ಪವರ್ ಸ್ಟಾರ್ ಅಪ್ಪು ಇನ್ನೂ ನೆನಪು ಮಾತ್ರ. ಕನ್ನಡ ಚಿತ್ರರಂಗದ ಮಗನಂತಿದ್ದ ಅಪ್ಪುನ ಕಳೆದುಕೊಂಡು, ಇಡೀ ಕರ್ನಾಟಕ ಶೋಕಸಾಗರದಲ್ಲಿ ಮುಳುಗಿದೆ. ಪ್ರತಿಯೊಂದು ಮನೆಯಲ್ಲೂ ಸೂತಕದ ವಾತಾವರಣ ಸೃಷ್ಟಿಯಾಗಿದೆ. ಸದಾ ನಗುಮುಖದಿಂದಲೇ ಮಾತನಾಡುತ್ತಿದ್ದ, ಅಪ್ಪು ಅವರ ನಗು ಮುಖವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಅಂತಿಮ ದರ್ಶನ ಪಡೆದ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಎಲ್ಲಾ ಭಾಷೆಯ ನಟ, ನಟಿಯರು ಆಗಮಿಸಿ ಕೊನೆ ಬಾರಿ ಅಪ್ಪು ದರ್ಶನ ಪಡೆಯುತ್ತಿದ್ದಾರೆ. ಸ್ಯಾಂಡಲ್ವುಡ್ನ ಲ್ಲಿ ಅಪ್ಪು ಬಹುಬೇಡಿಕೆ ನಟ ಆಗಿದ್ದರು, ಅವರು ಮಾಡಿದ ಪ್ರತಿಯೊಂದು ಸಿನಿಮಾ ಕೂಡ ಸೂಪರ್ ಹಿಟ್. ಸೋಲನ್ನೇ ನೋಡಿರದ ಅಪ್ಪು, ಇಂದು ವಿಧಿಯ ಮುಂದೆ ಸೋತು ಸುಮ್ಮನೆ ಮಲಗಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಫ್ಯಾ,ಮಿಲಿ ಪೂರ್ತಿ ಚಿತ್ರಮಂದಿರಕ್ಕೆ ಬಂದು ಅಪ್ಪು ಸಿನಿಮಾವನ್ನು ನೋಡುತ್ತಿದ್ದರು. ಅವರ ಕಾಲ್ ಶೀಟ್ ಪಡೆಯಲು ನಿರ್ಮಾಪಕರು ಕಾದು ಕೂರುತ್ತಿದ್ದರು, ಅಪ್ಪು ಅಗಲಿಕೆಗೂ ಮುನ್ನ ಹಲವಾರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು.
ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :
https://play.google.com/store/apps/details?id=com.speed.newskannada