾದ್ ಈ 2 ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗುತ್ತಿರುವುದರಿಂದ ಈ ಬಾರಿ ಐಪಿಎಲ್ ಟ್ರೋಫಿಗಾಗಿ ಬರೋಬ್ಬರಿ 10 ತಂಡಗಳು ಸೆಣೆಸಾಟ ನಡೆಸಲಿವೆ. ಅಲ್ಲದೆ ಮೆಗಾ ಹರಾಜು ಕೂಡ ನಡೆಯುವುದರಿಂದ ಯಾವ ಆಟಗಾರರು ಯಾವ ತಂಡದ ಪಾಲಾಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.. ಇದರ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಕಾಡುತ್ತಿರುವ ದೊಡ್ಡ ಪ್ರಶ್ನೆ ಅಂದರೆ ಬೆಂಗಳೂರು ತಂಡದ ಮುಂದಿನ ನಾಯಕ ಯಾರು ಎನ್ನುವುದು.

RCB ಪರ ಆಡಿದ್ದ ಮನೀಶ್
ಇನ್ನು ವಿಶೇಷ ಅಂದ್ರೆ ಮನೀಶ್ ಪಾಂಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಹಿಂದೆ ಆಡಿದ ಬಳಿಕ ಬೇರೆ ತಂಡಗಳ ಪಾಲಾಗಿದ್ದರು. ಈಗ ಮನೀಶ್ ಪಾಂಡೆ ಮರಳಿಗೂಡಿಗೆ ಬರಲು ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದು ಬೆಂಗಳೂರು ಪ್ರಾಂಚೈಸಿ ಮನೀಶ್ ಪಾಂಡೆ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ.ಇನ್ನು
ಮನೀಷ್ ಪಾಂಡೆ 2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಇನ್ನು ಚೊಚ್ಚಲ ಐಪಿಎಲ್ ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿರುವ ಮನೀಷ್ ಪಾಂಡೆ ಕೋಲ್ಕತಾ ನೈಟ್ ರೈಡರ್ಸ್, ಪುಣೆ ವಾರಿಯರ್ಸ್ ಇಂಡಿಯಾ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿರುವ ಅನುಭವವನ್ನು ಹೊಂದಿದ್ದಾರೆ.

ನಾಯಕನಾಗಿ ಅಪಾರ ಅನುಭವ ಹೊಂದಿರುವ ಮನೀಶ್ ಪಾಂಡೆ
ಇನ್ನು ಮನೀಶ್ ಪಾಂಡೆ ನಾಯಕನಾಗಿ ಇದೇ ಮೊದಲ ಬಾರಿಗೆ ಏನು ಆಡುತ್ತಿಲ್ಲ. ನಾಯಕನಾಗಿ ಕರ್ನಾಟಕ ತಂಡವನ್ನು ರಣಜಿ ಟ್ರೋಫಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲಿ ಮುನ್ನಡೆಸಿ ಅಪಾರವಾದ ಅನುಭವವನ್ನ ಮನೀಶ್ ಪಾಂಡೆ ಹೊಂದಿದ್ದಾರೆ. ಅಲ್ಲದೆ ಸನ್ ರೈಸರ್ಸ್ ಹೈದರಾಬಾದ್ ಪರ ಕೆಲವು ಪಂದ್ಯಗಳಲ್ಲಿ ನಾಯಕನಾಗಿ ಮನೀಶ್ ಪಾಂಡೆ ಕಣಕ್ಕೆ ಇಳಿದಿದ್ದರು.. ಹೀಗಾಗಿ ಮನಿಷ್ ಪಾಂಡೆ 15ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗುವುದು ಬಹುತೇಕ ಪಕ್ಕ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫೆಬ್ರುವರಿಯಲ್ಲಿ ಓಮಿಕ್ರಾನ್‌ ಹಾವಳಿ ಹೆಚ್ಚಾಗುತ್ತಾ?   

Fri Dec 24 , 2021
  ಡೆಲ್ಟಾ ಹಾವಳಿ ಮುಗಿದ ಮೇಲೆ ಈಗ,  ಓಮಿಕ್ರಾನ್‌ ಹಾವಳಿ ಹೆಚ್ಚಾಗುತ್ತಿದೆ. ಎಸ್‌ ಕಳೆದ ಎರಡು ಅಲೆ ನವೆಂಬರ್‌ – ಡಿಸೆಂಬರ್‌ ನಲ್ಲಿ ಪ್ರಾರಂಭಗೊಂಡು  ಫೆಬ್ರುವರಿ ಮಾರ್ಚ್‌ ನಲ್ಲಿ ತೀವ್ರ ಸ್ವರೂಪ ಪಡೆದಿತ್ತು. ಈಗ ಅದೇ ಮಾದರಿಯಲ್ಲಿ  ಓಮಿಕ್ರಾನ್‌ ಕೂಡ ನವೆಂಬರ್‌- ಡಿಸೆಂಬರ್‌ ಹಂತದಲ್ಲಿ ಪ್ರಾರಂಭವಾಗಿ ಈಗ ಫೆಬ್ರುವರಿ ಹಂತದಲ್ಲಿ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು     ಕಾನ್ಫುರದ ಐಐಟಿ ವಿಜ್ಞಾನಿಗಳು ಸ್ಪೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. Please follow […]

Advertisement

Wordpress Social Share Plugin powered by Ultimatelysocial