ಫೆಬ್ರವರಿ ಮೊದಲ ವಾರ ಕೊರೋನಾ 3ನೇ ಅಲೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಬಹುದು:ಡಾ.ಕೆ.ಸುಧಾಕರ್

 

ಈಗಾಗಲೇ ಎರಡು ಬಾರಿ ಲಾಕ್ ಡೌನ್ ಹೇರಿಕೆ ಮಾಡಲಾಗಿದೆ. ಆಗ ಜನರಿಗೆ ಆಗುವ ಸಮಸ್ಯೆಗಳ ಬಗ್ಗೆ ನಮಗೆ ಅರಿವಾಗಿದೆ, ಈಗಾಗಲೇ ನಿನ್ನೆ ಪ್ರಧಾನ ಮಂತ್ರಿ ಮೋದಿಯವರು ಮುಖ್ಯಮಂತ್ರಿಗಳ ಜೊತೆ ಸಂವಾದ ಮಾಡುವ ಸಂದರ್ಭದಲ್ಲಿ ಜನರಿಗೆ ಆರ್ಥಿಕ ನಷ್ಟವಾಗದ ರೀತಿಯಲ್ಲಿ ಜಾಗೃತೆ ವಹಿಸಬೇಕೆಂದು ಹೇಳಿದ್ದಾರೆ, ಆ ನಿಟ್ಟಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಜನರೇ ಸ್ವಯಂ ನಿಯಂತ್ರಣ ಮಾಡಿಕೊಂಡು ಇನ್ನು ಒಂದೂವರೆ ತಿಂಗಳು ಸಹಕರಿಸಿದರೆ ಖಂಡಿತವಾಗಿಯೂ ಕೊರೋನಾ ನಿಯಂತ್ರಣವಾಗುತ್ತದೆ, ಲಾಕ್ ಡೌನ್ ಹೇರಿಕೆಯೊಂದೇ ಅಸ್ತ್ರವಲ್ಲ, ಎರಡು ತಿಂಗಳು ಜನರು ಕೊರೋನಾ ಮಾರ್ಗಸೂಚಿ, ನಿಯಮಗಳನ್ನು ಪಾಲಿಸಿದರೆ ಇದನ್ನು ನಿಯಂತ್ರಿಸಲು ಖಂಡಿತಾ ಸಾಧ್ಯವಿದೆ ಎಂದರು.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೋನಾ ಸೋಂಕು ಜಾಸ್ತಿಯಾಗುತ್ತಿದೆ. ಶೇಕಡಾ 5ರಿಂದ 6ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿರುವುದು ಒಂದು ಸಮಾಧಾನದ ಸಂಗತಿ. ವೈದ್ಯರು, ದಾದಿಯರಿಗೂ ಬರುತ್ತಿರುವುದರಿಂದ ಆರೋಗ್ಯ ಸೇವೆಗೆ ವ್ಯತ್ಯಯವಾಗಬಹುದು ಎಂಬ ಆತಂಕವಿದೆ ಎಂದರು.

ಕೊರೋನಾ ನಿಯಂತ್ರಣವಾಗಲು ಕನಿಷ್ಠ 14-15 ದಿನ ಬೇಕು. ವೀಕೆಂಡ್ ಕರ್ಫ್ಯೂ, ಕೊರೋನಾ ನಿರ್ಬಂಧ ಮಾಡಿ ಎರಡು ವಾರಗಳಾಗಿವೆಯಷ್ಟೆ. ಒಂದೇ ವಾರದಲ್ಲಿ ಕೊರೋನಾ ಸೋಂಕು ಕಡಿಮೆಯಾಗುವುದಿಲ್ಲ. ಓಮಿಕ್ರಾನ್ 5ರಿಂದ 6 ಪಟ್ಟು ವೇಗವಾಗಿ ಹರಡುತ್ತದೆ. ಕೊರೋನಾ ಮೂರನೇ ಅಲೆ ಇನ್ನೂ ಗರಿಷ್ಠ ಮಟ್ಟಕ್ಕೆ ತಲುಪಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದರು.

ಫೆಬ್ರವರಿ ಮೊದಲನೇ ವಾರ ಕೊರೋನಾ ಸೋಂಕು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ ಮೂರು-ನಾಲ್ಕನೇ ವಾರದಿಂದ ಸ್ವಲ್ಪ ಕಡಿಮೆಯಾಗಬಹುದು ಎಂದು ಹೇಳುತ್ತಿದ್ದಾರೆ ಎಂದು ಡಾ ಕೆ ಸುಧಾಕರ್ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೋತಿಚೂರ್ ಲಡ್ಡುಮಾಡುವ ವಿಧಾನ!!!!!

Fri Jan 14 , 2022
ಬೇಕಾಗುವ ಸಮಾಗ್ರಿಗಳು : ಕಡಲೆಹಿಟ್ಟು – 2 ಬಟ್ಟಲು ಸಕ್ಕರೆ – 2.5 ಬಟ್ಟಲು ಕೇಸರಿ – 6 ದಳ ಅಡುಗೆ ಸೋಡಾ – ಕಾಲು ಚಮಚ ಹಾಲು- 1 ಬಟ್ಟಲು ಫ‌ುಡ್‌ ಕಲರ್‌ – ಸ್ವಲ್ಪ ಏಲಕ್ಕಿ – 2 ಚಮಚ ಮಾಡುವ ವಿಧಾನ : ಕಡಲೆಹಿಟ್ಟಿಗೆ 3 ಚಮಚ ಹಾಲು, ನೀರು, ಅಡುಗೆ ಸೋಡಾ, ಫ‌ುಡ್‌ ಕಲರ್‌ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅದರಲ್ಲಿ ಸಣ್ಣ ಸಣ್ಣ ಕಾಳು […]

Advertisement

Wordpress Social Share Plugin powered by Ultimatelysocial