ಉದ್ಯೋಗ ತೊರೆದ ಮಹಿಳೆಯರಿಗೆ ಖುಷಿ ಸುದ್ದಿ..! ಈ ಬ್ಯಾಂಕ್ ನೀಡ್ತಿದೆ ಮತ್ತೆ ಕೆಲಸ ಮಾಡುವ ಅವಕಾಶ

 

ಕೆಲಸ ಬಿಟ್ಟಿರುವ ಮಹಿಳೆಯರಿಗೆ ಖುಷಿ ಸುದ್ದಿಯೊಂದಿದೆ. ಕಾರಣಾಂತರಗಳಿಂದ ಕೆಲಸ ಬಿಟ್ಟು ಮನೆಯಲ್ಲಿದ್ದ ಮಹಿಳೆಯರಿಗೆ ಮತ್ತೆ ಕೆಲಸ ಮಾಡುವ ಅವಕಾಶ ಸಿಗ್ತಿದೆ. ಆಕ್ಸಿಸ್ ಬ್ಯಾಂಕ್ ಒಳ್ಳೆ ಅವಕಾಶ ನೀಡ್ತಿದೆ.

ಬ್ಯಾಂಕ್ HouseWorkIsWork ಹೆಸರಿನಲ್ಲಿ ಮನೆಯಲ್ಲಿರುವ ಮಹಿಳೆಯರಿಗೆ ಉದ್ಯೋಗ ನೀಡಲು ಮುಂದಾಗಿದೆ.

ಆ ಮಹಿಳೆಯರು ಈಗ್ಲೂ ಉದ್ಯೋಗ ಮಾಡಲು ಅರ್ಹರು ಎಂಬುದನ್ನು ಅವರಿಗೆ ಮನವರಿಕೆ ಮಾಡಿಸಲು ಹಾಗೂ ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಇದ್ರ ಉದ್ದೇಶವಾಗಿದೆ.

ಆಕ್ಸಿಸ್ ಬ್ಯಾಂಕ್ ನ ಈ ಯೋಜನೆಯಡಿ ಕೆಲಸ ಮಾಡಲು ಮಾನ್ಯತೆ ಪಡೆದ ಸಂಸ್ಥೆ ಅಥವಾ ಕಾಲೇಜಿನಿಂದ ಪದವಿ ಪಡೆದಿರಬೇಕಾಗುತ್ತದೆ. ಉದ್ಯೋಗ ಹುಡುಕುತ್ತಿರುವ ಮಹಿಳೆಯರು ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಒತ್ತಡದಲ್ಲಿ ಮತ್ತು ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸುವ ಸಾಮರ್ಥ್ಯ ಹೊಂದಿರಬೇಕು. ತಂಡದಲ್ಲಿ ಕೆಲಸ ಮಾಡುವ ಆಸಕ್ತಿ ಮತ್ತು ಕೌಶಲ್ಯ ಹೊಂದಿರಬೇಕು. ಆಂಡ್ರಾಯ್ಡ್ ಅಥವಾ ಐಒಎಸ್ ಮೊಬೈಲ್ ಫೋನ್ ಹೊಂದಿರಬೇಕು.

ಬ್ಯಾಂಕ್‌ನ ಈ ಯೋಜನೆಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆಯಂತೆ. ಯೋಜನೆಯಡಿ ಕೆಲಸ ಮಾಡ್ತಿರುವ ಕೆಲ ಮಹಿಳೆಯರು ಪೂರ್ಣ ಸಮಯ ಮತ್ತು ಬ್ಯಾಂಕ್ ಶಾಖೆಗಳಲ್ಲಿ ಕೆಲಸ ಮಾಡಲು ಆಸಕ್ತಿ ತೋರಿದ್ದಾರಂತೆ. ಇದುವರೆಗೆ 3 ಸಾವಿರಕ್ಕೂ ಹೆಚ್ಚು ರೆಸ್ಯೂಮ್ ಗಳು ಬಂದಿವೆಯಂತೆ. ಆಕ್ಸಿಸ್ ಬ್ಯಾಂಕ್ , ಉದ್ಯೋಗಿಗಳ ಉದ್ಯೋಗ, ಕೌಶಲ್ಯ ಮತ್ತು ಅನುಭವದ ಆಧಾರದ ಮೇಲೆ ಸಂಬಳವನ್ನು ನಿಗದಿಪಡಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐ.ಟಿ., ಬ್ಯಾಂಕಿಂಗ್ ಷೇರು ಗಳಿಕೆ: ಸೆನ್ಸೆಕ್‌ 936 ಅಂಶ ಜಿಗಿತ

Tue Mar 15 , 2022
ಮುಂಬೈ: ಬ್ಯಾಂಕಿಂಗ್‌ ಮತ್ತು ಐ.ಟಿ. ವಲಯದ ಷೇರುಗಳ ಉತ್ತಮ ಗಳಿಕೆಯಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಸೂಚ್ಯಂಕಗಳು ಏರಿಕೆ ಕಂಡವು. ಕದನ ವಿರಾಮ ಘೋಷಣೆ ಕುರಿತಾಗಿ ರಷ್ಯಾ ಮತ್ತು ಉಕ್ರೇನ್‌ ಮಧ್ಯೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆಯಿಂದಾಗಿ ಕಚ್ಚಾ ತೈಲ ದರ ಇಳಿಕೆ ಕಂಡಿದೆ. ಇದು ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟಿಗೆ ಕಾರವಾಗಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 936 ಅಂಶ ಜಿಗಿತ ಕಂಡು 56,486 ಅಂಶಗಳಿಗೆ ತಲುಪಿತು. ಬಿಎಸ್‌ಇ […]

Advertisement

Wordpress Social Share Plugin powered by Ultimatelysocial