ಹಾವೇರಿ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ವಿವಿಧ ಕರ್ತವ್ಯ ನಿಭಾವಣೆಗೆ ನೋಡಲ್ ಅಧಿಕಾರಿಗಳನ್ನಾಗಿ ಸಂಜಯ ಶೆಟ್ಟೆಣ್ಣಯವರನ ನೇಮಿಸಿದರು. ಸಭೆ ಬಳಿಕ ಮತನಾಡಿದ ಅವರು ಚುನಾವಣಾ ಕರ್ತವ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಇಂದಿನಿದಲೇ ತಮಗೆ ವಹಿಸಿದ ಜವಾಬ್ದಾರಿಗಳನ್ನು ನಿಭಾಯಿಸಲು ಕಾರ್ಯಪ್ರವೃತ್ತರಾಗಿ ಎಂದು ಸೂಚನೆ ನೀಡಿದರು.ಹಾನಗಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಹಾಗೂ ರಾಜಕೀಯೇತರ ಕಾರ್ಯಕ್ರಮ ನಡೆದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಹಾಜರಿರಬೇಕು. ದೂರು ಬಂದ ಸ್ಥಳದಲ್ಲಿ ವಿಳಂಬವಿಲ್ಲದೆ ಹಾಜರಾಗಬೇಕು. ಕೋವಿಡ್ ನಿಯಮಗಳ ಉಲ್ಲಂಘನೆಯಾಗದಂತೆ ತೀವ್ರ ನಿಗಾವಹಿಸಬೇಕು. ದಿನದ 24 ತಾಸು ತೀವ್ರ ಎಚ್ಚರಿಂದ ಕಾರ್ಯನಿರ್ವಹಿಸಬೇಕು ಎಂದು ಚುನಾವಣಾ ನಿಯೋಜಿತ ವಿವಿಧ ತಂಡಗಳ ನೋಡೆಲ್ಅಧಿಕಾರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದ್ದಾರೆ.