ನಟಿ ನಿಕ್ಕಿ ಗರ್ಲಾನಿ ಮನೆಯಲ್ಲಿ ದರೋಡೆ;

 ಸ್ಯಾಂಡಲ್​ವುಡ್, ಕಾಲಿವುಡ್​ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟನಾ ಕೌಶಲ್ಯ ತೋರಿರುವ ನಟಿ ನಿಕ್ಕಿ ಗಲ್ರಾನಿಯ ಚೆನ್ನೈ ನಿವಾಸದಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದಲೇ ಕಳ್ಳತನ ನಡೆದಿರುವುದಾಗಿ ಪ್ರಕರಣ ದಾಖಲಾಗಿದೆ.

ಜನವರಿ 11ರಂದು ನಿಕ್ಕಿ ಗಲ್ರಾನಿ ದೂರು ದಾಖಲಿಸಿದ್ದು, ತನ್ನ ಮನೆಯ ಕೆಲಸಗಾರ ಧನುಷ್ ಎಂಬಾತ 1.25 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿದ್ದಾನೆ ಎಂದು ದೂರು ನೀಡಿದ್ದಾರೆ.

ಚೆನ್ನೈನ ರೋಯಪೇಟ್​ ಪ್ರದೇಶದಲ್ಲಿ ನಿಕ್ಕಿ ನಿವಾಸವಿದೆ. ಈ ಮೊದಲು ಧನುಷ್​ನನ್ನು ಕಳ್ಳತನದ ಆರೋಪದ ಮೇಲೆ ನಿಕ್ಕಿ ಗಲ್ರಾನಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾರೆ. ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದುತಲೈ ಚಿರುತೈಗಲ್ ಕಚ್ಚಿ ಅಥವಾ ವಿಸಿಕೆ ಪಕ್ಷ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದು, ಸಿಸಿಟಿವಿಯನ್ನು ಪರಿಶೀಲನೆ ನಡೆಸಿದಾಗ ಧನುಷ್ ಕಳ್ಳತನ ಮಾಡಿರುವುದು ಗೊತ್ತಾಗಿತ್ತು.

ಇದಾದ ನಂತರ ತಿರ್ಪೂರ್​ನಲ್ಲಿದ್ದ ಧನುಷ್​ನನ್ನು ಬಂಧಿಸಿ, ಅವನಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬೆನ್ನಲ್ಲೇ ನಿಕ್ಕಿ ಗಲ್ರಾನಿ ದೂರು ದಾಖಲಿಸಿದ್ದಾರೆ. ನಟಿ ನಿಕ್ಕಿ ಗಲ್ರಾನಿ ಅವರು ಮೊಟ್ಟ ಶಿವ ಕೆಟ್ಟ ಶಿವ, ಎಮರಾಲ್ಡ್ ಕಾಯಿನ್, ಡಾರ್ಲಿಂಗ್ ಮುಂತಾದ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಿರ್ದೇಶಕ ಶಶಿಕುಮಾರ್ ಅವರ ರಾಜವಂಶಂ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

 ಬಾಲಿವುಡ್ ನಟಿ: ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಮಂಗಳಸೂತ್ರ ಧರಿಸಿದಾಗ ಆದ ಅನುಭ;

Fri Jan 21 , 2022
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಮಂಗಳಸೂತ್ರ ಧರಿಸಿದಾಗ ಆದ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಒಬ್ಬ ಅದ್ಭುತ ನಟಿ ಮಾತ್ರವಲ್ಲದೇ ಫ್ಯಾಶನ್‌ಗೆ ಬಹಳಷ್ಟು ಒತ್ತು ಕೊಡುವ ಮಾಡರ್ನ್ ಮಹಿಳೆಯೂ ಹೌದು. ನಟಿ 2018ರಲ್ಲಿ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರನ್ನು ವಿವಾಹವಾಗಿದ್ದು, ಇವರಿಬ್ಬರ ಪ್ರೇಮಮಯ ಜೀವನಕ್ಕೆ ಮೂಕವಿಸ್ಮಿತರಾದವರೇ ಇಲ್ಲ. ಪ್ರಿಯಾಂಕಾ ಚೋಪ್ರಾ ಇತ್ತೀಚಿನ ಒಂದು ಬ್ರಾಂಡ್ ಶೂಟ್‌ನಲ್ಲಿ ತಮ್ಮ ಮದುವೆಯ ಸಂದರ್ಭದ ಬಗ್ಗೆ […]

Advertisement

Wordpress Social Share Plugin powered by Ultimatelysocial