ವಾಕ್ ಸ್ವಾತಂತ್ರ್ಯ ಎಂದರೆ ಬೇರೆ ದೇಶಕ್ಕೆ ಜಿಂದಾಬಾದ್ ಹೇಳುವುದಲ್ಲ: ಸ್ಪೀಕರ್ ಕಾಗೇರಿ

 

ಬೆಂಗಳೂರು : ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ,ವಾಕ್ ಸ್ವಾತಂತ್ರ್ಯ ಎಂದರೆ ಕೆಲವರು ಬೇರೆ ದೇಶಕ್ಕೆ ಜಿಂದಾಬಾದ್ ಹೇಳುವುದಕ್ಕೆ ಬಳಸುತ್ತಾರೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.ವಿಕಾಸಸೌಧದಲ್ಲಿ ನಡೆಯುತ್ತಿರುವ ಎರಡನೇ ದಿನದ ಕಾರ್ಯಾಗಾರದಲ್ಲಿ ಸಂವಿಧಾನ ಅಡಿಯಲ್ಲಿ ಜನರ ನಿರೀಕ್ಷೆ ಹಾಗೂ ಶಾಸಕರ ಜವಾಬ್ದಾರಿ’ ವಿಷಯ ಮಂಡಿಸಿ ಮಾತನಾಡಿದರು.ಡಾ.ಬಿಆರ್. ಅಂಬೇಡ್ಕರ್ ಗೆ ಎಷ್ಟು ಗೌರವ ಸೂಚಿಸಿದರೂ ಕಡಿಮೆಯೇ.ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಠವಾದುದು.ಬೇರೆ ದೇಶಗಳಲ್ಲಿ ಹಲವು ಬಾರಿ ಸಂವಿಧಾನವನ್ನ ಬದಲಾಯಿಸಲಾಗಿದೆ.ಪಾಕಿಸ್ತಾನದಲ್ಲಿ ನಾಲ್ಕು ಭಾರಿ ಬದಲಾಯಿಸಲಾಗಿದೆ. ನಮ್ಮ ದೇಶದಲ್ಲಿ ೭೩ ವರ್ಷವಾದರೂ ಬದಲಾವಣೆ ಮಾಡಿಲ್ಲ ಎಂದು ಹೇಳಿದರು.ನಮ್ಮದು ಅಂತಹ ಶ್ರೇಷ್ಠವಾದ ಸಂವಿಧಾನ.ಚಿಕ್ಕಪುಟ್ಟ ತಿದ್ದುಪಡಿಗಳನ್ನ ಮಾಡಲಾಗಿದೆ.ಆಯಾ ಕಾಲಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಲಾಗಿದೆ.ಭಗವದ್ಗೀತೆ ಶ್ರೇಷ್ಠ ಗ್ರಂಥ.ಅದರಲ್ಲಿ ಸತ್ಯದ ಸಂಗತಿಗಳನ್ನ ತಿಳಿಸುವ ಅಂಶಗಳಿವೆ. ವೇದೋಪನಿಷತ್ ಕೂಡ ಪವಿತ್ರವಾದ ಗ್ರಂಥ. ಅಷ್ಟೇ ಪವಿತ್ರವಾದುದು ನಮ್ಮ ಸಂವಿಧಾನ ಎಂದರು.ನಾವು ಶಾಸಕಾಂಗದವರು. ಎಷ್ಟೇ ಕಾನೂನು ಬದಲಾವಣೆ ಮಾಡಬಹುದು.ಆದರೆ, ಪ್ರಸ್ತಾವನೆ ಬಹಳ ಮುಖ್ಯ. ನಾವು ಪಾಸ್ ಮಾಡಿದ್ರೆ ಸಾಲದು. ಅದು ರಾಜ್ಯಪಾಲರ ಬಳಿ ಹೋಗಬೇಕು. ರಾಜ್ಯಪಾಲರು ಒಪ್ಪಿದ್ರೂ, ಅದು ಅಂತಿಮವಾಗಿ ರಾಷ್ಟ್ರಪತಿ ಬಳಿ ಹೋಗಬೇಕು.ನಮ್ಮ ನ್ಯಾಯಾಂಗ ವ್ಯವಸ್ಥೆ ಉತ್ತಮವಾಗಿದೆ. ನ್ಯಾಯಾಂಗ ತನ್ನದೇ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.ಸ್ವಾತಂತ್ರ ಅಂದ್ರೆ ಸ್ವೇಚ್ಛೆಯಿಂದ ವರ್ತಿಸುವುದಲ್ಲ. ವಾಕ್ ಸ್ವಾತಂತ್ರ್ಯ ಅಂತ ಕೆಲವರು ಬೇರೆ ದೇಶದ ಜಿಂದಾಬಾದ್ ಅಂತಾ ಹೇಳ್ತಾರೆ. ಕಾರ್ಯಕ್ರಮವೊಂದರಲ್ಲಿ ಯುವತಿಯೊಬ್ಬಳು ಪಾಕಿಸ್ತಾನ ಜಿಂದಾಬಾದ್ ಅಂತ ಹೇಳಿದ್ದಳು. ಆಕೆಯನ್ನ ಪೊಲೀಸರು ಬಂಧಿಸಿ ಕರೆದೊಯ್ದರು. ಇದನ್ನ ಕೆಲವರು ಟೀಕಿಸಿದರು.ನಮಗೆ ವಾಕ್ ಸ್ವಾತಂತ್ರ್ಯ ಇಲ್ಲವಾ ಅಂತ ಪ್ರಶ್ನೆ ಮಾಡಿದ್ರು. ನಮ್ಮ ಸಂವಿಧಾನದಲ್ಲಿ ಅದಕ್ಕೆಲ್ಲ ಅವಕಾಶ ಇಲ್ಲ. ವಾಕ್ ಸ್ವಾತಂತ್ರ್ಯ ಅಂತ ಈ ರೀತಿ ಮಾಡಬಾರದು.ಹಾಗೆ ಮಾಡಿದ್ರೆ ಅರಾಜಕತೆ ಉಂಟಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳಲ್ಲಿ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಕೂಡ ಒಂದು ̤

Fri Feb 4 , 2022
  ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳಲ್ಲಿ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಕೂಡ ಒಂದು. ಆದ್ದರಿಂದ ಸರಿಯಾದ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಒಂದು ಅಧ್ಯಯನದ ಪ್ರಕಾರ, ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಕೆಲವು ಹಣ್ಣುಗಳಿವೆ.ಆ ಹಣ್ಣುಗಳು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುತ್ತವೆ, ಇದು ಕೊಬ್ಬನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಸೇರಿಸಲು ಫೈಬರ್-ಭರಿತ ಹಣ್ಣುಗಳನ್ನು ಸೇರಿಸುವ ಬಗ್ಗೆ ತಿಳಿದುಕೊಳ್ಳಲು ಈ ಲೇಖನ ಓದಿ.ಕೊಲೆಸ್ಟ್ರಾಲ್ […]

Advertisement

Wordpress Social Share Plugin powered by Ultimatelysocial