ಸಂಕ್ರಾಂತಿಯೊಳಗೆ ದೇಶದಲ್ಲಿ ಮತ್ತೊಂದು ದೊಡ್ಡ ದುರಂತ!?; ಕೋಡಿಹಳ್ಳಿಮಠದ ಶ್ರೀಗಳಿಂದ ಭವಿಷ್ಯ

ಸಂಕ್ರಾಂತಿಯೊಳಗೆ ದೇಶದಲ್ಲಿ ಮತ್ತೊಂದು ದೊಡ್ಡ ದುರಂತ!?; ಕೋಡಿಹಳ್ಳಿಮಠದ ಶ್ರೀಗಳಿಂದ ಭವಿಷ್ಯ

ರಾಣೆಬೆನ್ನೂರ: ಮೊನ್ನೆ ನಡೆದ ಭಾರತೀಯ ಸೇನೆಯ ಮುಖ್ಯಸ್ಥರ ಅವಘಡದಂತೆ ಸಂಕ್ರಾತಿಯೊಳಗೆ ಮತ್ತೊಂದು ರಾಜಕೀಯ ಅವಘಡ ಸಂಭವಿಸುವ ಲಕ್ಷಣವಿದೆ. ಇದರಿಂದ ಜಗತ್ತು ತಲ್ಲಣಗೊಳ್ಳಲಿದೆ ಎಂದು ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗೀಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ನಗರಕ್ಕೆ ಶುಕ್ರವಾರ ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಆಗಮಿಸಿದ ಅವರು ಮಾಧ್ಯಮದರೊಂದಿಗೆ ಮಾತನಾಡಿ, ನಾನು ಈ ಹಿಂದೆಯೇ ದೊಡ್ಡಮಟ್ಟದ ಅವಘಡ ಸಂಭವಿಸುವ ಕುರಿತು ಹೇಳಿದ್ದೆ. ಅದರಂತೆ ಭಾರತೀಯ ಸೇನೆಯ ಮುಖ್ಯಸ್ಥರ ಹೆಲಿಕಾಪ್ಟರ್ ದುರಂತ ಪ್ರಕರಣ ನಡೆದು ಹೋಯಿತು. ಇದೀಗ ಮತ್ತೆ ಅಂಥದ್ದೇ ದುರಂತ ಸಂಭವಿಸುವ ಲಕ್ಷಣವಿದೆ ಎಂದರು.

ಕರೊನಾ ರೂಪಾಂತರಿ ಹೆಚ್ಚಾಗುವ ಎಲ್ಲ ಲಕ್ಷಣಗಳಿವೆ. ರೋಗ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ದೇಶದಲ್ಲಿ ಸಂಶಯ, ಅಸಹನೆ, ದ್ವೇಷ ಹಾಗೂ ರಾಜಕೀಯ ಕಲಹಗಳು ಹೆಚ್ಚಾಗಲಿವೆ. ಕೆಲವೇ ದಿನಗಳಲ್ಲಿ ಮಳೆ ಕೂಡ ಅಧಿಕವಾಗಿ ಸುರಿಯುವ ಲಕ್ಷಣವಿದೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

4 ವರ್ಷದ ಬಳಿಕ ಮತ್ತೆ ದರ್ಶನ್ ಜೊತೆ ರಚಿತಾ

Fri Dec 24 , 2021
ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾದ ಶೂಟಿಂಗ್ ಮತ್ತೆ ಆರಂಭ ಆಗಿದೆ. ವಿ. ಹರಿಕೃಷ್ಣ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ಬಣ್ಣ ಹಚ್ಚಿ ಅಭಿನಯಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ದರ್ಶನ್ ಹಾಗೂ ರಚಿತಾ ರಾಮ್ ಕಾಂಬಿನೇಷನ್. ಬಹಳ ದಿನಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿ ನಟಿಸುತ್ತಿದೆ. ಹೀಗಾಗಿ ಇಬ್ಬರ ಅಭಿಮಾನಿಗಳೂ ‘ಕ್ರಾಂತಿ’ಗಾಗಿ ಎದುರು ನೋಡುತ್ತಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. […]

Advertisement

Wordpress Social Share Plugin powered by Ultimatelysocial