ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ ಭಜರಂಗಿ -2 ಸಿನಿಮಾ ಅಕ್ಟೋಬರ್ 29 ರಂದು ತೆರೆ ಕಾಣಲಿದೆ.ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು ಬೆಂಗಳೂರಿನಲ್ಲಿ ಪ್ರಿ ರಿಲೀಸ್ ಇವೆಂಟ್ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಯಶ್ ಮತ್ತು ಪುನೀತ್ ರಾಜ್ ಕುಮಾರ್ ಭಾಗವಹಿಸಲಿದ್ದಾರೆ. ಜಯಣ್ಣ ಬೋಗೇಂದ್ರ ಸಿನಿಮಾ ನಿರ್ಮಾಣ ಮಾಡಿದ್ದು, ಅವರೇ ವಿತರಕರಾಗಿದ್ದಾರೆ. ಕರ್ನಾಟಕದಾದ್ಯಂತ 350 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಭಜರಂಗಿ 2 ತೆಲುಗು ಆವೃತ್ತಿಯೂ ಸುಮಾರು 350-400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಹೊರತಾಗಿ ಕನ್ನಡ ಮತ್ತು ತೆಲುಗು ಆವೃತ್ತಿಗಳು ಭಾರತದಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ. ಸರಿಸುಮಾರು 1000 ಸ್ಕ್ರೀನ್ಗಳಲ್ಲಿ ನಮ್ಮ ಚಿತ್ರವನ್ನು ಬಿಡುಗಡೆ ಮಾಡಲು ನೋಡುತ್ತಿದ್ದೇವೆ ಎಂದು ಜಯಣ್ಣ ಹೇಳುತ್ತಾರೆ.
ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :
https://play.google.com/store/apps/details?id=com.speed.newskannada