23 ನೇ ಕರ್ನಾಟಕ ರಾಜ್ಯ ಸಮ್ಮೇಳನಕ್ಕೆ ಇಂದು ಚಾಲನೆ ನೀಡಿದ್ದಾರೆ,,,,

ಮೋದಿ ಆಡಳಿತ ಹಾಗೂ ಕಾರ್ಮಿಕರ, ಬಡವರ, ರೈತರ ವಿರುದ್ಧ ರೂಪಿಸುತ್ತಿರುವ ಕಾಯ್ದೆ ಹಾಗೂ ಕಾರ್ಪೊರೇಟ್ ಬಂಡವಾಳ ಪರ ರೂಪಿಸುತ್ತಿರುವ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಕೊಪ್ಪಳ ಗಂಗಾವತಿಯಲ್ಲಿ 23 ನೇ ಕರ್ನಾಟಕ ರಾಜ್ಯ ಸಮ್ಮೇಳನಕ್ಕೆ ಇಂದು ಚಾಲನೆಯನ್ನು ನೀಡಲಾಯಿತು.ಕಾರ್ಯಕ್ರಮವನ್ನು ನವದೆಹಲಿಯ ಪೊಲಿಟ್ ಬ್ಯೂರೋ ಸದಸ್ಯ ಕಾಂ.ಪ್ರಕಾಶ್ ಕಾರಟ್ ಉದ್ಘಾಟಿಸಿದರು.ಸಮ್ಮೇಳನದಲ್ಲಿ ಕಾರ್ಮಿಕ ಹಕ್ಕುಗಳ ಬಗ್ಗೆ ಚರ್ಚಿಸಲಾಯಿತು.ದೇಶದಲ್ಲಿ 2 ನೇ ಬಾರಿ ಮೋದಿ ಸರ್ಕಾರ ಆಡಳಿತಕ್ಕೆ ಬಂದಿದ್ದು ಕಾರ್ಮಿಕರ ಹಕ್ಕುಗಳನ್ನು ದಮನ ಮಾಡುತ್ತಿದೆ ಅಂತಾ ಗಂಭೀರ ಆರೋಪಗಳನ್ನು ಮಾಡಲಾಯಿತು. ಭದ್ರತಾ,ಸರಕ್ಷ,ಆರೋಗ್ಯ, ಕೈಗಾರಿಕ ಸಂಹಿತಿಗಳನ್ನು ಕಾರ್ಮಿಕರ ವಿರೋಧಿಯಾಗಿ ರೂಪಿಸಿದೆ.ಇದರಿಂದ ಕಾರ್ಮಿಕರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಸಿಗದಂತೆ ಮೋದಿ ಸರ್ಕಾರ ಬಂಡವಾಳ ಪರ ಕೆಲಸ ಮಾಡುತ್ತಿದೆ.ಇಷ್ಟೆ ಅಲ್ದೆ ಕೃಷಿ ಕಾಯ್ದೆಗಳನ್ನು ರೂಪಿಸಿ ರೈತರು ತಮ್ಮ ಬೆಳೆಯನ್ನು ಸ್ವಾತಂತ್ರ್ಯವಾಗಿ ಮಾರದಂತೆ, ಮಾರುಕಟ್ಟೆ ರೂಪಿಸಿಕೊಳ್ಳದಂತ ಸ್ಥಿತಿಯನ್ನು ತರಲು ಹೊರಟಿದೆ. ಒಟ್ಟಾರೆ ರೈತ, ಕಾರ್ಮಿಕ, ದಲಿತ ವಿರೋಧಿಯಾಗಿರುವ ಮೋದಿ ಸರ್ಕಾರ ಬಡವರ, ರೈತರ, ಕಾರ್ಮಿಕ ಹಕ್ಕುಗಳನ್ನು ದಮನ ಮಾಡಲು ಹೊರಟಿದ್ದು, ದುಡಿಯುವ ವರ್ಗದ ವಿರೋಧಿಯಾಗಿದೆ ಅಂತಾ ಕೇಂದ್ರ ಸರ್ಕಾರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಇನ್‌ಸ್ಟಾಗ್ರಾಮ್‌ನಲ್ಲಿ ಡಿಲೀಟ್‌ ಆದ ಫೋಟೋಗಳನ್ನು ಮರಳಿ ಪಡೆಯಲು ಹೀಗೆ ಮಾಡಿ?

Sun Jan 2 , 2022
ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದೆನಿಸಿಕೊಂಡಿದೆ. ತನ್ನ ಆಕರ್ಷಕ ಫೀಚರ್ಸ್‌ಗಳ ಮೂಲಕ ಜನಪ್ರಿಯ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಹೆಚ್ಚಿನ ಪ್ರಮಾಣದಲ್ಲಿ ಬಳಕೆದಾರರನ್ನು ಸೆಳೆಯುತ್ತಿದೆ. ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ ಕೂಡ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇನ್ನು ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ ಫೋಟೋ ಡಿಲೀಟ್‌ ಆಗಿದ್ದರೆ ಅದನ್ನು ಮರಳಿ ಪಡೆಯುವ ಅವಕಾಶ ಕೂಡ ಇದೆ. ಇನ್‌ಸ್ಟಾಗ್ರಾಮ್‌;ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ […]

Advertisement

Wordpress Social Share Plugin powered by Ultimatelysocial