ಟೋಕಿಯೋ (ಜಪಾನ್): ಅಪಹಾಸ್ಯ ಹಾಗೂ ಟೀಕೆಯ ಕಾರಣದಿಂದಾಗಿ ಜಪಾನ್ ಸರ್ಕಾರವು ಉಚಿತ ಮಾಸ್ಕ್ ವಿತರಣಾ ಕಾರ್ಯವನ್ನು ನಿಲ್ಲಿಸಿದೆ. ಜಪಾನ್ ಪ್ರಧಾನಿ ಶಿಂಜೊ ಅಬೆ ಪ್ರಾರಂಭಿಸಿದ ಉಚಿತ ಮಾಸ್ಕ್ ವಿತರಣಾ ಕಾರ್ಯವನ್ನು ಪ್ರಶ್ನಿಸಲು ಆರಂಭಿಸಿದ ಜನ, “ಅಬೆನೊಮಾಸ್ಕ್” ಎಂದು ಗೇಲಿ ಮಾಡಲು ಪ್ರಾರಂಭಿಸಿದ್ದರು.ಒಬ್ಬರಿಗೆ ಒಂದು ಮಾಸ್ಕ್ ಕೊಡುವ ಬದಲು, ಒಂದು ಮನೆಗೆ ೨ ಮಾಸ್ಕ್ ಕೊಡುವ ಕ್ರಮವನ್ನು ಕೆಲವರು ಪ್ರಶ್ನಿಸಿದರೆ, ಇನ್ನೂ ಕೆಲವರು ಮಾಸ್ಕ್ನ ಗುಣಮಟ್ಟ ಹಾಗೂ ಪರಿಣಾಮವನ್ನು ಅನುಮಾನಿಸಿದರು.ಮಾಸ್ಕ್ಗಳು ಬಟ್ಟೆಯಿಂದ […]

ನವದೆಹಲಿ: ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ವಿವಿಧ ಚಟುವಟಿಕೆಗಳು ಆರಂಭವಾಗಿದ್ದು, ಇಂದೊಂದು ವರವಾಗಿ ಪರಿಣಮಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಜೈವಿಕ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ವರವೊಂದು ಸಾಂಕ್ರಾಮಿಕದ ವೇಷದಲ್ಲಿ ಭಾರತಕ್ಕೆ ಬಂದಿದೆ ಎಂದಿದ್ದಾರೆ.ಭಾರತದಲ್ಲಿ ಸಾಕಷ್ಟು ಚಟುವಟಿಕೆಗಳು ಪ್ರಾರಂಭವಾಗಿವೆ. ನಾವು ಪಿಪಿಇಗಳನ್ನು ತಯಾರಿಸುತ್ತಿದ್ದೇವೆ. ದೇಶದಲ್ಲಿ ನೂರಕ್ಕೂ […]

ಅಸ್ಸಾಂ: ಕೊರೊನಾ ವೈರಸ್ ಹಿನ್ನೆಲೆ ಲಾಕ್‌ಡೌನ್‌ನಿಂದಾಗಿ ಏಷ್ಯಾದ ಅತಿದೊಡ್ಡ ಬಾಳೆಹಣ್ಣಿನ ಮಾರುಕಟ್ಟೆ ಮುಚ್ಚಿರುವುದರಿಂದ ಬಾಳೆಹಣ್ಣು ಉತ್ಪಾದಕರ ಮೇಲೆ ಪರಿಣಾಮ ಬೀರಿದೆ. ಏಷ್ಯಾದ ಅತಿದೊಡ್ಡ ಬಾಳೆಹಣ್ಣು ಮಾರುಕಟ್ಟೆ ಎಂದು ಕರೆಯಲ್ಪಡುವ ಪಶ್ಚಿಮ ಅಸ್ಸಾಂನ ಗೋಲ್ಪಾರ ಜಿಲ್ಲೆಯಲ್ಲಿರುವ ದಾರಂಗಿರಿ ಬಾಳೆಹಣ್ಣು ಮಾರುಕಟ್ಟೆ ಕಳೆದ ಹಲವು ವಾರಗಳಿಂದ ಮುಚ್ಚಿದ್ದು, ಗೋಲ್ಪಾರ ಜಿಲ್ಲೆ ಮತ್ತು ಮೇಘಾಲಯದ ಗಾರೋ ಹಿಲ್ಸ್ ಪ್ರದೇಶದ ಬಾಳೆಹಣ್ಣು ಉತ್ಪಾದಕರ ಮೇಲೆ ಪರಿಣಾಮ ಬೀರಿದೆ.ಗೋಲ್ಪಾರ ಜಿಲ್ಲೆಯಲ್ಲಿ ಸುಮಾರು ೩,೭೦೦ ಹೆಕ್ಟೇರ್ ಭೂಮಿಯಲ್ಲಿ ಬಾಳೆ […]

ಬೀಜಿಂಗ್: ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲು ಬಳಸುವ ಚೀನಾ ನಿರ್ಮಿತ ರ‍್ಯಾಪಿಡ್ ಆಯಂಟಿಬಾಡಿ ಟೆಸ್ಟ್ ಕಿಟ್‌ಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದ್ದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಕೆಲವು ವ್ಯಕ್ತಿಗಳು ಚೀನಾ ಉತ್ಪನ್ನಗಳಿಗೆ ದೋಷಪೂರಿತ ಎಂದು ಹಣೆಪಟ್ಟಿ ಕಟ್ಟುವುದು ಮತ್ತು ಸಮಸ್ಯೆಗಳನ್ನು ಪೂರ್ವಾಗ್ರಹದಿಂದ ನೋಡುವುದು ಅನ್ಯಾಯ ಮತ್ತು ಬೇಜವಾಬ್ದಾರಿಯುತ ಎಂದು ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರೆ ಜಿ ರೋಂಗ್ ಹೇಳಿದ್ದಾರೆ. ಚೀನಾದ […]

ವಾಷಿಂಗ್ಟನ್: ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಅಪಾರ ಪ್ರಮಾಣದ ಸಾವು-ನೋವು, ನಷ್ಟಗಳಿಂದ ಮೊದಲ ಬಾರಿಗೆ ವೈರಸ್ ಹಬ್ಬಿಸಿದ ಚೀನಾ ವಿರುದ್ಧ ತೀವ್ರ ಆಕ್ರೋಶಕ್ಕೀಡಾಗಿರುವ ಅಮೆರಿಕಾ ಚೀನಾ ವಿರುದ್ಧ ತನಿಖೆ ಆರಂಭಿಸುವುದಾಗಿ ಹೇಳಿದೆ. ಕೊರೋನಾ ವೈರಸ್ ಹಬ್ಬಿಸಿದ ಚೀನಾದಿಂದ ೧೪೦ ಶತಕೋಟಿ ಡಾಲರ್ ಪರಿಹಾರವನ್ನು ಜರ್ಮನಿ ಕೇಳಿದರೆ, ಅದಕ್ಕಿಂತಲೂ ದೊಡ್ಡ ಮೊತ್ತದ ಪರಿಹಾರವನ್ನು ಅಮೆರಿಕಾ ಕೇಳಿದೆ.

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈಯಲ್ಲಿ ವ್ಯಾಪಕವಾಗಿ ಕೊರೊನಾ ಸೋಂಕು ಹರಡುತ್ತಿದ್ದು, ಸೋಮವಾರ ಮೂವರು ಪೊಲೀಸರಲ್ಲಿ ಸೋಂಕು ಪತ್ತೆಯಾಗಿತ್ತು. ಆ ಹಿನ್ನೆಲೆಯಲ್ಲಿ, ಕೊರೊನಾ ವೈರಸ್ ಸೋಂಕಿನಿಂದ ರಕ್ಷಣೆ ಒದಗಿಸಲು ೫೫ ವರ್ಷಕ್ಕೆ ಮೇಲ್ಪಟ್ಟ ಪೊಲೀಸರಿಗೆ ರಜೆಯ ಮೇಲೆ ತೆರಳಲು ಸೂಚಿಸಲಾಗಿದೆ. ಇಂದು ಪತ್ತೆಯಾದ ಮೂವರು ಕೊರೊನಾ ಸೋಂಕಿತ ಪೊಲೀಸರು ೫೦ ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ಮುಂಬೈ ಪೋಲಿಸ್ ಅಧಿಕಾರಿ ತಿಳಿಸಿದ್ದಾರೆ. ಇಂದು ಮೂವರು ಮುಂಬೈ ಪೊಲೀಸರಲ್ಲಿ ಕೊರೊನಾ ವೈರಸ್ ಸೋಂಕು […]

ನವದೆಹಲಿ: ರಾಜಧಾನಿ ದೆಹಲಿಯ ನೀತಿ ಆಯೋಗದ ಕಚೇರಿಯಲ್ಲಿ ಅಧಿಕಾರಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಇಡೀ ಕಟ್ಟಡವನ್ನು ಎರಡು ದಿನಗಳ ಮಟ್ಟಿಗೆ ಸೀಲ್ ಡೌನ್ ಮಾಡಲಾಗಿದೆ. ನೀತಿ ಆಯೋಗದ ನಿರ್ದೇಶಕರ ಹಂತದ ಅಧಿಕಾರಿಗೆ ಕೊರೋನಾ ವಕ್ಕರಿಸಿದ್ದು ಇದರಿಂದಾಗಿ ಇಡೀ ಕಚೇರಿಯನ್ನು ಸೀಲ್ ಡೌನ್ ಮಾಡಿ ಸೋಂಕು ನಿವಾರಕ ಕ್ರಿಮಿನಾಶಕ ಸಿಂಪಡಣೆ ಮಾಡಿ ಸ್ವಚ್ಛ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಆಯೋಗದ ಆಡಳಿತಾತ್ಮಕ ವಿಭಾಗದ ಉಪ ಕಾರ್ಯದರ್ಶಿ ಅಜಿತ್ ಕುಮಾರ್ ತಿಳಿಸಿದ್ದಾರೆ.

ಗುವಾಹಟಿ: ಕೋವಿಡ್ ವಿರುದ್ಧ ಹೋರಾಡುತ್ತಿರು ಪತ್ರಕರ್ತರಿಗೆ ಅಸ್ಸಾಂ ರಾಜ್ಯ ಸರ್ಕಾರದಿಂದ ೫೦ಲಕ್ಷ ಜೀವ ವಿಮಾ ನೀಡುತ್ತದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹೇಳಿದರು. ಪತ್ರಕರ್ತರು ತಮ್ಮ ಪ್ರಾಣವನ್ನು ಒತ್ತೆಇಟ್ಟು ಎಲ್ಲರಿಗೂ ಸುದ್ದಿಗಳನ್ನು ಮುಟ್ಟಿಸುತ್ತಾರೆ. ಹಾಗೂ ಕೊರೊನಾಕ್ಕೆ ಸಂಬಂಧಿಸಿದ ವಿಷಯಗಳನ್ನು ಭಿತ್ತರಿಸುತ್ತಾರೆ. ಅವರೇ ನಿಜವಾದ ವೀರರು ಎಂದು ಹೇಳಿದರು. ಅವರಿಗೆ ನಮ್ಮ ಸರ್ಕಾರ ಪ್ರತಿಯೊಬ್ಬರಿಗೂ ೫೦ಲಕ್ಕದ ಜೀವ ವಿಮಾ ನೀಡುತ್ತದೆ ಎಂದು ತಿಳಿಸಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ […]

ಪುಣೆ: ಲಾಕ್‌ಡೌನ್ ನಡುವೆ ಪುಣೆ ಪೊಲೀಸರು ೧೫ ವರ್ಷದ ಹುಡುಗನ ಹುಟ್ಟುಹಬ್ಬ ಆಚರಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವತ್ಸಲ್ ಶರ್ಮಾ ಎನ್ನುವ ಬಾಲಕನ ತಂದೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಅಮೆರಿಕಾದಲ್ಲಿದ್ದಾರೆ. ತಾಂತ್ರಿಕ ಸಮಸ್ಯೆ ಕಾರಣ ತಮ್ಮ ಮಗನನ್ನ ಸಂಪರ್ಕಿಸಲಾಗದೆ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲೂ ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ಪುಣೆ ಪೊಲೀಸರಿಗೆ ಇ-ಮೇಲ್ ಮಾಡಿ, ಮಗನಿಗೆ ಶುಭಾಶಯ ತಿಳಿಸುವಂತೆ ಕೇಳಿಕೊಂಡಿದ್ದರು. ತಂದೆಯ ಕೋರಿಕೆಗೆ ಸ್ಪಂದಿಸಿದ ಪೊಲೀಸರು ಮೊಬೈಲ್ ನಂಬರ್ ಮೂಲಕ ಮನೆಯನ್ನ ಪತ್ತೆ […]

ಮಡಗಾಸ್ಕರ್​ (ಪೂರ್ವ ಆಫ್ರಿಕಾ): ಕೊರೊನಾ ಹಿನ್ನಲೆ ವೈರಸ್ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ. ಆಕಸ್ಮತ್ ಮಾಸ್ಕ್ ಧರಿಸದೇ ಹೊರ ಬಂದ್ರೆ ಕಸಗುಡಿಸೋ ಶಿಕ್ಷೆ ನೀಡಲಾಗುವುದು ಎಂದು ಪೂರ್ವ ಆಫ್ರಿಕ್ ಅಧ್ಯಕ್ಷ ಆಂಡ್ರಿ ರಾಜೋಲಿನಾ ಆದೇಶಿಸಿದ್ದಾರೆ. ರಾಜಧಾನಿ ಅಂಟಾನನರಿವೊದಲ್ಲಿ ಹಾಗೂ ಫಿಯಾನರಾಂಟ್ಸೊವಾ ಮತ್ತು ಟೊಮಾಸಿನಾ ನಗರಗಳಲ್ಲಿ ಮಾಸ್ಕ್​ ಕಡ್ಡಾಯಗೊಳಿಸಿದ್ದಾರೆ. ಪೂರ್ವ ಆಫ್ರಿಕಾದಲ್ಲಿರು ಮಡಗಾಸ್ಕರ್‌ನಲ್ಲಿ ಲಾಕ್​ಡೌನ್​ ಉಲ್ಲಂಘಿಸಿಯೋ ಅಥವಾ ಮಾಸ್ಕ್​ ಧರಿಸದೇ ಹೊರಗೆ ಬಂದವರಿಗೆ  ಕಸದ ಪೊರಕೆಯನ್ನು ಕೊಟ್ಟು ರಸ್ತೆಯನ್ನು ಗುಡಿಸುವ ಕೆಲಸಕ್ಕೆ […]

Advertisement

Wordpress Social Share Plugin powered by Ultimatelysocial