ನಿಯಮಗಳನ್ನೆ ಪಾಲಿಸದ ರಾಮದುರ್ಗ RTO.

ಭ್ರಷ್ಟಾಚಾರದಲ್ಲಿ ಮುಳುಗಿದ ರಾಮದುರ್ಗ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾದ ರಾಜೇಂದ್ರ ಬಾರಿಗಿಡದಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ RTO ಕಛೇರಿಯು ಭ್ರಷ್ಟಾಚಾರದಿಂದ ಮುಳುಗಿದೆ ಎಂದು ಕೆಆರ್‌ಎಸ್ ಪಕ್ಷದಿಂದ ಆಕ್ರೋಶ.

RTO ಕಛೇರಿಯಲ್ಲಿ
ಏಜೆಂಟರುಗಳ ಹಾವಳಿ, ಕೆಲಸದ ವಿಳಂಬದ ಕುರಿತು ಸಾರ್ವಜನಿಕರು ಕೆಲ ದಿನದಿಂದ ಕರೆಬಂದ ಹಿನ್ನಲೆ.ಕೆ ಆರ್ ಎಸ್ ಪಕ್ಷದವರು ರಾಮದುರ್ಗದ ಆರ್ ಟಿ ಓ ಕಚೇರಿಗೆ ಭೇಟಿ ನೀಡಿದಾಗ ಸಿಬ್ಬಂದಿಗಳ ನಾಮಫಲಕವಿಲ್ಲ. ಕಚೇರಿಯಲ್ಲಿ ಏಜೆಂಟರದೆ ಹಾವಳಿ.3500/- ಕಿಂತ ಹೆಚ್ಚು ಹಣ ಪಾವತಿಸುವಂತಿಲ್ಲ ಎಂದು ಹೆಸರಿಗೆ ಮಾತ್ರ ನೋಟಿಸ್ ಬೋರ್ಡಗಳು.

ಹೀಗೆ ಎಲ್ಲಾ ಘಟನೆಗಳ ಕುರಿತು ವಿಚಾರಣೆ ನಡೆಸಿ ಕೆ ಆರ್ ಎಸ್ ಪಕ್ಷದ ಸೇನಾನಿಗಳು ಮಾತನಾಡಿದ ಅವರು
ಸಾರ್ವಜನಿಕರ ವಾಹನ ಪರವಾನಿಗೆ. ವಾಹನಗಳ ನೊಂದಣಿ ಹೀಗೆ ಹಲವು ಕೆಲಸಗಳನ್ನು ಇಟ್ಟುಕೊಂಡು ಕಚೇರಿಗೆ ಬರುವಾಗ ಕೆಲಸಗಳನ್ನು ವಿಳಂಬ ಮಾಡಿ ಹಿಂದುಗಳ ನಾಳೆ ಬೇಡ ನಾಡಿದ್ದು ಬಾ , ಮತ್ತು ನಿಮಗೆ ಅರ್ಜೆಂಟ್ ಇದ್ದರೆ ನಮ್ಮೋರು ಇರುತ್ತಾರೆ ಅವರಿಗೆ ಭೇಟಿ ನೀಡಿ.ಎಂದು ನೇರವಾಗಿ ಹೇಳ್ದೆ ಹಿಂದೆನಿಂದ ಇನ್ನೊಬ್ಬ ಕಚೇರಿಯ ಸಿಬ್ಬಂದಿ ಮೂಲಕವಾಗಿ ಏಜೆಂಟುಗಳನ್ನು ಹಿಡಿದುಕೊಂಡು ಬನ್ನಿ ನಿಮ್ಮ ಕೆಲಸವಾಗುತ್ತದೆ ಎಂದು ಹೆಚ್ಚೆಚ್ಚು ಹಣವನ್ನು ಪಡೆದುಕೊಳ್ಳಲು ಈ ಕುತಂತ್ರವನ್ನು ಮಾಡುತ್ತಾರೆ.

ಇವತ್ತಿನ ದಿನ ಈ ಎಲ್ಲಾ ವಿಚಾರ ಸಂಬಂಧ ಪಟ್ಟಂತೆ ಕೆಆರ್‌ಎಸ್ ಪಕ್ಷ ಪ್ರಶ್ನೆ ಮಾಡುವಾಗ ಇಲ್ಲಿ ಯಾರೆಲ್ಲಾ ವಿಡಿಯೋ ಮಾಡುತ್ತಿದ್ದಾರೆ ಅವರೇ ದಲ್ಲಾಳಿಗಳು. ಎಂದು ಅಲ್ಲಿದ್ದವರಿಗೆ ಅವಮಾನವನ್ನು ಮಾಡಿ ವಿಡಿಯೋ ಮಾಡುತ್ತಿದ್ದವರ ಮೊಬೈಲ್ ಕಸೇದುಕೊಳ್ಳುವದಲ್ಲದೇ ಅಲ್ಲಿಯ ಕೆಆರ್‌ಎಸ್ ಪಕ್ಷದವರ ಮೇಲೆ ಗುಂಡಾ ವರ್ತನೆಯನ್ನು ಮಾಡಿದ ರಾಮದುರ್ಗದ ಆರ್ ಟಿ ಓ ಅಧಿಕಾರಿಯಾದ ರಾಜೇಂದ್ರ ಬಾರಿಗಿಡದ
ಅಷ್ಟೇ ಅಲ್ಲದೆ ಇನ್ನಷ್ಟು ಕಚೇರಿಯ ಮಾಹಿತಿಗಳನ್ನು ಪಡೆದುಕೊಳ್ಳಲು ಮುಂದಾದ ಕೆಆರ್‌ಎಸ್ ಪಕ್ಷದ ಸೇನಾನಿಗಳಿಗೆ ನೀವು ಬಂದ ಕಾರಣ ಮತ್ತು ನಿಮ್ಮ ಹೆಸರುಗಳನ್ನು ವಿಜಿಟರ್ ಬುಕನಲ್ಲಿ ಬರೆಯಿರಿ ಎಂದು ದಬ್ಬಾಳಿಕೆ ಮಾಡಿದ ಘಟನೆ ದೃಶ್ಯಾವಳಿಗಳಲ್ಲಿ ಬಂದು ಕಂಡುಬಂದಿದೆ.

ಒಟ್ಟಿನಲ್ಲಿ ಇವರಿಗೆ ಸರ್ಕಾರಿ ಕಚೇರಿಯಲ್ಲಿ ಇರಬೇಕಾದ ಸೌಮ್ಯತೆಗಳು ಮತ್ತು ಜವಾಬ್ದಾರಿ ಬಗ್ಗೆ ಅರಿವುಯಿಲ್ಲ ಆದ್ದರಿಂದಾಗಿ ಸಂಬಂಧಪಟ್ಟ ಮೇಲಾಧಿಕಾರಿಗಳು ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು KRS ಪಕ್ಷದ ಜಿಲ್ಲಾ ಸಂಚಾಲಕರಾದ ರವಿ ಹೊನ್ನಿಕೊಳ ಮತ್ತು ಸರ್ವ KRS ಪಕ್ಷದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇಂಥಾ ತಪ್ಪು ಅಭ್ಯಾಸಗಳಿಂದ ನಿಮ್ಮ ತೂಕ ಎಂದಿಗೂ ಕಡಿಮೆ ಆಗುವುದಿಲ್ಲ

Sat Dec 3 , 2022
ನಮ್ಮ ಆಹಾರ ಕ್ರಮವೇ ನಮ್ಮ ಆರೋಗ್ಯದ ರಹಸ್ಯ. ತೂಕ ಇಳಿಸಲು ಬಯಸುವ ಹಲವರು ಮೊದಲಿಗೆ ಮಾಡುವ ಕೆಲಸ ಊಟ ಬಿಡುವುದು. ತಮ್ಮ ಆಹಾರ ಕ್ರಮವನ್ನು ಸಂಪೂರ್ಣವಾಗಿ ಬದಲಾಯಿಸಿಬಿಡುತ್ತಾರೆ, ಅಷ್ಟೇ ಅಲ್ಲದೆ ಕೆಲವರು ಜಿಮ್‌ಗೆ ಹೋಗುತ್ತಾರೆ. ಆದರೆ ಈ ತಪ್ಪು ಅಭ್ಯಾಸವು ಅವರ ತೂಕವನ್ನು ಕಡಿಮೆ ಮಾಡುವ ಬದಲಿಗೆ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯೇ ಹೆಚ್ಚು. ತಜ್ಞರ ಪ್ರಕಾರ ನೀವು ಎಷ್ಟೇ ಪ್ರಯತ್ನಿಸಿದರೂ ನಿಮ್ಮ ತೂಕ ಕಡಿಮೆಯಾಗದ ಕಾರಣ ನಿಮ್ಮ ಆಹಾರ ಪದ್ಧತಿ […]

Advertisement

Wordpress Social Share Plugin powered by Ultimatelysocial