ಶುಗರ್ ಫ್ರೀ ಕೇಕ್ ಮಾಡುವ ವಿಧಾನ ಇಲ್ಲಿದೆ ನೋಡಿ!!!!!!!

ಬೇಕಾಗುವ ಸಾಮಗ್ರಿಗಳು :

  • 2 ಕಪ್ ಒಣದ್ರಾಕ್ಷಿ
  • 3 ಕಪ್‌ ನೀರು
  • 2 ಕಪ್‌ ಮೈದಾ ಹಿಟ್ಟು
  • 2 ಮೊಟ್ಟೆ
  • 3 ಟೇಬಲ್‌ಸ್ಪೂನ್ ಲಿಕ್ವಿಡ್ ಸ್ವೀಟನರ್‌
  • 3/4 ಕಪ್ ವೆಜೆಟೇಬಲ್ ಆಯಿಲ್‌
  • 1 ಚಮಚ ವೆನಿಲ್ಲಾ ರಸ
  • 1 ಚಮಚ ಬೇಕಿಂಗ್‌ ಸೋಡಾ
  • 1/2 ಚಮಚ ಉಪ್ಪು
  • ಒಂದೂವರೆ ಚಮಚ ಚಕ್ಕೆ ಪುಡಿ
  • 1/2 ಚಮಚ ನಟ್‌ಮಗ್‌ ಪುಡಿ
  • ಕಪ್‌ ವಾಲ್ನಟ್‌ (ಕತ್ತರಿಸಿದ್ದು)
  • 1 ಕಪ್‌ ಸಿಹಿರಹಿತ ಆ್ಯಪಲ್ ಸಾಸ್‌

ಒಂದು ಸಾಸ್‌ ಪ್ಯಾನ್‌ಗೆ ದ್ರಾಕ್ಷಿ ಮತ್ತು ನೀರು ಹಾಕಿ ಕುದಿಸಿ, ದ್ರಾಕ್ಷಿ, ನೀರನ್ನು ಸಂಪೂರ್ಣವಾಗಿ ಹೀರಿಕೊಳ್ಳುವವರೆಗೆ ಕುದಿಸಿ, ನಂತರ ತಣ್ಣಗಾಗಲು ಬಿಡಿ. ಮೊಟ್ಟೆ, ಆ್ಯಪಲ್ ಸಾಸ್, ವೆಜೆಟೇಬಲ್ ಆಯಿಲ್, ವೆನಿಲ್ಲಾ, ಲಿಕ್ವಿಡ್ ಸ್ವೀಟನರ್‌ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಈಗ ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಉಪ್ಪು, ಚಕ್ಕೆ, ನಟ್‌ಮಗ್ ಪುಡಿ ಮಿಕ್ಸ್ ಮಾಡಿ, ಬೀಟರ್‌ ಬಳಸಿ ಮಿಕ್ಸ್ ಮಾಡಿ, ನಂತರ ಬೇಯಿಸಿದ ಒಣದ್ರಾಕ್ಷಿ, ಕತ್ತರಿಸಿದ ನಟ್ಸ್ ಹಾಕಿ ಮಿಕ್ಸ್ ಮಾಡಿ. * ಈ ಮಿಕ್ಸಿಂಗ್‌ ಮಾಡುವಾಗಲೇ ಓವನ್‌ ಅನ್ನು 350 ಡಿಗ್ರಿ (175 ಡಿಗ್ರಿ C)ಗೆ ಬಿಸಿ ಮಾಡಿ ಕೇಕ್‌ನ ಸುರಿಯುವ ಪ್ಯಾನ್‌ಗೆ ಎಣ್ಣೆ ಸವರಿ ಇಡಿ.  ಈಗ ಕೇಕ್‌ ಮಿಶ್ರಣವನ್ನು ಸುರಿದು 1 ಗಂಟೆ ಬೇಯಿಸಿದರೆ ಸುಗರ್‌ಲೆಸ್‌ ಕೇಕ್‌ ರೆಡಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ತೆಲುಗು ಟೈಟಾನ್ಸ್​ಗೆ 8ನೇ ಪಂದ್ಯದಲ್ಲೂ ಸಿಗದ ಜಯ...

Wed Jan 12 , 2022
 ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ 40-22 ಅಂಕಗಳಿಂದ ಗೆಲುವು ಪಡೆಯಿತು. ಸಿದ್ಧಾರ್ಥ್ ದೇಸಾಯಿ ಇಲ್ಲದ ತೆಲುಗು ಟೈಟಾನ್ಸ್ ತಂಡದ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಇಂದು ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು ತೆಲುಗು ಟೈಟಾನ್ಸ್ 22-40 ಅಂಕಗಳ ಭಾರೀ ಅಂತರದಿಂದ ಸೋಲುಂಡಿತು. ರಾಕೇಶ್ ಅವರ ಅಮೋಘ ಆಟದ ನೆರವಿನಿಂದ ಗೆದ್ದ ಗುಜರಾತ್ ಜೈಂಟ್ಸ್ ತಂಡ ಅಂಕ ಪಟ್ಟಿಯಲ್ಲಿ 11ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಂಪ್ ಮಾಡಿದೆ. ಗುಜರಾತ್ ಗೆಲುವಿಗೆ […]

Advertisement

Wordpress Social Share Plugin powered by Ultimatelysocial