ಉಕ್ರೇನ್‌ನಿಂದ ರಕ್ಷಣೆ – ಮಗುವಿಗೆ ‘ಗಂಗಾ’ ಹೆಸರಿಡಲು ನಿರ್ಧರಿಸಿದ ಕೇರಳದ ವ್ಯಕ್ತಿ

ಕೈವ್: ಕೈವ್‌ನಲ್ಲಿ ಸಂಕಷ್ಟದಲ್ಲಿದ್ದು, ಪ್ರಸ್ತುತ ತುಂಬು ಗರ್ಭಿಣಿ ಪತ್ನಿಯೊಂದಿಗೆ ಪೋಲೆಂಡ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಸ್ಥಾಪಿಸಲಾದ ಆಶ್ರಯ ಕೊಠಡಿಯಲ್ಲಿ ತಂಗಿರುವ ಕೇರಳದ ವ್ಯಕ್ತಿಯೊಬ್ಬರು ತಮ್ಮ ಮಗುವಿಗೆ ‘ಗಂಗಾ’ ಎಂದು ಹೆಸರಿಸಲು ನಿರ್ಧರಿಸಿದ್ದಾರೆ.ಕೇರಳ ಮೂಲದ ಅಭಿಜಿತ್ ಅವರೇ ಮಗುವಿಗೆ ಈ ಹೆಸರಿಡಲು ನಿರ್ಧರಿಸಿದ ವ್ಯಕ್ತಿ. ತನ್ನ ಪತ್ನಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಪ್ರಸ್ತುತ ಪೋಲೆಂಡ್‌ನ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನನ್ನ ಮಗು ಬರುವ ನಿರೀಕ್ಷಿತ ಸಮಯ ಮಾರ್ಚ್ 26. ರಕ್ಷಣಾ ಕಾರ್ಯಾಚರಣೆಯ ‘ಗಂಗಾ’ ಹೆಸರನ್ನೇ ಮಗುವಿಗೆ ಇಡಲು ನಿರ್ಧರಿಸಲಾಗಿದೆ ಎಂದು ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

ಅಭಿಜಿತ್ ಉಕ್ರೇನ್ ನ ಕೈವ್ ನಲ್ಲಿ ಸಣ್ಣ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ‘ಕೈವ್‌ನಲ್ಲಿ ಸಿಲುಕಿಕೊಂಡಾಗ ಆಪರೇಷನ್ ಗಂಗಾ ಅಡಿಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಸಹಾಯದಿಂದ ರಕ್ಷಣೆ ದೊರೆತು ಪತ್ನಿಯೊಂದಿಗೆ ಪೋಲೆಂಡ್‌ಗೆ ಬಂದಿದ್ದೇನೆ. ಅಧಿಕಾರಿಗಳಿಗೆ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದಗಳು,’ ಎಂದು ಅಭಿಜಿತ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅತಿಯಾಗಿ ಪ್ರೋಟೀನ್ ಸೇವಿಸಿದರೆ ತೊಂದರೆ ತಪ್ಪಿದ್ದಲ್ಲ! ಏನೆಲ್ಲ ಸಮಸ್ಯೆ ಆಗುತ್ತೆ?

Sat Mar 5 , 2022
ಒಬ್ಬ ಮನುಷ್ಯ ಸಾಮಾನ್ಯವಾಗಿ ಅವನ ದೇಹದ ತೂಕಕ್ಕೆ ಪ್ರತಿ ಕಿಲೋಗೆ 0.8 ಗ್ರಾಂ ಪ್ರೋಟೀನ್ (Protein) ತಿನ್ನಬೇಕು ಅಂದು ವೈದ್ಯರು (Doctor) ಹೇಳುವುದನ್ನು ಕೇಳಿರುತ್ತೇವೆ. ಆರೋಗ್ಯಕರವಾಗಿರಲು ಮತ್ತು ಸದೃಢವಾಗಿರಲು (Good Health) ಪ್ರಯತ್ನಿಸುತ್ತಿರುವ ಎಲ್ಲರಿಗೂ ಇದು ಅತ್ಯಗತ್ಯ. ನೀವು ನಿಮ್ಮ ದೇಹದ ತೂಕ (Body Weight) ಕಡಿಮೆ ಮಾಡಿಕೊಳ್ಳುತ್ತಿದ್ದರೆ (Reduce Weight) ಮತ್ತು ನಿಮ್ಮ ಸ್ನಾಯು ದ್ರವ್ಯರಾಶಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ ಇದರ ಪ್ರಮಾಣವು 1.5 ಗ್ರಾಂ ಗಳಿಗೆ ಹೆಚ್ಚಿಸಿಕೊಳ್ಳಬಹುದು. ಅಮೃತವು […]

Advertisement

Wordpress Social Share Plugin powered by Ultimatelysocial