eKYC ಇಲ್ಲದೆ ಖಾತೆಗೆ ಬರುವುದಿಲ್ಲ ಪಿಎಂ ಕಿಸಾನ್ 10ನೇ ಕಂತು, ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿಕೊಳ್ಳಿ

ನವದೆಹಲಿ : ಪಿಎಂ ಕಿಸಾನ್ ಯೋಜನೆಯ (PM Kisan Yojana) ಮುಂದಿನ ಕಂತಿಗಾಗಿ ಕಾಯುತ್ತಿರುವ ದೇಶಾದ್ಯಂತ ಕೋಟ್ಯಂತರ ರೈತರಿಗೆ ಒಳ್ಳೆಯ ಸುದ್ದಿ ಇದೆ. ಶೀಘ್ರದಲ್ಲೇ ಯೋಜನೆಯ 10 ನೇ ಕಂತು (PM Kisan 10th Installment) ಬಿಡುಗಡೆಯಾಗಲಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಕಂತು ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಇದರ ಸಂದೇಶವನ್ನು ಫಲಾನುಭವಿಗಳಿಗೂ ರವಾನಿಸಲಾಗಿದೆ. ಜನವರಿ 1 ರಂದು ಪ್ರಧಾನಿ ಮೋದಿ ರೈತರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಲಿದ್ದಾರೆ.

ಈ ಮಧ್ಯೆ, ಈ ಯೋಜನೆಯಡಿಯಲ್ಲಿ ರೈತರು ಇ-ಕೆವೈಸಿ (eKYC) ಮಾಡುವುದು ಕಡ್ಡಾಯವಾಗಿದೆ ಎಂಬ ಹೊಸ ಮಾಹಿತಿ ಹೊರಬಿದ್ದಿದೆ. ವಂಚನೆ ತಡೆಯಲು ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಹೀಗಿರುವಾಗ, ಜನವರಿ 1 ರಂದು ಖಾತೆಗೆ 2000 ರೂಪಾಯಿಗಳ ಕಂತು ಬರುತ್ತದೆಯೇ, ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ.

ಸ್ಟೇಟಸ್ ನಲ್ಲಿ ಹೀಗೆ ಬರೆದಿದ್ದರೆ ಮಾತ್ರ ಹಣ ಬರುತ್ತದೆ :
ಕಿಸಾನ್ ಸಮ್ಮಾನ್ ನಿಧಿಯ  ಹಣ ನಿಮ್ಮ ಖಾತೆಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕಾದರೆ, ನಿಮ್ಮ ಸ್ಟೇಟಸ್ ಅನ್ನು ಪರಿಶೀಲಿಸಬೇಕು. ಸ್ಟೇಟಸ್‌ನಲ್ಲಿ FTO ಬರೆದಿದ್ದರೆ ಅಥವಾ FTO will be generated ಎಂದು ಬರೆದಿದ್ದರೆ, 10ನೇ ಕಂತಿನ ಹಣ ಖಂಡಿತವಾಗಿಯೂ ನಿಮ್ಮ ಖಾತೆ ಸೇರುತ್ತದೆ. ನಿಮ್ಮ ಸ್ಟೇಟಸ್ ನಲ್ಲಿ ಈ ರೀತಿ ಬರೆದಿರುವುದು ಕಂಡು ಬರದಿದ್ದರೆ, ಸರ್ಕಾರವು ನೀಡಿದ ಹೊಸ ಪಟ್ಟಿಯನ್ನು ಪರಿಶೀಲಿಸಬಹುದು.

ನಿಮ್ಮ ಕಂತಿನ ಸ್ಟೇಟಸ್ ಪರಿಶೀಲಿಸಿ :
ನೀವು ‘ಪಿಎಂ ಕಿಸಾನ್’ ಯೋಜನೆಗೆ ನೋಂದಾಯಿಸಿದ್ದರೆ, ಈ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವು ಪರಿಶೀಲಿಸಬಹುದು. ಇಲ್ಲಿ ನೀಡಲಾದ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ನೀವು ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸುಲಭವಾಗಿ ಪರಿಶೀಲಿಸಬಹುದು.

ಈ ರೀತಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ :
1. ಇದಕ್ಕಾಗಿ, ಮೊದಲು ನೀವು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmkisan.gov.in ಗೆ ಭೇಟಿ ನೀಡಿ.
2. ಈಗ ಅದರ ಮುಖಪುಟದಲ್ಲಿ Farmers Corner ಆಯ್ಕೆ ಕಾಣಿಸುತ್ತದೆ .
3. Farmers Corner ವಿಭಾಗದಲ್ಲಿ, Beneficiaries List ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಈಗ ನೀವು ಡ್ರಾಪ್ ಡೌನ್ ಪಟ್ಟಿಯಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
5. ಇದರ ನಂತರ ನೀವು ‘Get Report’ ಮೇಲೆ ಕ್ಲಿಕ್ ಮಾಡಿ.
6. ಇದರ ನಂತರ ಫಲಾನುಭವಿಗಳ ಸಂಪೂರ್ಣ ಪಟ್ಟಿ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಇದನ್ನೂ ಓದಿ : New Pension System: ಪ್ರತಿ ತಿಂಗಳು 50 ಸಾವಿರ ರೂಪಾಯಿ ಪಿಂಚಣಿ ಸಿಗಬೇಕೆಂದರೆ ಈ ಸಣ್ಣ ಕೆಲಸ ಮಾಡಿ

ನಿಮ್ಮ ಕಂತು ಸ್ಟೇಟಸ್ ಪರಿಶೀಲಿಸಿ :
1. ನಿಮ್ಮ ಕಂತಿನ ಸ್ಟೇಟಸ್ ನೋಡಲು, ಮೊದಲು PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ.
2. ಈಗ ಬಲಭಾಗದಲ್ಲಿರುವ Farmers Corner ಮೇಲೆ ಕ್ಲಿಕ್ ಮಾಡಿ.
3. ಇದರ ನಂತರ Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಈಗ ಹೊಸ ಪುಟ ತೆರೆದುಕೊಳ್ಳುತ್ತದೆ.
5. ಇಲ್ಲಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಇದರ ನಂತರ ನಿಮ್ಮ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಂದಿ ಗಿರಿಧಾಮ ಬೆಟ್ಟದಲ್ಲಿ ಹೊಸ ವರ್ಷ ಸಂಭ್ರಮದ ಆಚರಣೆ

Fri Dec 24 , 2021
ಹೊಸ ವರ್ಷ ದಿನದ ಪ್ರಯುಕ್ತವಾಗಿ ಪ್ರಸಿದ್ದವಾದ  ನಂದಿಗಿರಿಧಾಮಕ್ಕೆ  ಪ್ರವಾಸಿಗರು ಭೇಟಿ ನೀಡುತ್ತಿದ್ದಾರು  ಪ್ರವಾಸಿಗರು ಬಂದು ಮೇಜು ಮಸ್ತಿಯಿಂದ ಹರುಷದಿಂದ  ಹೊಸ ವರ್ಷವನ್ನು ಬರೆಮಾಡಿಕೊಳ್ಳುತ್ತಿದ್ದಾರು ಅಲ್ಲಿಗೆ ಯುವಪ್ರೇಮಿಗಳುಕೂಡ ಬರುತ್ತಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ  ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ  ಜನವರಿ 1 ರಿಂದ  ಹೊಸವರ್ಷದ ದಿನಾಚರಣೆ ಸಂಬಂಧವಾಗಿರುವ  ಹಲವಾರು ಇನ್ನಿತರೆ ಜಿಲ್ಲೆಗಳಿಂದ ಸಾವಿರಾರು ಜನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ಸಾಧ್ಯತೆ ಇರುವುದರಿಂದ ಕೋವಿಡ್‌ -19 ರೂಪಾಂತರಿ ಓಮಿಕ್ರಾನ್‌ ಸಾಂಕ್ರಾಮಿಕ ರೋಗ ಹರಡುವ […]

Advertisement

Wordpress Social Share Plugin powered by Ultimatelysocial