ರಾಜ್ಯಗಳಿಗೆ ಈ ವರ್ಷ 17.98 ಲಕ್ಷ ಕೋಟಿ ರೂ ನೀಡಿಕೆ.

ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ತೆರಿಗೆಗಳು ಸೇರಿದಂತೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ 17.98 ಲಕ್ಷ ಕೋಟಿ ರೂಪಾಯಿ ನೀಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದಿಲ್ಲಿ ಹೇಳಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದರೆ ಇದು 1.55 ಲಕ್ಷ ಕೋಟಿ ಹೆಚ್ಚಾಗಿದೆ ಎಂದು ಅವರು ಲೋಕಸಭೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.ಕಸಭೆಯಲ್ಲಿ 2023-24ರ ಕೇಂದ್ರ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್  ಸರಳವಾಗಿ ಹೇಳುವುದಾದರೆ, ಪ್ರಸಕ್ತ ಸಾಲಿನ ಬಜೆಟ್ ಹಣಕಾಸಿನ ವಿವೇಕದ ಮಿತಿಯೊಳಗೆ ಭಾರತದ ಅಭಿವೃದ್ಧಿಯ ಅಗತ್ಯತೆಗಳ ಅಗತ್ಯವನ್ನು ಸೂಕ್ಷ್ಮವಾಗಿ ಸಮತೋಲನಗೊಳಿಸುತ್ತದೆ ಎಂದಿದ್ಧಾರೆ.ತುಂಬಾ ಕಷ್ಟಕರವಾದ ಸಮತೋಲನ, ಇದು ಅತ್ಯಂತ ಸೂಕ್ಷ್ಮವಾದ ಸಮತೋಲನದ ತಂತ್ರ ಎಂದು ಅವರು ಹೇಳಿದ್ದಾರೆ.2023-24ರ ಬಜೆಟ್‍ನ ಸಾರವನ್ನು ಕೆಲವು ಪದಗಳಲ್ಲಿ ಹೇಳಬಹುದಾದರೆ ಇದು ಹಣಕಾಸಿನ ವಿವೇಕದ ಮಿತಿಯಲ್ಲಿ ಭಾರತದ ಅಭಿವೃದ್ಧಿಯ ಅಗತ್ಯತೆಗಳ ಅಗತ್ಯ ಸಮತೋಲನಗೊಳಿಸುತ್ತದೆ. ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದರೆ.ಪ್ರತಿಪಕ್ಷದ ನಾಯಕರು ಹೇಳುವಂತೆ ಒಬ್ಬ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡುನೀತಿಗಳನ್ನು ರೂಪಿಸುವುದಿಲ್ಲ. ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸುತ್ತೇವೆ. ಇದು ಬಿಜೆಪಿ ತತ್ವ. ಈ ರೀತಿ ಮಾಡುವುದು ಕಾಂಗ್ರೆಸ್ ಸಂಸ್ಕೃತಿ: ಎಂದು ಅವರು ದೂರಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾರುಗೆ ಬಯಕೆ ಬುತ್ತಿ ಶಾಸ್ತ್ರ ಮಾಡಲು ಬಂದ ರಘು.

Sat Feb 11 , 2023
ಪಾರು ಗರ್ಭಿಣಿ ಆಗಿರುವ ವಿಚಾರ ತಿಳಿದ ರಘು ಖುಷಿಯಲ್ಲಿ ತೇಲಾಡುತ್ತಿದ್ದಾನೆ. ಜನನಿಗೆ ಹೇಗೆ ಬಯಕೆ ಬುತ್ತಿ ಶಾಸ್ತ್ರ ಮಾಡುತ್ತಾ ಇದ್ದಾರೋ ಹಾಗೆಯೇ ಪಾರ್ವತಿಗೆ ಕೂಡ ಬಯಕೆ ಬುತ್ತಿ ಶಾಸ್ತ್ರ ಮಾಡಬೇಕು ಎಂದು ಆಲೋಚನೆ ಮಾಡುತ್ತಾ ಇರುತ್ತಾನೆ. ಸಾವಿತ್ರಿ ಬಳಿ ಪಾರುಗೆ ಇಷ್ಟ ಆಗಿರುವ ಎಲ್ಲಾ ತಿಂಡಿಗಳನ್ನು ಮಾಡಿಸಿ ಹನುಮಂತು ಮನೆಗೆ ಹೋಗುತ್ತಾನೆ. ಹನುಮಂತು ಹಾಗೂ ಆದಿ ಇಬ್ಬರೂ ಪಾರು ಇನ್ಯಾವ ಕೆಲಸವನ್ನು ಮಾಡಬಾರದು ಎಂದು ಹೇಳಿ ಸೇಬು ಹಣ್ಣನ್ನು ತಿನ್ನಿಸುತ್ತ […]

Advertisement

Wordpress Social Share Plugin powered by Ultimatelysocial