ರಾಧಿಕಾ-ಯಶ್​ಗಾಗಿ ಸಾಂಟಾ ಕ್ಲಾಸ್​ ಆದ ಯಥರ್ವ್​​; ಕ್ಯೂಟ್​ ಆಗಿ ನಕ್ಕ ಆಯ್ರಾ

ಯಶ್​ ಹಾಗೂ ರಾಧಿಕಾ ಪಂಡಿತ್​ ಮನೆಯಲ್ಲಿ ಚಿಕ್ಕದಾಗಿ ಕ್ರಿಸ್​ಮಸ್​ ಟ್ರೀ ಒಂದನ್ನು ಇಡಲಾಗಿದೆ. ಈ ಮರಕ್ಕೆ ಚೆಂದದ ಅಲಂಕಾರ ಮಾಡಲಾಗಿದೆ. ಈ ಫೋಟೋಗೆ ರಾಧಿಕಾ ಚೆಂದದ ಕ್ಯಾಪ್ಶನ್​ ನೀಡಿದ್ದಾರೆ.ಇಡೀ ವಿಶ್ವಾದ್ಯಂತ ಕ್ರಿಸ್​ಮಸ್​ ಆಚರಣೆ ಜೋರಾಗಿ ನಡೆದಿದೆ.

ಕೊವಿಡ್​ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿರುವುದರಿಂದ ಕೆಲ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಈ ಹಬ್ಬ ಆಚರಣೆ ಮಾಡಲಾಗಿದೆ. ಕೇವಲ ಕ್ರೈಸ್ತ ಧರ್ಮದವರು ಮಾತ್ರವಲ್ಲದೆ, ಹಿಂದು ಹಾಗೂ ಮುಸ್ಲಿಂ ಸಮುದಾಯದವರೂ ಈ ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಕ್ರಿಸ್​ಮಸ್​ ಟ್ರೀ ಇಟ್ಟು, ಕೇಕ್​ ಕತ್ತರಿಸಿ ಹಬ್ಬ ಮಾಡಲಾಗಿದೆ. ಕೆಲ ಸೆಲೆಬ್ರಿಟಿಗಳ ಮನೆಯಲ್ಲೂ ಕ್ರಿಸ್​ಮಸ್​​ಅನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಈ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಲಾಗುತ್ತಿದೆ. ಇದಕ್ಕೆ ರಾಧಿಕಾ ಪಂಡಿತ್​ ಹಾಗೂ ಯಶ್​ ಕುಟುಂಬ ಕೂಡ ಹೊರತಾಗಿಲ್ಲ. ಮಕ್ಕಳಾದ ಆಯ್ರಾ ಹಾಗೂ ಯಥರ್ವ್​ ಜತೆ ಸೇರಿ ಡಿಸೆಂಬರ್​ 25ರಂದು ಈ ಜೋಡಿ ಹಬ್ಬವನ್ನು ಆಚರಿಸಿದೆ. ಈ ಫೋಟೋಗಳು ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಯಶ್​ ಹಾಗೂ ರಾಧಿಕಾ ಪಂಡಿತ್​ ಮನೆಯಲ್ಲಿ ಚಿಕ್ಕದಾಗಿ ಕ್ರಿಸ್​ಮಸ್​ ಟ್ರೀ ಒಂದನ್ನು ಇಡಲಾಗಿದೆ. ಈ ಮರಕ್ಕೆ ಚೆಂದದ ಅಲಂಕಾರ ಮಾಡಲಾಗಿದೆ. ಈ ಫೋಟೋಗೆ ಕ್ಯಾಪ್ಶನ್​ ನೀಡಿರುವ ರಾಧಿಕಾ ಪಂಡಿತ್​, ‘ನಮ್ಮ ಮನೆಯಲ್ಲಿ ಸಾಂಟಾ ಹಸಿರು ಉಡುಗೆ ತೊಟ್ಟಿದ್ದಾನೆ. ಮೇರಿ ಕ್ರಿಸ್​ಮಸ್​’ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಯಥರ್ವ್​ ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದಾರೆ.

ಇದಕ್ಕೂ ಮೊದಲು ಸ್ಟೇಟಸ್​ನಲ್ಲಿ ಕೆಲ ಫೋಟೋಗಳನ್ನು ರಾಧಿಕಾ ಪಂಡಿತ್​ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಆಯ್ರಾ ಹಾಗೂ ಯಥರ್ವ್​ ಸಾಂಟಾ ಕ್ಲಾಸ್​ ಟೋಪಿ ಧರಿಸಿದ್ದಾರೆ. ಈ ಫೋಟೋಗಳ ಸ್ಕ್ರೀನ್​ಶಾಟ್​ಗಳನ್ನು ತೆಗೆದುಕೊಂಡಿರುವ ಅಭಿಮಾನಿಗಳು ಅದನ್ನು ಎಲ್ಲ ಕಡೆಗಳಲ್ಲಿ ಹಂಚುವ ಕೆಲಸ ಮಾಡುತ್ತಿದ್ದಾರೆ.

ರಾಧಿಕಾ ಪಂಡಿತ್​ ನಟನೆಯಿಂದ ದೂರ ಉಳಿದಿದ್ದಾರೆ. ಆಗೊಂದು ಈಗೊಂದು ಪೋಸ್ಟ್​ ಹಾಕುವ ಮೂಲಕ ಅಭಿಮಾನಿಗಳ ಜತೆ ರಾಧಿಕಾ ಪಂಡಿತ್​ ಸಂಪರ್ಕದಲ್ಲಿದ್ದಾರೆ. ಇನ್ನು, ರಾಧಿಕಾ ಕೊನೆಯದಾಗಿ ಕಾಣಿಸಿಕೊಂಡಿದ್ದು 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮಿ ಪುರಾಣ’ ಚಿತ್ರದಲ್ಲಿ. ಈ ಸಿನಿಮಾ ತೆರೆಗೆ ಬಂದ ನಂತರದಲ್ಲಿ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಇನ್ನು, ಯಶ್​ ‘ಕೆಜಿಎಫ್​ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಸಂಜಯ್​ ದತ್​ ಅಧೀರನಾಗಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್​ ತಿಂಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಡುಗೆಗೆ ಬಳಸೋ ಸೋಯಾಬೀನ್ ಮತ್ತು ಕಚ್ಚಾ ಪಾಮೋಲಿನ್ ತೈಲ ಬೆಲೆ ಇಳಿಕೆ

Sun Dec 26 , 2021
ನವದೆಹಲಿ : ದೇಶದಲ್ಲಿ ಖಾದ್ಯ ತೈಲಗಳ ಬೆಲೆಗಳ ಏರಿಕೆಯನ್ನ ತಡೆಯಲು, ಎಲ್ಲಾ ಸಂಸ್ಕರಿಸಿದ ತೈಲಗಳ ಆಮದು ಸುಂಕವನ್ನ ಕಡಿತಗೊಳಿಸಲಾಗಿದೆ. ಅದ್ರಂತೆ, ಕಳೆದ ವಾರ ದೇಶದ ಪ್ರಮುಖ ತೈಲ-ಎಣ್ಣೆಕಾಳು ಮಾರುಕಟ್ಟೆಗಳಲ್ಲಿ ಸೋಯಾಬೀನ್ ತೈಲದ ಬೆಲೆ ಕುಸಿದಿದೆ. ಕಳೆದ ವಾರಕ್ಕೆ ಹೋಲಿಸಿದ್ರೆ, ಈ ವಾರ ಸೋಯಾಬೀನ್ ಬೆಲೆ ಸುಧಾರಣೆಯೊಂದಿಗೆ ಮುಚ್ಚಲ್ಪಟ್ಟಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಕೋಳಿ ವ್ಯಾಪಾರದ ಪ್ರತಿನಿಧಿಗಳು DOC ಲಭ್ಯತೆಯನ್ನ ಹೆಚ್ಚಿಸಲು ದೀರ್ಘಕಾಲದವರೆಗೆ ಒತ್ತಾಯಿಸುತ್ತಿದ್ದು, ಇದನ್ನ ಗಮನದಲ್ಲಿಟ್ಟುಕೊಂಡು DOCನಲ್ಲಿ ಸ್ಟಾಕ್ ಇರಿಸಿಕೊಳ್ಳಲು […]

Advertisement

Wordpress Social Share Plugin powered by Ultimatelysocial